ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆಜ್ ಕ ಸಿಎಂ, 2014 ಕ ಪಿಎಂ' - ಬಿಜೆಪಿಯಲ್ಲಿ ಭುಗಿಲೆದ್ದ ಅಪಸ್ವರ

Last Updated 20 ಡಿಸೆಂಬರ್ 2012, 11:15 IST
ಅಕ್ಷರ ಗಾತ್ರ


ನವದೆಹಲಿ (ಐಎಎನ್‌ಎಸ್): 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನಾಗಿ ಮೋದಿ ಅವರನ್ನು ಕಣಕ್ಕಿಳಿಸಬೇಕೆಂಬ ಕೂಗಿಗೆ ಗುಜರಾತ್‌ನ ಹ್ಯಾಟ್ರಿಕ್ ಗೆಲುವು ಇನ್ನಷ್ಟು ಬಲ ತಂದಿರುವುದರ ಜತೆಗೆ ಮತ್ತಷ್ಟು ಬಿರುಕಿಗೆ ಕಾರಣವಾಗಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿಯ ರಾಜ್ಯಸಭಾ ಸದಸ್ಯೆ ಸ್ಮಿತಾ ಇರಾನಿ ಅವರು 62 ವರ್ಷದ ಮೋದಿ ಅವರು ಪ್ರಧಾನಿ ಪಟ್ಟಕ್ಕೆ ಅರ್ಹರು ಎಂದು ಹೇಳಿದ್ದಾರೆ.

ಆದರೆ ಗುಜರಾತ್‌ನ ಸೌರಾಷ್ಟ್ರ ಪ್ರಾಂತ್ಯದ ಬಿಜೆಪಿ ನಾಯಕರಾದ ವಿಜಯ್ ರೂಪಾಣಿ ಅವರು ಪ್ರಧಾನಿ ಹುದ್ದೆ ಏರಲು ಪಕ್ಷದಲ್ಲಿ ಇನ್ನೂ ಹಲವು ಸಮರ್ಥ ನಾಯಕರಿದ್ದಾರೆ ಎಂದು ಹೇಳುವ ಮೂಲಕ ಮೋದಿ ಪ್ರಧಾನಿ ಹುದ್ದೆಗೇರುವುದನ್ನು ಪರೋಕ್ಷವಾಗಿ ವಿರೋಧಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಶೇಷಾದ್ರಿ ಚಾರಿ ಅವರು ಪ್ರಸ್ತುತ ನಡೆದಿರುವ ಚುನಾವಣೆ ಲೋಕಸಭಾ ಚುನಾವಣೆ ಅಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ಮೋದಿ ಪ್ರಧಾನಿ ಆಗುವುದಕ್ಕೆ ಪರೋಕ್ಷವಾಗಿ ಅಪಸ್ವರ ತೆಗೆದಿದ್ದಾರೆ.

ಪ್ರಧಾನಿ ಹುದ್ದೆಗೆ ಮೋದಿ ಏರುತ್ತಾರೋ ಬಿಡುತ್ತಾರೋ, ಗುಜರಾತ್ ಗೆಲುವು ಅವರನ್ನು ರಾಷ್ಟ್ರೀಯ ರಾಜಕಾರಣದಲ್ಲಿ ಇನ್ನಷ್ಟು ಬಲಪಡಿಸಲಿರುವುದಂತು ಖಚಿತ ಎಂದು ಹಲವು ರಾಜಕೀಯ ವಿಶ್ಲೇಷಣಾಕಾರರು ಅಭಿಪ್ರಾಯಪಟ್ಟಿದ್ದಾರೆ.

ಇವರೆಲ್ಲರ ಲೆಕ್ಕಾಚಾರ ಏನೇ ಇರಲಿ ಬಿಡಲಿ ಅಹಮದಾಬಾದ್‌ನ ಗಲ್ಲಿಗಲ್ಲಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ `ಆಜ್ ಕಾ ಸಿಎಂ, 2014 ಕ ಪಿಎಂ' (ಇವತ್ತಿನ ಮುಖ್ಯಮಂತ್ರಿ 2014ರ ಪ್ರಧಾನಿ) ಎಂದು ಘೋಷಣೆಗಳನ್ನು ಕೂಗುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT