ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕ ಬೆಂಕಿ: ಕಬ್ಬಿನ ಗಾಣ ಸಂಪೂರ್ಣ ಭಸ್ಮ

Last Updated 14 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಹೊಸಪೇಟೆ: ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಕಬ್ಬಿನ ಗಾಣದ ಎಲ್ಲಾ ಪರಿಕರಗಳು ಸೇರಿದಂತೆ ಗುಡಿಸಲು, ಮೂರು ಬಣವೆಗಳು ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ಅನಂತಶಯನ ಗುಡಿಯಲ್ಲಿ ಸೋಮವಾರ ಜರುಗಿದೆ.
 
ಕಾಮಗಾರಿ ಇಲ್ಲದ ಕಾರಣ ರಜೆ ಮಾಡಿ ಪಕ್ಕದ ತಮ್ಮ ಮನೆಯಲ್ಲಿದ್ದಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಕಬ್ಬಿನ ಗಾಣವಿರುವ ಗುಡಿಸಲು, 2 ಕಬ್ಬು ಕಾಯಿಸುವ ಕೊಪ್ಪರಿಗೆ, ಕಬ್ಬು ಸೇರಿದಂತೆ ಕಬ್ಬಿನ ಹಾಲು ಅರಿದುಳಿದ ಸಿಪ್ಪೆ ಒಟ್ಟಿದ ಮೂರು ಬಣವೆಗಳು ಬೆಂಕಿಯಲ್ಲಿ ಸುಟ್ಟು ಭಸ್ಮವಾಗಿವೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿ ಆಲೆಮನೆಯಲ್ಲಿ ಸಿಪ್ಪೆ ಹಾಗೂ ಇತರ ಒಣಗಿದ ವಸ್ತುಗಳೇ ತುಂಬಿಕೊಂಡಿದ್ದರಿಂದ ಬೆಂಕಿ ಬೇಕಿ ಆವರಿಸಿಕೊಂಡಿದೆ ಅಲ್ಲದೆ ಸುತ್ತಲಿನ ಪ್ರದೇಶಕ್ಕೂ ವ್ಯಾಪಿಸಿಕೊಂಡಿದೆ. ಅದರ ತೀವ್ರತೆಗೆ ಎಲ್ಲವೂ ಬೇಗ ಸುಟ್ಟು ಹಾಳಾಗಲು ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.

ಅಕ್ಕಪಕ್ಕಕ್ಕೆ ಹೊಂದಿಕೊಂಡಂತೆ ಯಾವುದೇ ಮನೆ ಹಾಗೂ ಗುಡಿಸಲು ಇಲ್ಲದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಅಗ್ನಿಶಾಮಕ ದಳದ ತಕ್ಷಣವೇ ಸ್ಥಳಕ್ಕೆ ಧಾವಿಸಿ ಹೆಚ್ಚಿನ ಅನಾಹುತ ತಪ್ಪಿದೆ ಎಂದು ಪೊಲೀಸರು ಮತ್ತು ಸ್ಥಳೀಯರು ತಿಳಿಸಿದರು.

ಅಯ್ಯಾಳಿ ರಾಮಪ್ಪ ಎಂಬುವವರ ಮನೆಯ ಎಲ್ಲ ವಸ್ತುಗಳಿಗೂ ಹಾನಿಯಾಗಿದೆ. ಹೊಸಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯಲ್ಲಿ ಸುಮಾರು ರೂ 2 ಲಕ್ಷ ಮೌಲ್ಯದ ಆಸ್ತಿಪಾಸ್ತಿ ನಷ್ಟದ ಅಂದಾಜು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT