ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟದ ಮೈದಾನದಲ್ಲಿ ಗುರು ಭವನ: ವಿರೋಧ

Last Updated 14 ಜುಲೈ 2012, 10:10 IST
ಅಕ್ಷರ ಗಾತ್ರ

ಸವದತ್ತಿ: ನಗರದ ಶತಮಾನ ಕಂಡ ಕನ್ನಡ ಗಂಡು ಮಕ್ಕಳ ಶಾಲೆ ನಂ 1 ಎದುರಿನ ಆಟದ ಮೈದಾನದಲ್ಲಿ ಕೋಟಿ ವೆಚ್ಚದ ಗುರು ಭವನ ನಿರ್ಮಿಸುತ್ತಿರು ವುದರಿಂದ, ಮಕ್ಕಳಿಗೆ ಆಟಕ್ಕೆ ತೊಂದರೆ ಯಾಗುತ್ತದೆ ಎಂದು ಶುಕ್ರವಾರ ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ವಿರೋಧಿಸಿದರು.

1833ರಲ್ಲಿ ಕಟ್ಟಿದ ಅತ್ಯಂತ ಸುಸಜ್ಜಿತ ಕಟ್ಟಡ ಹೊಂದಿದ್ದ ಕನ್ನಡ ಗಂಡು ಮಕ್ಕಳ ಶಾಲೆ ನಂ 1, ಇಲ್ಲಿಯ ವರೆಗೆ ಇಲ್ಲಿನ ಸಮಸ್ತ ಮಕ್ಕಳ ಭವಿಷ್ಯ ರೂಪಿಸುವ ಕಾರ್ಖಾನೆಯಂತೆ ಕೆಲಸ ಮಾಡಿದ್ದರ ಪರಿಣಾಮ ಇಂದು ರಾಜ್ಯ, ದೇಶ ಹಾಗೂ ವಿದೇಶದಲ್ಲಿ ಉನ್ನತ ಉದ್ದೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಶತಮಾನ ಕಂಡ ಶಾಲೆ ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿದೆ.


ಈ ಶಾಲೆಗೊಂದು ಆಟದ ಮೈದಾನ ವಿದೆ. ಇದರ ಎದುರಲ್ಲೇ ಶಿಕ್ಷಕರ ಸೊಸೈಟಿ ಕೂಡಾ ಇದೆ. ಇಲ್ಲಿ ಕಲಿಯುವ ಮಕ್ಕಳ ನಿತ್ಯ ಶಾರೀರಕ ಚಟುವಟಿಕೆಗೆ ಇದ್ದ ಅವ್ಯವಸ್ಥೆಯ ಮೈದಾನವನ್ನು ಸುಧಾರಿಸುವುದನ್ನು ಬಿಟ್ಟು, ಗುರು-ಭವನ ನಿರ್ಮಿಸಲು ಮುಂದಾಗಿರುವದು ಎಷ್ಟು ಸಮಂಜಸ ಎಂದು ಕಳೆದ ತಿಂಗಳು 25ರಂದು ನಗರದ ಹಿರಿಯರು ಜಿಲ್ಲಾಧಿಕಾರಿ ಗಳಿಗೆ, ಸಾರ್ವಜನಿಕ ಶಿಕ್ಷಣ ಇಲಾಖೆಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರು ಪ್ರಯೋಜನವಾಗಿಲ್ಲ ಎಂದು ಶೆಟ್ಟರ್ ಹೇಳಿದರು.


ಇಷ್ಟಾದರೂ ಅಧಿಕಾರಿಗಳು ಕ್ಯಾರೇ ಎನ್ನದೆ. ಶಾಲೆಯನ್ನು ಮುಚ್ಚುವ ಹುನ್ನಾರ ನಡೆಸಿದ್ದು, ಒಂದು ಕಾಲಕ್ಕೆ ಸಾವಿರ ಸಂಖ್ಯೆ ಮಕ್ಕಳು ಕಲಿಯು ತ್ತಿದ್ದರು, ಈಗ ಬೆರಳಣಿಕೆಗೆ ತಲುಪಿದೆ ಎಂದು ಎನ್‌ಕೆಆರ್‌ಜೆ ಗ್ರೂಪ್, ಸವದತ್ತಿ ಸುಧಾರಣಾ ಸಮಿತಿ, ತಾಲ್ಲೂಕು ಸಮಾಜ ಪರಿವರ್ತನಾ ಸಮಿತಿ ಸದಸ್ಯರು ಸ್ಥಳಕ್ಕೆ ಆಗಮಿಸಿ ಪ್ರತಿಭಟಿಸಿದರು. ಅಲ್ಲಿಯೇ ಇದ್ದ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ವಿ. ಬೆಳವಡಿ, ಮುಖ್ಯ ಶಿಕ್ಷಕ ಸುಣಗಾರ ಅವರನ್ನು ಮೈದಾನದಲ್ಲಿ ಕಟ್ಟಡ ಬೇಡ ಎಂದು ಒತ್ತಾಯಿಸಿದರು.

ಮಕ್ಕಳ ಹಾಜರಾತಿ ಕುರಿತು ಮಾತ ನಾಡಿದ ಶಿಕ್ಷಕ ಸುಣಗಾರ ಅವರು, ಇಡೀ ನಗರದಲ್ಲಿ ನಾಯಿ ಕೊಡೆಯಂತೆ ಕಾನ್ವೆಂಟ್ ಶಾಲೆಗಳು ತಲೆ ಎತ್ತಿ, ಹಣ ಗಳಿಕೆಯಲ್ಲಿ ತೊಡಗಿವೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಸಂಖ್ಯೆ ಕಡಿಮೆ ಇದೆ.

ಶಿಕ್ಷಕರ ಸಂಘದ ಅಧ್ಯಕ್ಷ ಬೆಳವಡಿ ಮಾತನಾಡಿ, `ನೋಡಿ ಈ ಶಾಲೆಗೆ ಒಂದು ರೂಪ ಕೊಡುವ ಉದ್ದೇಶವಿದೆ. ಗುರು ಭವನ ನಿರ್ಮಾಣದ ನಂತರ, ಈ ಶಾಲೆ ಕೆಡವಿ. ಹೊಸ ಕಟ್ಟಡ ಕಟ್ಟುವ ಉದ್ದೇಶವಿದೆ ಎಂದರು.

`ಅಲ್ಲಾರ‌್ರೀ ಈಗಿದ್ದ ನಿಮ್ಮ ಸೊಸೈಟಿ ಜಾಗದಲ್ಲಿ ಗುರು ಭವನ ಕಟರ್ರ‌್ರೀ. ಅದನ್ನು ಬಿಟ್ಟು ಆಟದ ಮೈದಾನದೊ ಳಗ ಕಟ್ಟುವದು ಎಷ್ಟ ಸೂಕ್ತ ಎಂದು ಚಂದ್ರಶೇಖರ ಚಿಂಚಣಿ ಕೇಳಿದಾಗ, `ಮೊದಲು ಭವನ ನಿರ್ಮಾಣ ಆಗಲಿ ಆಮೇಲೆ ಮೈದಾನ ನೋಡೋಣಂತ~ ಎಂದಾಗ ನೆರೆದ ಯುವಕರು ಕಂಗಾಲಾಗಿ `ಮಕ್ಕಳ ಆಡಾಕ್ ಜಾಗಾ ಇಲ್ಲಾಂದ್ರ, ಹೆಸರು ಕಿತ್ತು ಕೊಡ್ರೀ~. ಎಂದು ಗದ್ದಲ ಮಾಡಿದರು.

ಅಷ್ಟರಲ್ಲಿ ಶಾಲಾ ಮಕ್ಕಳು ಹೊರಗೆ ಬಂದು ನಮಗ್ ಆಡಾಕ್ ಮೈದಾನ ಬೇಕ್ರಿ~ ಎಂದು ಕಟ್ಟಡಕ್ಕೆಂದು ತಗೆದ ಗುಂಡಿಗಳನ್ನು ಮುಚ್ಚಲು ಕಲ್ಲು ಹಾಕಲು ಮುಂದಾದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಪಿ.ಎಸ್.ಐ. ಪ್ರಶಾಂತ ನಾಯಕ ಸಮಾಧಾನ ಪಡಿಸಿ, ಗುಂಡಿ ಮುಚ್ಚಬೇಡಿ, ನಾಳೆ ಶಿಕ್ಷಣಾಧಿ ಕಾರಿಗಳನ್ನ ವಿಚಾರಿಸಿ ಕ್ರಮ ಕೈಗೊಳ್ಳೋಣ ಎಂದು ಪರಿಸ್ಥಿತಿ ತಿಳಿಗೊಳಿಸಿದರು.

ಪ್ರತಿಭಟನೆಯಲ್ಲಿ  ಅಮೀರ ಗೋರಿ ನಾಯಕ, ಉಮೇಶ ಗೌಡರ, ಆಸೀಫ್ ಬಾಗೋಜಿಕೊಪ್ಪ, ಈರಣ್ಣಾ ಕಾಂತಿ ಮಠ, ಮಲ್ಲು ಬೀಳಗಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT