ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಧ್ರ ಸಂಪುಟ ಸಭೆ: 8 ಸಚಿವರು ಗೈರು

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹೈದರಾಬಾದ್ (ಪಿಟಿಐ): ಎರಡು ತಿಂಗಳ ನಂತರ ಶುಕ್ರವಾರ ನಡೆದ ಆಂಧ್ರಪ್ರದೇಶ ಸಚಿವ ಸಂಪುಟ ಸಭೆಗೆ ರಾಯಲಸೀಮಾ ಮತ್ತು ತೆಲಂಗಾಣ ಭಾಗದ ಎಂಟು ಸಚಿವರು ಗೈರು ಹಾಜರಾ­ಗಿದ್ದರು.

ಈ ಮೂಲಕ ಕೇಂದ್ರದ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ನಿರ್ಧಾರಕ್ಕೆ, ಕಾಂಗ್ರೆಸ್್ ನೇತೃತ್ವದ ಸರ್ಕಾರದ ಸಚಿವರು ನೇರವಾಗಿಯೇ ತಮ್ಮ  ವಿರೋಧ  ವ್ಯಕ್ತಪಡಿಸಿದ್ದಾರೆ.

ರಾಯಲಸೀಮಾ ಭಾಗದ ಗಂಟಾ ಶ್ರೀನಿವಾಸ ರಾವ್, ಸಿ. ರಾಮ­ಚಂದ್ರಯ್ಯ, ಗಲ್ಲ ಅರುಣ ಕುಮಾರಿ, ಎರಸು ಪ್ರತಾಪ್ ರೆಡ್ಡಿ, ಮೊಹ­ಮ್ಮದ್ ಅಹಮ್ಮದುಲ್ಲಾ, ಟಿ.ಜಿ. ವೆಂಕಟೇಶ್ ಹಾಗೂ ತೆಲಂಗಾಣದ ಜೆ. ಗೀತಾ ರೆಡ್ಡಿ ಮತ್ತು ದನಂ ನಾಗೇಂದರ್ ಸಭೆಗೆ ಹಾಜರಾಗದ ಸಚಿವರು.

ಕಡಪ ಸಂಸದ ವೈ.ಎಸ್‌.ಆರ್. ಜಗಮೋಹನ್ ರೆಡ್ಡಿ ಅವರ ಅಕ್ರಮ ಆಸ್ತಿ ಪ್ರಕರಣದಲ್ಲಿ ಗೀತಾ ರೆಡ್ಡಿ ಅವರ ಹೆಸರು ಕೇಳಿಬಂದಿದ್ದ ಹಿನ್ನೆಲೆಯಲ್ಲಿ, ಇತ್ತೀಚೆಗೆ ಸಿಬಿಐ ಗೀತಾ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರಿಂದ ಅವರು ಸಭೆಗೆ ಹಾಜ­ರಾಗಿಲ್ಲ ಎನ್ನಲಾಗಿದೆ. ಮತ್ತೊಬ್ಬ ಸಚಿವ ದನಂ ನಾಗೇಂದರ್ ವಿದೇಶ ಪ್ರವಾಸ­ದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT