ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾದ್ ಪದತ್ಯಾಗ ಮಾಡಲಿ

Last Updated 27 ಜುಲೈ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಸಿರಿಯಾ ಮೇಲಿನ ಹಿಡಿತ ಕಳೆದುಕೊಳ್ಳುತ್ತಿರುವ ಅಧ್ಯಕ್ಷ ಬಶಾರ್ ಅಲ್-ಅಸ್ಸಾದ್ ಖುದ್ದಾಗಿ ಅಧಿಕಾರದಿಂದ ನಿರ್ಗಮಿಸಬೇಕು ಎಂದು ಅಮೆರಿಕ ಆಗ್ರಹಿಸಿದೆ.

`ಅಸ್ಸಾದ್ ಅಧಿಕಾರದಿಂದ ತೊಲಗಬೇಕು. ಪರಿಸ್ಥಿತಿಯನ್ನು ಅವರು ಅರಿತುಕೊಳ್ಳಬೇಕು. ಅವರು ಸ್ವತಃ ನೋಡುತ್ತಿರುವಂತೆ ಸಿರಿಯಾ ಮೇಲಿನ ಅವರ ಹಿಡಿತ ಕೈತಪ್ಪುತ್ತಿದೆ. ಹಿಂಸಾಚಾರ ಎಲ್ಲದ್ದಕ್ಕೂ ಪರಿಹಾರವಲ್ಲ. ಆದಕಾರಣ ಅವರು ಕೂಡಲೇ ಪದತ್ಯಾಗ ಮಾಡಬೇಕು~ ಎಂದು ಅಮೆರಿಕ ವಿದೇಶಾಂಗ ನಾಗರಿಕ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ ಮೈಕ್ ಹ್ಯಾಮರ್ ಹೇಳಿದ್ದಾರೆ.

ಹೆಲಿಕಾಪ್ಟರ್ ದಾಳಿಗೆ ಬಲಿ
ಬೈರೂತ್ (ಎಎಫ್‌ಪಿ):
ಸಿರಿಯಾದಲ್ಲಿ ಸರ್ಕಾರ ವಿರೋಧಿ ಬಂಡುಕೋರರ ಮೇಲೆ ಸೇನೆ ನಡೆಸಿದ ಹೆಲಿಕಾಪ್ಟರ್ ದಾಳಿಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಅಲೆಪ್ಪೊದಲ್ಲಿ ಮೂವರು ಮತ್ತು ಫರ್ದೋಸ್ ಜಿಲ್ಲೆಯ ಮೇಸಲೂನ್‌ನಲ್ಲಿ ಒಬ್ಬ ಬಂಡುಕೋರನನ್ನು ಹತ್ಯೆ ಮಾಡಲಾಗಿದೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಕರು ತಿಳಿಸಿದ್ದಾರೆ.

ರಾಷ್ಟ್ರದಾದ್ಯಂತ ಗುರುವಾರ ನಡೆದ ಹಿಂಸಾಚಾರದಲ್ಲಿ 164 ಜನ ಮೃತಪಟ್ಟಿದ್ದಾರೆ. ಇದರಲ್ಲಿ 84 ನಾಗರಿಕರು, 43 ಸೈನಿಕರು ಮತ್ತು ಏಳು ಬಂಡುಕೋರರು ಸೇರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT