ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ದಂಪತಿಗೆ ಶಿಕ್ಷೆ ವಿಧಿಸಿದ ನಾರ್ವೆ ನ್ಯಾಯಾಲಯ

Last Updated 4 ಡಿಸೆಂಬರ್ 2012, 10:21 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ತಮ್ಮ ಏಳು ವರ್ಷದ ಮಗನ ಮೇಲೆ ದೌರ್ಜನ್ಯ ನಡೆಸಿದ ಆರೋಪ ಎದುರಿಸುತ್ತಿರುವ ಆಂಧ್ರಪ್ರದೇಶದ ಚಂದ್ರಶೇಖರ್ ವಲ್ಲಭನೇನಿ ಮತ್ತು ಅನುಪಮಾ ದಂಪತಿಗೆ ಓಸ್ಲೊ ನ್ಯಾಯಾಲಯವು ಮಂಗಳವಾರ ಶಿಕ್ಷೆ ಪ್ರಕಟಿಸಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್) ಉದ್ಯೋಗಿಯಾಗಿರುವ ಚಂದ್ರಶೇಖರ ಅವರಿಗೆ 18 ತಿಂಗಳ ಹಾಗೂ ಭಾರತೀಯ ರಾಜತಾಂತ್ರಿಕ ಕಚೇರಿ ಉದ್ಯೋಗಿಯಾಗಿರುವ ಅವರ ಪತ್ನಿ ಅನುಪಮಾ  ಅವರಿಗೆ 15 ತಿಂಗಳ ಶಿಕ್ಷೆ ವಿಧಿಸಲಾಗಿದೆ.

ಚಂದ್ರಶೇಖರ್ ಅವರ ಏಳು ವರ್ಷದ ಮಗ ಸಾಯಿ ಶ್ರೀರಾಮ್ ಶಾಲಾ ಬಸ್‌ನಲ್ಲಿ ಮೂತ್ರ ಮಾಡುತ್ತಿದ್ದ ಎನ್ನಲಾಗಿದೆ. ಆತ ಶಾಲೆಯಿಂದ ಆಟಿಕೆಗಳನ್ನು ಮನೆಗೆ ತರುತ್ತಿದ್ದ. ಈ ವಿಚಾರ ದಂಪತಿಯ ಗಮನಕ್ಕೆ ತರಲಾಯಿತು. ಸರಿಯಾಗಿ ವರ್ತಿಸದಿದ್ದಲ್ಲಿ ಭಾರತಕ್ಕೆ ಕಳುಹಿಸುವುದಾಗಿ ಈ ದಂಪತಿ ಮಗನಿಗೆ ಹೇಳಿದ್ದರು. ಈ ವಿಷಯ ಶ್ರೀರಾಮ್ ಶಾಲಾ ಶಿಕ್ಷಕರಿಗೆ ದೂರು ನೀಡಿದ ಒಂಬತ್ತು ತಿಂಗಳ ನಂತರ ಚಂದ್ರಶೇಖರ್ ದಂಪತಿಯನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT