ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕ ಬೆಂಕಿಗೆ ಮನೆ ಭಸ್ಮ:ರೂ 6 ಲಕ್ಷ ಆಸ್ತಿ ಹಾನಿ

Last Updated 14 ಅಕ್ಟೋಬರ್ 2012, 4:45 IST
ಅಕ್ಷರ ಗಾತ್ರ

ಸಾಲಿಗ್ರಾಮ: ವಾಸದ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ವಸ್ತುಗಳು ಅಲ್ಲದೆ ದವಸ ಧಾನ್ಯಗಳು ಬೆಂಕಿಗೆ ಆಹುತಿಯಾಗುವ ಜತೆಗೆ ತಂಬಾಕು ಮನೆ ಕೂಡಾ ಬೆಂಕಿಯ ಕೆನ್ನಾಲಿಗೆ ಸಿಲುಕಿ ರೂ 6ಲಕ್ಷಕ್ಕೂ ಅಧಿಕ ನಷ್ಟವಾಗಿರುವ ಘಟನೆ ಸಮೀಪದ ಮುದ್ದನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚುಂಚನಕಟ್ಟೆ ಹೋಬಳಿ ಮುದ್ದನ      ಹಳ್ಳಿ ಗ್ರಾಮದ ಪದ್ಮಮ್ಮ ಎಂಬುವವರಿಗೆ ಸೇರಿದ ಮನೆಗೆ ಗುರುವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ಬಿದ್ದ ಪರಿಣಾಮ ಮನೆಯಲ್ಲಿದ್ದ ದವಸ ಧಾನ್ಯ ಅಲ್ಲದೆ ತಂಬಾಕು ಕೂಡಾ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿದೆ. ತಡರಾತ್ರಿ ಮನೆಯಲ್ಲಿ ಬೆಂಕಿ ಕಾಣಿಸಿ ಕೊಳ್ಳುತ್ತಿದ್ದಂತೆ ನಿದ್ರೆ ಮಾಡುತ್ತಿದ್ದವರು ಎಚ್ಚರ ಗೊಂಡು ಮನೆಯಿಂದ ಹೊರ ಬಂದು ಬೆಂಕಿ ನಂದಿಸಲು ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ ಎಂದು ಪದ್ಮಮ್ಮ ತಿಳಿಸಿದರು.

ಮನೆಯಲ್ಲಿ ಇದ್ದ ವರ್ಷದ ಬೆಳೆ ಅಲ್ಲದೆ ಹದ ಮಾಡಲಾಗಿದ್ದ ತಂಬಾಕು ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ಪರಿಕರಗಳು ಬೆಂಕಿಯಲ್ಲಿ ಭಸ್ಮವಾದ ಮೇರೆಗೆ ಪದ್ಮಮ್ಮ ಕುಟುಂಬ ಬೀದಿಗೆ ಬ್ದ್ದಿದಿದ್ದು ಕುಟುಂಬದ ರೋದನೆ ಮುಗಿಲು ಮುಟ್ಟುತ್ತಿತು. ಜಿಲ್ಲಾ ಪಂಚಾಯಿತಿ ಸದಸ್ಯ ಚಿಕ್ಕಕೊಪ್ಪಲು ದ್ವಾರಕೀಶ್ ಭೇಟಿ ನೀಡಿ ಪದ್ಮಮ್ಮರ ಕುಟುಂಬಕ್ಕೆ ಆರ್ಥಿಕ ಸಹಾಯ ನೀಡಿದರು.

ಆಶ್ರಯ ಯಾೀಜನೆಯಡಿ ಮನೆ: ಆಕಸ್ಮಿಕ ಬೆಂಕಿಗೆ ಮನೆ ಕಳೆದು ಕೊಂಡಿರುವ ಪದ್ಮಮ್ಮ ಅವರನ್ನು ಭೇಟಿ ಮಾಡಿದ ಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಮನೋಹರ ಅವರು, ಆಶ್ರಯ ಯಾೀಜನೆಯಡಿ ಮನೆಯನ್ನು ಮಂಜೂರು ಮಾಡಿ ಕೊಡುವುದಾಗಿ     ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT