ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಕ ವೃತ್ತಿಬದುಕಿಗೆ ಹಿಂದೂಸ್ತಾನ್ ಅಕಾಡೆಮಿ

Last Updated 10 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ಮಾರತ್ತಹಳ್ಳಿಯಲ್ಲಿರುವ ಹಿಂದೂಸ್ತಾನ್ ಅಕಾಡೆಮಿ ಕಳೆದ 25 ವರ್ಷಗಳಿಂದಲೂ ನೂರಾರು ಯುವವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ತರಬೇತಿ ನೀಡುತ್ತಿದೆ. ಏರ್‌ಕ್ರಾಫ್ಟ್ ನಿರ್ವಹಣೆ, ಏರೊನಾಟಿಕಲ್/ಏರೊಸ್ಪೇಸ್ ಎಂಜಿನಿಯರಿಂಗ್, ಆಟೊಮೊಬೈಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್, ಕಂಪ್ಯೂಟರ್ ಸೈನ್ಸ್ ಹಾಗೂ ಮ್ಯಾನೇಜ್‌ಮೆಂಟ್ ಸೈನ್ಸ್ ವಿದ್ಯಾರ್ಥಿಗಳಿಗೆ ಈ ಅಕಾಡೆಮಿಯು ಭವಿಷ್ಯದ ಬುನಾದಿ ಹಾಕಿಕೊಟ್ಟಿದೆ.

ಸಿಂಗಪುರ ಏರ್‌ಲೈನ್ಸ್‌ನಂಥ ಅಂತರರಾಷ್ಟ್ರೀಯ ಏರ್‌ಲೈನ್ಸ್ ಹಾಗೂ  ಫೋಕ್ಸ್‌ವೇಗನ್ ಆಟೊಮೊಬೈಲ್ ಜತೆ ಅಕಾಡೆಮಿಯು ಒಪ್ಪಂದ ಮಾಡಿಕೊಂಡಿದೆ. ಪ್ರತಿ ವರ್ಷ ಇಲ್ಲಿನ 40 ವಿದ್ಯಾರ್ಥಿಗಳು ವಿಶ್ವದಾದ್ಯಂತ ಇರುವ ಫೋಕ್ಸ್‌ವೇಗನ್ ಫ್ಯಾಕ್ಟರಿಗಳು ಹಾಗೂ ಮಳಿಗೆಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ಆಯ್ಕೆಯಾಗುವುದು ವಿಶೇಷ ಎಂದು ಪ್ರಕಟಣೆ ತಿಳಿಸಿದೆ.

ಲಭ್ಯ ಕೋರ್ಸ್‌ಗಳು: ಏರೊಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ನಾಲ್ಕು ವರ್ಷದ ಬಿ.ಟೆಕ್ ಕೋರ್ಸ್, ಇದಕ್ಕೆ ಇಂದಿರಾಗಾಂಧಿ ಮುಕ್ತ ವಿಶ್ವವಿದ್ಯಾಲಯದ ಅನುಮತಿ ಇದೆ. ಏರ್‌ಕ್ರಾಫ್ಟ್ ಮೆಂಟೇನೆನ್ಸ್ ಎಂಜಿನಿಯರಿಂಗ್, ಏರೊನಾಟಿಕಲ್/ ಏರೊಸ್ಪೇಸ್ ಎಂಜಿನಿಯರಿಂಗ್‌ನಲ್ಲಿ  (ಡಿಜಿಸಿಎ ಅನುಮತಿ) ಮೂರು ವರ್ಷದ ಎಎಂಇ ಕೋರ್ಸ್. ಆಟೊಮೊಬೈಲ್ ಎಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸೈನ್ಸ್  ಡಿಪ್ಲೊಮಾ ಕೋರ್ಸ್‌ಗಳು, ಬಿಬಿಎಂ (ಬೆಂಗಳೂರು ವಿವಿ) ಹಾಗೂ ಎಂಬಿಎ ( ಏವಿಯೇಷನ್ ಮ್ಯಾನೇಜ್‌ಮೆಂಟ್) ಕೋರ್ಸ್.

ತರಗತಿಯಲ್ಲಿ ಅತ್ಯಾಧುನಿಕ ಎಲೆಕ್ಟ್ರಾನಿಕ್ ಸಾಧನಗಳು, ವಿನೂತನ ಸಿಎಡಿ-ಸಿಎಎಂ ಕೇಂದ್ರಗಳು, ಸುಸಜ್ಜಿತ ಪ್ರಯೋಗಾಲಯ ಹಾಗೂ ನುರಿತ ಬೋಧಕ ಸಿಬ್ಬಂದಿ ಈ ಅಕಾಡೆಮಿಯ ವೈಶಿಷ್ಟ್ಯಗಳು.

ಮಾಹಿತಿಗೆ ದೂರವಾಣಿ: 080 25238650, 25232217
ವೆಬ್‌ಸೈಟ್:  hindustanacademy.com, ಇ-ಮೇಲ್: haes@rediffmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT