ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ. 25ಕ್ಕೆ ಐಒಎ ವಿಶೇಷ ಸಭೆ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಮೇಲಿನ ನಿಷೇಧ ತೆರವು ನಿಟ್ಟಿನಲ್ಲಿ ಆಗಸ್ಟ್ 25 ರಂದು ವಿಶೇಷ ಸಾಮಾನ್ಯ ಸಭೆ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಶುಕ್ರವಾರ ಖಚಿತ ಪಡಿಸಿದೆ. ಜೊತೆಗೆ ಸಭೆಯಲ್ಲಿ ಪಾಲ್ಗೊಳ್ಳಲಿರುವ ಇಬ್ಬರು ಸದಸ್ಯರ ಹೆಸರುಗಳನ್ನು ಸಹ ಐಒಸಿ ಪ್ರಕಟಿಸಿದೆ.

`ಐಒಸಿ ಗೌರವ ಸದಸ್ಯ ಫ್ರಾನ್ಸಿಸ್ಕೊ ಜೆ ಎಲಿಜಾಲ್ಡೆ ಹಾಗೂ ಜೆರೊಮ್ ಪೋವೆ ಅವರು ಸಭೆಯಲ್ಲಿ ಐಒಸಿ ಪ್ರತಿನಿಧಿಗಳಾಗಿ ಭಾಗವಹಿಸಲಿದ್ದಾರೆ' ಎಂದು ಐಒಸಿಯ ಮಹಾ ನಿರ್ದೇಶಕ ಕ್ರಿಸ್ಟೋಫ್ ಡಿ ಕೆಪರ್ ಪತ್ರದಲ್ಲಿ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಐಒಸಿ ನಿಬಂಧನೆಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಐಒಎ ಮೇಲೆ 2012ರ ಡಿಸೆಂಬರ್‌ನಲ್ಲಿ ನಿಷೇಧ ಹೇರಲಾಗಿತ್ತು.
`ಪ್ರಸ್ತಾವಿತ 29 ಸೆಪ್ಟಂಬರ್ 2013ರಂದು ಐಒಎ ಪದಾಧಿಕಾರಿಗಳ ಚುನಾವಣೆ ನಡೆಸುವ ಬಗ್ಗೆ ಐಒಸಿಗೆ ಯಾವುದೇ ಅಭ್ಯಂತರ ಇಲ್ಲ' ಎಂದೂ ಪತ್ರದಲ್ಲಿ ಕೆಪರ್ ತಿಳಿಸಿದ್ದಾರೆ.

ಅಲ್ಲದೇ, `ಐಒಎ ಹೊಸ `ನೀತಿ ನಿಬಂಧನೆ'ಗಳ ಬಗ್ಗೆ ಆಗಸ್ಟ್ ಮಧ್ಯಭಾಗದ ವೇಳೆಗೆ ಟೀಕೆ-ಟಿಪ್ಪಣಿಗಳನ್ನು ರವಾನಿಸಲಾಗುವುದು' ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಐಒಎ `ನೀತಿ ನಿಬಂಧನೆ'ಗಳ ತಿದ್ದುಪಡಿಗೆ ಈ ಮೊದಲು ಜುಲೈ 15ರ ಗಡುವು ವಿಧಿಸಿದ್ದ ಐಒಸಿ, ಸೆಪ್ಟಂಬರ್ 1ರ ವೇಳೆಗೆ ಚುನಾವಣೆ ನಡೆಸುವಂತೆ ಸೂಚಿಸಿತ್ತು. ಆದರೆ ಜುಲೈ ಆರರಂದು ಪತ್ರ ಬರೆದ ಐಒಸಿ, ನೂತನ `ನೀತಿ ನಿಬಂಧನೆ'ಗಳ ಬಗ್ಗೆ ಆಗಸ್ಟ್ ಮಧ್ಯ ಭಾಗದ ವೇಳೆಗೆ ತಮ್ಮ ಟೀಕೆ-ಟಿಪ್ಪಣಿ ರವಾನಿಸಲಾಗುವುದು. ಇದರಿಂದ ಎಲ್ಲಾ ಪ್ರಕ್ರಿಯೆ ಒಂದು ತಿಂಗಳ ಮಟ್ಟಿಗೆ ವಿಳಂಬವಾಗಲಿದೆ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT