ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಲಿದೆ ಕಂಪ್ಯೂಟರೇ ಮೇಲಧಿಕಾರಿ!

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಮುಂಬರುವ ದಿನಗಳಲ್ಲಿ ಕಂಪ್ಯೂಟರ್‌ಗಳೇ ನಮ್ಮ ಮೇಲಧಿಕಾರಿಯಾಗಬಹುದು!
ಕ್ರೌಡ್ ಸೋರ್ಸಿಂಗ್ ಮೂಲಕ ನೌಕರರಿಗೆ ನಿರ್ದಿಷ್ಟ ಕೆಲಸಗಳನ್ನು ನಿಯೋಜಿಸುವ ವಿಶ್ವದ ಮೊದಲ ಸ್ವಯಂ ಚಾಲಿತ ಕಂಪ್ಯೂಟರ್ ವ್ಯವಸ್ಥೆಯನ್ನು ಅಮೆರಿಕ ಮೂಲದ ವಿಜ್ಞಾನಿಯೊಬ್ಬರು ಅಭಿವೃದ್ಧಿ ಪಡಿಸಿದ್ದಾರೆ.

ಮೆಸಾಚುಸೆಟ್ಸ್ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನಿ ಡೇನಿಯಲ್ ಬರೋವಿ ಅವರು `ಆಟೊಮ್ಯಾನ್' (ಅ್ಠಠಿಟಚ್ಞ) ಎಂಬ ಕಂಪ್ಯೂಟರ್ ವ್ಯವಸ್ಥೆಯನ್ನು ರೂಪಿಸಿದ್ದಾರೆ.

ಈ ವ್ಯವಸ್ಥೆಯು ಅಮೇಜಾನ್ ಮೆಕ್ಯಾನಿಕಲ್ ಟ್ರಕ್‌ನಂತಹ ಕ್ರೌಡ್ ಸೋರ್ಸಿಂಗ್ ವೇದಿಕೆಗಳನ್ನು ಬಳಸಿಕೊಂಡು ಉದ್ಯೋಗಿಗಳಿಗೆ ಅತ್ಯಂತ ಕ್ಲಿಷ್ಟವಾದ ಕೆಲಸಗಳನ್ನು ನಿಯೋಜಿಸುವ ಸಾಮರ್ಥ್ಯ ಹೊಂದಿದೆ.

ಕೃತಕ ಬುದ್ಧಿಮತ್ತೆ ಎಂಬುದು ನಿರಂತರವಾಗಿ ಪ್ರಗತಿ ಹೊಂದುತ್ತಲೇ ಇದೆ. ಆದರೆ ಮಾನವರಿಗೆ ಅತಿ ಸುಲಭದ್ದು ಎಂಬ ಪರಿಗಣಿಸಲಾದ ಕೆಲವು ಕೆಲಸಗಳನ್ನು ನಿರ್ವಹಿಸಲು ಕಂಪ್ಯೂಟರ್‌ಗಳು ಇನ್ನೂ ತಿಣುಕಾಡುತ್ತಿವೆ; ಉದಾಹರಣೆಗೆ ಕಾರಿನ ಪರವಾನಗಿ ಫಲಕವನ್ನು ಓದುವುದು ಅಥವಾ ಜೋಕ್ ಭಾಷಾಂತರ ಮಾಡುವುದು ಇತ್ಯಾದಿ..

ಇದಕ್ಕೆ ಪರಿಹಾರ ಕಂಡುಕೊಳ್ಳಲು ಜನರು ಇಂತಹ ಸಮಸ್ಯೆಗಳನ್ನು ಮೆಕ್ಯಾನಿಕಲ್ ಟರ್ಕ್‌ನಂತಹ ಕ್ರೌಡ್-ಸೋರ್ಸಿಂಗ್ ವೇದಿಕೆಗಳಲ್ಲಿ ಪ್ರಕಟಿಸುತ್ತಾರೆ. ಇತರರು ಈ ಸಮಸ್ಯೆಗಳನ್ನು ಪೂರ್ಣಗೊಳಿಸುತ್ತಾರೆ.

ಉದ್ಯೋಗಿಗಳಿಗೆ ಕೆಲಸ ನಿಯೋಜಿಸುವುದು, ನೌಕರರ ನಿರ್ವಹಣೆ, ಮಾಡಿರುವ ಕೆಲಸವನ್ನು ಸ್ವೀಕರಿಸುವುದು ಅಥವಾ ತಿರಸ್ಕರಿಸುವುದು, ವೇತನ ಪಾವತಿ ಮಾಡುವುದು ಸೇರಿದಂತೆ ಹಲವು ಕಾರ್ಯಗಳನ್ನು ಮಾಡುವ ರೀತಿಯಲ್ಲಿ ಬರೋವಿ ಮತ್ತು ಅವರ ತಂಡ `ಆಟೊಮ್ಯಾನ್'ನ್ನು ರೂಪಿಸಿದೆ.

ಈ ಪ್ರಕ್ರಿಯೆಯನ್ನು ಕಂಪ್ಯೂಟರೊಂದು ಸ್ವಯಂ ಮಾಡುವಂತಾಗಬೇಕು ಎಂಬುದು ಬಾರೊವಿ ಕನಸಾಗಿತ್ತು. ಈ ಬಯಕೆಯೇ `ಆಟೊಮ್ಯಾನ್' ಸೃಷ್ಟಿಗೆ ಕಾರಣವಾಗಿದೆ.

`ಇದೊಂದು ಹೊಸ ರೀತಿಯ ಕಂಪ್ಯೂಟಿಂಗ್. ವ್ಯಕ್ತಿಯೊಬ್ಬರು ಮಾಡಬಹುದಾದ ಕೆಲಸವನ್ನು ಇದು ಮಾರ್ಪಾಡು ಮಾಡುತ್ತದೆ' ಎಂದು ಬರೋವಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT