ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ರಾತ್ರಿ ನೆನಪಿಸಿಕೊಳ್ಳದ ಬಾಲಾಪರಾಧಿ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ‘ಅತ್ಯಾಚಾರ ನಡೆದ ಆ ಕರಾಳ ರಾತ್ರಿಯ­ನ್ನು ಮರೆ­ಯಲು ಯತ್ನಿಸುತ್ತಿದ್ದೇನೆ. ಆದರೆ ಮಾಧ್ಯಮಗಳು ಯಾಕೆ ಮತ್ತೆ ಮತ್ತೆ ನನ್ನನ್ನು ಪ್ರಕರಣದಲ್ಲಿ ನೆನಪಿಸುತ್ತಿವೆ’ ಹೀಗೆಂದು ಪಶ್ಚಾತ್ತಾಪ ಪಟ್ಟುಕೊ­ಳ್ಳು­­ತ್ತಿ­ದ್ದಾನೆ ದೆಹಲಿ ಅತ್ಯಾ­ಚಾ­ರ ಪ್ರಕ­ರಣ­ದಲ್ಲಿ ಭಾರಿ ಶಿಕ್ಷೆಯಿಂದ ಪಾರಾದ ಬಾಲಾಪರಾಧಿ.

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಅತ್ಯಾಚಾರ ಪ್ರಕರಣ­ದಲ್ಲಿ ಇತರರೊಂದಿ­ಗೆ ಈತ ಭಾಗಿಯಾ­ಗಿದ್ದರೂ ಬಾಲಾಪರಾಧಿಯಾ­ಗಿದ್ದರಿಂದ ಕಠಿಣ ಶಿಕ್ಷೆ­­ಯಿಂದ ಈತ ವಿನಾಯಿತಿ ಪಡೆದಿ­ದ್ದಾನೆ. ಸದ್ಯ ಬಾಲಾ­ಪರಾಧಿಗಳ ಸುಧಾ­­ರಣಾ ಕೇಂದ್ರದಲ್ಲಿ­ದ್ದಾನೆ. ಇಲ್ಲಿಂದ ಮನೆಗೆ ಮರಳಿದರೆ ತನ್ನ ಕೊಲೆ­ಯಾಗ­ಬಹುದು ಎಂಬ ಭಯವ­ನ್ನೂ ಈತ ಕೆಲವು ಅಧಿಕಾರಿಗಳ ಬಳಿ ವ್ಯಕ್ತಪಡಿಸಿದ್ದಾನೆ.

3 ವರ್ಷಗಳ ಶಿಕ್ಷೆಗೆ ಗುರಿ­ಯಾಗಿರುವ ಈತನನ್ನು ಇರಿಸಿರುವ ಸಣ್ಣ ಕೋಣೆಯಲ್ಲಿ ಟಿ.ವಿ.ಇದೆ. ಅಲ್ಲದೆ ಒಳಾಂಗಣ ಆಟಕ್ಕೆ ಕೆಲವು ಸೌಲಭ್ಯ­ಗಳು ಒದಗಿಸ­ಲಾಗಿದೆ. ಆದರೆ ಈತ­ನನ್ನು ಇತರ ಬಾಲಾರೋಪಿ­ಗಳ ಜತೆ ಬೆರೆಯಲು ಬಿಡುತ್ತಿಲ್ಲ.

ಅತ್ಯಾಚಾರ ಪ್ರಕರಣದಲ್ಲಿ ಈತ ಭಾಗಿ­­ಯಾಗಿ­ರುವ ವರದಿಗಳು ಪತ್ರಿಕೆ­ಯಲ್ಲಿ ಪ್ರಕಟವಾಗಿ­ರುವ ಬಗ್ಗೆ ಹೇಳಿ­ದ­ರೆ ಭಾವುಕನಾಗುತ್ತಿದ್ದಾನೆ. ಮೊದಲಿ­ಗೆ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಒಪ್ಪಿ­ಕೊಂಡಿ­ದ್ದರೂ ಈಗ ನಿರಾಕರಿಸು­ತ್ತಿ­ದ್ದಾ­ನೆ­.  ಕಡುಬಡವ­ರಾಗಿರುವ ತಂದೆ  ತಾಯಿ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಾನೆ.

ಸುಧಾರಣಾ ಕೇಂದ್ರದಲ್ಲಿಯೇ ಬಟ್ಟೆ ಹೊಲಿ­ಯಲು ಕಲಿತಿರುವ ಬಾಲಾಪರಾಧಿ ಗಿಟಾರ್‌ ಅಭ್ಯಾಸ ಮಾಡುತ್ತಿದ್ದಾನೆ. ಅಲ್ಲದೆ ಉತ್ತಮ ಬಾಲಕ ಎಂದು ಹೆಸರು ಪಡೆದಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT