ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕರ್ಷಣೀಯ ಬೈಮಾ ಬೌದ್ಧ ಮಂದಿರ

Last Updated 2 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೀಜಿಂಗ್ (ಐಎಎನ್‌ಎಸ್):  ಸರ್ಕಾರ ನಡೆಸುವ ಇಲ್ಲಿನ ಹೆನಾನ್ ಪ್ರಾಂತ್ಯದ ಬೈಮಾ ಬೌದ್ಧ ಮಂದಿರವು ಚೀನಾ ಮತ್ತು ಭಾರತ ಸಂಸ್ಕೃತಿಯನ್ನು ಪ್ರತಿನಿಧಿಸುವ ಅದ್ಭುತ ಸಾಂಸ್ಕೃತಿಕ ಕೇಂದ್ರವಾಗಿದೆ. ಇಲ್ಲಿಗೆ ಭಾರತದ ಗಣ್ಯಾತಿಗಣ್ಯರು ಭೇಟಿ ನೀಡಿದ್ದಾರೆ.

ಚೀನಾ ಮತ್ತು ಭಾರತದ ಸಂಸ್ಕೃತಿಯನ್ನೊಳಗೊಂಡ ಮಂದಿರದಲ್ಲಿ ಎರಡೂ ಸಂಸ್ಕೃತಿಗಳನ್ನು ಸಮ್ಮಿಲನದಂತಹ ಆಚರಣೆ ಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ ಎಂದು ಕ್ಸಿನುಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಸದಸ್ಯತ್ವಕ್ಕೆ ಬೆಂಬಲ

ವಿಶ್ವಸಂಸ್ಥೆ (ಪಿಟಿಐ): ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವಕ್ಕಾಗಿ ಪ್ಯಾಲೆಸ್ಟೈನ್ ಸಲ್ಲಿಸಿರುವ ಅರ್ಜಿಯನ್ನು ವಿಶ್ವಸಂಸ್ಥೆಯ ವಿಶೇಷ ಸಮಿತಿ ಪರಿಶೀಲಿಸಲು ಆರಂಭಿಸಿರುವುದರ ನಡುವೆ, ಇದಕ್ಕೆ ಭಾರತ ಬೆಂಬಲ ವ್ಯಕ್ತಪಡಿಸಿದೆ.

 ಪ್ರತ್ಯೇಕ ರಾಷ್ಟ್ರದ ಮಾನ್ಯತೆಗಾಗಿ ಆ ದೇಶ ನಡೆಸುತ್ತಿರುವ ಪ್ರಯತ್ನವನ್ನು ಮಹಾಸಭೆಗೆ ಶಿಫಾರಸು ಮಾಡಬೇಕೆಂದು ಸೂಚಿಸಿದೆ.

ಶುಕ್ರವಾರ ಇಲ್ಲಿ ನಡೆದ ಭದ್ರತಾ ಮಂಡಳಿ ಸಮಿತಿಯ ಸಭೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಹರ್ದೀಪ್ ಸಿಂಗ್ ಪುರಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT