ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗುಂಬೆಗೆ ಸೈಕಲ್ ಯಾತ್ರೆ

Last Updated 10 ಜನವರಿ 2012, 19:05 IST
ಅಕ್ಷರ ಗಾತ್ರ

ಬೆಂಗಳೂರು: ಯುವಕರು ಸೇನೆಗೆ ಸೇರುವಂತೆ ಹುರಿದುಂಬಿಸಲು ಹಾಗೂ ಸಾಹಸ ಮನೋಭಾವ ಬೆಳೆಸುವ ಸಲುವಾಗಿ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಬೆಂಗಳೂರಿನಿಂದ ಆಗುಂಬೆಗೆ ಮಂಗಳವಾರ ಸೈಕಲ್ ಯಾತ್ರೆ ಆರಂಭಿಸಿದರು.

ಎನ್‌ಸಿಸಿ ಕೆಡೆಟ್‌ಗಳೂ ಆಗಿರುವ ವಿ.ವಿ.ಯ ಹನ್ನೆರಡು ವಿದ್ಯಾರ್ಥಿಗಳು ಯಾತ್ರೆ ಹೊರಟರು. ನಗರದ ಜೆ.ಸಿ.ರಸ್ತೆಯಿಂದ ಆರಂಭವಾದ ಯಾತ್ರೆಗೆ ರಾಜ್ಯ ಎನ್‌ಸಿಸಿ ಬೆಟಾಲಿಯನ್ ಗ್ರೂಪ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಅಲೋಕ್ ಗುಹಾ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

`ಕಾಳಿಂಗ ಸರ್ಪಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಮಹಿಳಾ ಸಬಲೀಕರಣವನ್ನು ಉತ್ತೇಜಿಸುವುದು. ಸೇನೆಯ ಮಹತ್ವವನ್ನು ತಿಳಿಸಿಕೊಡುವುದು, ಯುವಕರಲ್ಲಿ ಸಾಹಸ ಮನೋಭಾವ ಬೆಳೆಸುವುದು ಯಾತ್ರೆಯ ಉದ್ದೇಶ~ ಎಂದು ವಿದ್ಯಾರ್ಥಿ ರೋಹಿತ್ ಹೇಳಿದರು. ಈ ಜಾಥಾ ಜ.18ಕ್ಕೆ ಮುಕ್ತಾಯವಾಗಲಿದೆ. ವಿ.ವಿ ಕುಲಪತಿ ಡಾ.ಎನ್.ಸುಂದರ್‌ರಾಜನ್, ಪಿಯುಸಿ ಶಿಕ್ಷಣ ವಿಭಾಗದ ನಿರ್ದೇಶಕ  ಡಾ.ಬಿ.ಟಿ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT