ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ವಸ್ಥರ ಆರೋಗ್ಯ ವಿಚಾರಿಸಿದ ಸಚಿವ

Last Updated 18 ಡಿಸೆಂಬರ್ 2013, 4:55 IST
ಅಕ್ಷರ ಗಾತ್ರ

ಹುಕ್ಕೇರಿ: ತಾಲ್ಲೂಕಿನ ಸುಲ್ತಾನಪುರ ಗ್ರಾಮದ ಜನರು ಕಲುಷಿತ ನೀರು ಸೇವಿಸಿ ಅಸ್ಥವ್ಯಸ್ಥಗೊಂಡು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲೆಗೊಂಡಿರುವ  ರೋಗಿಗಳ ಆರೋಗ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿ ಹೊಳಿ ಮಂಗಳವಾರ ವಿಚಾರಿಸಿದರು.

ನೋಗಿನಹಾಳ ಪಿಎಚ್್ ಸಿ ವ್ಯಾಪ್ತಿಯ ಸುಲ್ತಾನಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯ ಪ್ರದೇಶವನ್ನು ‘ಕಾಲರಾ ಪೀಡಿತ’ ಎಂದು ಘೋಷಿಸಲಾಗಿದೆ ಎಂದು ಸಚಿವರು ಹೇಳಿದರು.  

ಸ್ಥಳದಲ್ಲಿ ಉಪಸ್ಥಿತರಿದ್ದ ತಹಶೀ ಲ್ದಾರ್ ಎಸ್.ಎಸ್.ಬಳ್ಳಾರಿ ಅವರಿಗೆ ಹಿಡಕಲ್‌ ಡ್ಯಾಂ ನಿಂದ ಶುದ್ಧ ಕುಡಿ ಯುವ ನೀರನ್ನು ಪೂರೈಸುವಂತೆ  ಸೂಚಿಸಿದರು. ಚಿಕ್ಕೋಡಿ ಹೆಚ್ಚುವರಿ ಜಿಲ್ಲಾ ವೈದ್ಯಾಧಿಕಾರಿ ವಿ.ಬಿ.ಕುಲಕರ್ಣಿ ಸುಲ್ತಾನಪುರ ಗ್ರಾಮದಲ್ಲಿ ಕೈಗೊಂಡಿ ರುವ ಮುಂಜಾಗ್ರತಾ ಕ್ರಮ , ಇತರೆ ಮಾಹಿತಿಯನ್ನು ಸಚಿವರಿಗೆ ನೀಡಿದರು.

ಘಟನೆ ಇನ್ನಷ್ಟು ಉಲ್ಬಣವಾಗುವ ಮೊದಲೆ ತಾಲ್ಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಂಡು ಜನರಿಗೆ ಚಿಕಿತ್ಸೆ ನೀಡಿರುವ ಕಾರ್ಯವನ್ನು ಸಚಿವರು ಶ್ಲಾಘಿಸಿದರು.

ಗ್ರಾಮದಲ್ಲಿ ನೀರಿನ ಪೈಪ್ ಸರಿಯಾಗಿ ನಿರ್ವಹಣೆ ಮಾಡದೆ ಇರುವ ನೀರಾವರಿ ಇಲಾಖೆ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಕೊಳ್ಳಲು ಜಿ.ಪಂ.ಸಿಇಒ ಅವರಿಗೆ ಭೇಟಿ ನೀಡಲು ಸೂಚಿಸುವದಾಗಿ ಹೇಳಿದ ಸಚಿವರು  ಕುಡಿಯುವ ನೀರಿನ ಪೈಪ್ ಲೈನಗಳು ಕೊಳಚೆ ಪ್ರದೇಶದಲ್ಲಿ ಅಥವಾ ಇನ್ನೀತರ ಗಲೀಜು ಸ್ಥಳಗಳಲ್ಲಿ ಹಾಯ್ದು ಹೋಗಿದ್ದರೆ, ತಕ್ಷಣ ಅವುಗಳನ್ನು ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

ತಾಲ್ಲೂಕು ವೈದ್ಯಾಧಿಕಾರಿ ಡಾ. ಎಸ್.ವಿ.ಮುನ್ಯಾಳ, ಮುಖ್ಯ ವೈದ್ಯಾಧಿ ಕಾರಿ ಡಾ.ಬಿ.ಎಸ್. ಮದಬಾವಿ, ಡಾ. ಎಂ.ಸಿ.ವಿಜಾಪುರೆ, ಡಾ.ಉದಯ ಕುಡಚಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಕರಾಳೆ, ಇಲಿಯಾಸ್ ಇನಾಂದಾರ್, ಸಲಿಂ ಕಳಾವಂತ, ರಾಜು ಸಿದ್ನಾಳ, ಇರ್ಷಾದ್ ಮೊಕಾಶಿ, ಮಲಗೌಡ ಪಾಟೀಲ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT