ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್ ತಯಾರಿಕೆಗೆ ಹೊಸ ಟೆಂಡರ್?

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್‌): ವಿಶ್ವದ ಅತಿ ಕಡಿಮೆ ಬೆಲೆ ಕಂಪ್ಯೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ `ಆಕಾಶ್ ಟ್ಯಾಬ್ಲೆಟ್~ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಎದುರಾಗುತ್ತಿದ್ದು, ಕೇಂದ್ರ ಸರ್ಕಾರ `ಆಕಾಶ್~ ಸುಧಾರಿತ ಮಾದರಿ ಸಿದ್ಧಪಡಿಸಲು ಹೊಸದಾಗಿ ಟೆಂಡರ್ ಕರೆಯುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಪೂರೈಸಲಾದ `ಆಕಾಶ್~ ಟ್ಯಾಬ್ಲೆಟ್ ಕಾರ್ಯನಿರ್ವಹಣೆ ಸಮರ್ಪಕವಾಗಿಲ್ಲ ಎಂಬ ದೂರು ಈಗ ಕೇಳಿಬಂದಿದೆ.

ಮುಂದಿನ ಕೆಲ ವಾರಗಳಲ್ಲಿ ಮಾನವ ಸಂಪನ್ಮೂಲ ಸಚಿವಾಲಯವು ಮತ್ತೆ ಟೆಂಡರ್ ಕರೆಯುವ ಸಾಧ್ಯತೆ ಇದ್ದು, ಈ ಬಾರಿ ಗುತ್ತಿಗೆ ಡಾಟಾವಿಂಡ್ ಕೈತಪ್ಪುವ ಸಾಧ್ಯತೆಯಿದೆ. `ಡಾಟಾವಿಂಡ್~ ನೀಡಿದ ದರದಲ್ಲೇ ಮತ್ತಷ್ಟು ಸುಧಾರಿತ, ಉತ್ತಮ ತಂತ್ರಜ್ಞಾನ ಹೊಂದಿದ ಟ್ಯಾಬ್ಲೆಟ್ ಪೂರೈಸಲು ಕೆಲ ಕಂಪೆನಿಗಳು ಆಸಕ್ತಿ ತೋರಿವೆ ಎಂದು ಮೂಲಗಳು ತಿಳಿಸಿವೆ. 

 ಸಚಿವಾಲಯದ ಕಾಲೇಜು, ಪ್ರೌಢಶಾಲೆಗಳಿಗೆ ಪೂರೈಸಲು ಈ ಟ್ಯಾಬ್ಲೆಟ್ ಸಿದ್ಧಪಡಿಸಲು ಕಳೆದ ವರ್ಷ ಟೆಂಡರ್ ಕರೆದಿದ್ದು, `ಆಕಾಶ್~ ಸಿದ್ಧಪಡಿಸಿದ ಲಂಡನ್ ಮೂಲದ `ಡಾಟಾವಿಂಡ್~ ಕಂಪೆನಿ, ಒಂದುಲಕ್ಷ ಟ್ಯಾಬ್ಲೆಟ್ ಕಂಪ್ಯೂಟರ್ ಸಿದ್ಧಪಡಿಸುವ ಗುತ್ತಿಗೆ ಗೆದ್ದಿತ್ತು. 

 ಡಾಟಾವಿಂಡ್, ಐಐಟಿ ನೆರವು ಪಡೆದು ಟ್ಯಾಬ್ಲೆಟ್ ಕಂಪ್ಯೂಟರ್ ಸಿದ್ಧಪಡಿಸಿದ್ದು, ಅಕ್ಟೋಬರ್‌ನಿಂದ ಈವರೆಗೆ ಕೇವಲ 10,000 ಟ್ಯಾಬ್ಲೆಟ್‌ಗಳನ್ನಷ್ಟೇ ಪೂರೈಸಿದೆ. ಅತಿ ಅಗ್ಗದಲ್ಲಿ (ರೂ 2 ಸಾವಿರದ ಒಳಗೆ ಟ್ಯಾಬ್ಲೆಟ್ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT