ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗಸ್ಟಾ ವೆಸ್ಟ್‌ಲ್ಯಾಂಡ್ ಒಪ್ಪಂದ ರದ್ದು

Last Updated 1 ಜನವರಿ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಾಯುಪಡೆಗೆ ಅತಿ ಗಣ್ಯ ವ್ಯಕ್ತಿಗಳ (ವಿವಿಐಪಿ) ಬಳಕೆ­ಗಾಗಿ 12 ಹೆಲಿಕಾಪ್ಟರ್‌ಗಳ  ಪೂರೈಕೆಗೆ ಆಂಗ್ಲೊ ಇಟಾಲಿಯನ್‌ ಕಂಪೆನಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಜತೆಗೆ ಮಾಡಿಕೊಂಡಿದ್ದ ರೂ. 3,600 ಕೋಟಿ ಮೊತ್ತದ ಒಪ್ಪಂದ­ವನ್ನು ಬುಧವಾರ ಭಾರತ ರದ್ದುಪಡಿಸಿದೆ.

ಭಾರತದೊಂದಿಗಿನ ಈ ಒಪ್ಪಂದಕ್ಕಾಗಿ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಸಂಸ್ಥೆಯು ರೂ. 360 ಕೋಟಿ ಲಂಚ ನೀಡಿತ್ತು  ಎಂಬ ಆರೋಪ ಕೇಳಿಬಂದ ಸುಮಾರು ಒಂದು ವರ್ಷದ ನಂತರ ಒಪ್ಪಂದ ರದ್ದಾಗಿದೆ.

ಒಪ್ಪಂದ ಕುದುರಿಸಲು ಕಂಪೆನಿಯ ಇಬ್ಬರು ಹಿರಿಯ ಅಧಿಕಾರಿಗಳು ಲಂಚ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಅಧಿಕಾರಿಗಳನ್ನು ಇಟಲಿ­ಯಲ್ಲಿ ಬಂಧಿಸಲಾಗಿದೆ. ಪ್ರಕರಣದ ಆರೋಪಿ­ಗಳಲ್ಲಿ ಭಾರತೀಯ ವಾಯು­ಪಡೆ ಮಾಜಿ ಮುಖ್ಯಸ್ಥ ಎಸ್‌.ಪಿ. ತ್ಯಾಗಿ ಅವರು ಒಬ್ಬರಾಗಿದ್ದಾರೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

ಪ್ರಧಾನಿ ಡಾ.ಮನಮೋಹನ್‌ ಸಿಂಗ್‌ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಬುಧವಾರ ಸಭೆ ನಡೆಸಿದ ಬಳಿಕ ಒಪ್ಪಂದ ರದ್ದು ಮಾಡುವ ನಿರ್ಧಾರ ಹೊರಬಿದ್ದಿದೆ ಎಂದು ರಕ್ಷಣಾ ಸಚಿವಾಲಯದ ಮೂಲಗಳು ಸುದ್ದಿಸಂಸ್ಥೆಗೆ ತಿಳಿಸಿವೆ.
12 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಪೂರೈಸಲು 2010ರಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅವುಗಳ ಪೈಕಿ ಮೂರು ಹೆಲಿಕಾಪ್ಟರ್‌ಗಳು ಈಗಾಗಲೇ ಭಾರತಕ್ಕೆ ಪೂರೈಕೆಯಾಗಿವೆ.

ಈ ನಡುವೆ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಯೊಂದಿಗೆ ಮಾತುಕತೆ ನಡೆಸ­ಲಾಗು­ವುದು ಎಂದು ರಕ್ಷಣಾ ಸಚಿವಾಲಯದ ಮೂಲಗಳು ತಿಳಿಸಿವೆ.

ರೂ. 4,000 ಕೋಟಿ ನಷ್ಟ
ಭಾರತ ಸರ್ಕಾರವು ಆಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪೆನಿಯಿಂದ ಸುಮಾರು ರೂ. 4,000 ಕೋಟಿ ನಷ್ಟ ಪರಿಹಾರ ಕೇಳುವ ಸಾಧ್ಯತೆಯೂ ಇದೆ. ಕಂಪೆನಿಯು ನೀಡಿರುವ ಸುಮಾರು ರೂ. 1,700 ಕೋಟಿ ಮೊತ್ತದ ಬ್ಯಾಂಕ್‌ ಖಾತರಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಯೋಚನೆ ಮಾಡಲಾ­ಗುತ್ತಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT