ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಿಂಸೆ ಜೈನ ಧರ್ಮದ ಉದ್ಧೇಶ

Last Updated 28 ಜನವರಿ 2012, 11:30 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: `ಅಹಿಂಸಾ ತತ್ವದಿಂದ ಜೀವನದ ಸಾಗಿಸುವುದೇ ಜೈನ ಧರ್ಮದ ಮೂಲ ಉದ್ಧೇಶವಾಗಿದ್ದು ಇಂದಿಗೂ ಜೈನ ಧರ್ಮದವರು ಅದನ್ನು ಪಾಲಿಸಿಕೊಂಡು ಬರುತ್ತಿರುವುದು ಶ್ಲಾಘನೀಯ~ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.


ಪಟ್ಟಣದ ತಾಯಿ ಪಾರ್ವತಿ ಮಕ್ಕಳ ಬಳಗದ ಬಾಲಕಿಯರ ಪ್ರೌಢ ಶಾಲಾ ಆವರಣದಲ್ಲಿ ನಿರ್ಮಿಸಲಾದ ಮುನಿಶ್ರೀ ವಜ್ರಕೀರ್ತಿ ಸಭಾಂಗಣದಲ್ಲಿ ನಡೆದ  ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಇಂದು ಜಗತ್ತಿನಲ್ಲಿ ಅಶಾಂತಿ ತುಂಬಿದ್ದು ಜನರಲ್ಲಿ ವೈರತ್ವ ಹೆಚ್ಚಿದೆ. ಆದರೆ ಜೈನ ಧರ್ಮದ ಅಹಿಂಸೆ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳುವ ಅಗತ್ಯ ಇದೆ~ ಎಂದರು.
ವಿಧಾನಪರಿಷತ್ ಸದಸ್ಯ ಮೋಹನ ಲಿಂಬಿಕಾಯಿ ಮಾತನಾಡಿ, `ಕನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ ಅಪಾರವಾಗಿದ್ದು ನಾಡಿನ ಆದಿಕವಿ ಎಂದೇ ಕರೆಯಲ್ಪಡುವ ಮಹಾಕವಿ ಪಂಪನು ನೀಡಿದ ಸಾಹಿತ್ಯ ಕೃತಿಗಳು ಎಂದೆಂದಿಗೂ   ಉಳಿಯಲಿದೆ ಎಂದರು.

ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮೀಜಿ, ಗಂಜಿಗಟ್ಟಿಯ ಶಿವಲಿಂಗೇಶ್ವರ ಶಿವಾಚಾರ್ಯರು, ಹೂವಿನಶಿಗ್ಲಿ ವಿರಕ್ತಮಠದ ಚೆನವೀರ ಮಹಾಸ್ವಾಮೀಜಿ ಹಾಗೂ ವರವಿ ಕ್ಷೇತ್ರದ ವಿರುಪಾಕ್ಷ ಸ್ವಾಮೀಜಿ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ನಂತರ ಮಾತನಾಡಿದ ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮೀಜಿ `ಜಗತ್ತಿಗೆ ಅಹಿಂಸೆ, ಸತ್ಯ ಬೋಧಿಸಿದ ಜೈನ ಧರ್ಮದ ಮಹಾವೀರ ತೀರ್ಥಂಕರರ ತತ್ವಾದರ್ಶಗಳು ಇಂದಿನ ದಿನಗಳಲ್ಲಿ ಹೆಚ್ಚು ಪ್ರಸ್ತುತವಾಗಿದ್ದು ಮಾನಸಿಕ ಅಶಾಂತಿಯಿಂದ ನರಳುತ್ತಿರುವವರಿಗೆ ಅವರ ಉಪದೇಶಗಳು ದಾರಿದೀಪ ಆಗಬಲ್ಲವು~ ಎಂದರು.

ಸಾನಿಧ್ಯ ವಹಿಸಿದ್ದ ಮುನಿಶ್ರೀ 108 ಪುಣ್ಯಸಾಗರ ಮಹಾರಾಜರು `ನಮ್ಮ ಮನಸ್ಸು ಹಾಗೂ ಭಾವ ಶುದ್ಧಿಗಾಗಿ ಬಸದಿಗೆ ಹೋಗಬೇಕು. ನಿತ್ಯವೂ ಬಸದಿಗೆ ಹೋಗುವುದರಿಂದ ನಮ್ಮಲ್ಲಿನ ವಿಕಾರ ಗುಣಗಳು ದೂರವಾಗಿ ಮನಸ್ಸನ್ನು ನಿಗ್ರಹಿಸುವ ಶಕ್ತಿ ದೊರಕುತ್ತದೆ ಎಂದರು.

 ಶಾಸಕ ರಾಮಣ್ಣ ಲಮಾಣಿ, ಮಾಜಿ ಶಾಸಕ ಎಸ್.ಎನ್. ಪಾಟೀಲ, ಹು-ಧಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದತ್ತಾ ಡೋರ್ಲೆ ಮಾತನಾಡಿದರು. ಪಂಚಕಲ್ಯಾಣ ಪ್ರತಿಷ್ಠಾ ಮಹಾಮಹೋತ್ಸವ ಸಮಿತಿ ಅಧ್ಯಕ್ಷ ನೇಮಿರಾಜ ಘೋಂಗಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. 

ಸುದರ್ಮ ಗುಪ್ತಿ ಮಹಾರಾಜರು, ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಂ.ಸ್. ಕರಿಗೌಡ್ರ, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಅಶೋಕ ಪಲ್ಲೇದ, ಸಣ್ಣವೀರಪ್ಪ ಹಳ್ಳೆಪ್ಪನವರ, ಚಂಬಣ್ಣ ಬಾಳಿಕಾಯಿ, ಭುಜಬಲೆಪ್ಪ ಬರಿಗಾಲಿ, ಕ್ಷೇತ್ರಪಾಲ ಬರಿಗಾಲಿ, ಜಿಲ್ಲಾ ಪಂಚಾಯ್ತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಎಸ್. ದೊಡ್ಡಗೌಡ್ರ, ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುನಿತಾ ಹಳ್ಳೆಪ್ಪನವರ, ಜಿಲ್ಲಾ ಪಂಚಾಯ್ತಿ ಸದಸ್ಯೆ ನಿರ್ಮಲಾ ಬರದೂರ, ಅನುಷ್ಠಾನಮೂರ್ತಿ ಶಿದ್ರಾಮದೇವರು ಹಿರೇಮಠ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶಿವನಗೌಡ ಕಂಠಿಗೌಡ್ರ, ಸದಸ್ಯ ಚೆನ್ನಪ್ಪ ಜಗಲಿ, ಆರ್.ಸಿ. ಬಾಳಿಹಳ್ಳಿಮಠ ಮತ್ತಿತರರು ಹಾಜರಿದ್ದರು.

ಪದ್ಮಶ್ರೀ ಬರಿಗಾಲಿ ಸ್ವಾಗತಿಸಿದರು. ಯಶೋಧ ಬರಿಗಾಲಿ ಹಾಗೂ ಸಂಗಡಿಗರು ಜಿನಸ್ತುತಿ ಹೇಳಿದರು. ಚಿಕ್ಕೂರ ಸುಬ್ಬಣ್ಣ ಪ್ರಾರ್ಥಿಸಿದರು. ರಾಜಣ್ಣ ಮಿಣಜಗಿ, ಸುಕುಮಾರ ಕಾರ್ಯಕ್ರಮ ನಿರೂಪಿಸಿದರು. ವೇದಾ ಘೋಂಗಡಿ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT