ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಟಕ್

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್‌ಗಳ ಬಗ್ಗೆ ಯಾರು ತಾನೇ ಕೇಳಿಲ್ಲ. ಅತ್ಯದ್ಭುತ ಶಕ್ತಿಯ ದೈತ್ಯ ಬೈಕ್‌ಗಳವು. 350 ಸಿಸಿಯ ಈ ಬೈಕ್ ಹತ್ತಿ ಹೊರಟರೆ ಎಂತಹ ದುರ್ಗಮ ರಸ್ತೆಯೂ ಹೂವಿನ ಹಾಸಿಗೆಯಂತೆ ಸರಾಗವಾಗುತ್ತದೆ. ಆದರೆ ಹಿಂದಿನ ಕಾಲದ ಬುಲೆಟ್ ಬೈಕ್‌ಗಳನ್ನು ಸವಾರಿ ಮಾಡುವುದು ಈಗಿನಷ್ಟು ಸುಲಭ ಆಗಿರಲಿಲ್ಲ.
 
ಅವುಗಳ ಅಗಾಧವಾದ ಭಾರವೇ ಅನೇಕರಿಗೆ ಶತ್ರುವಾಗಿತ್ತು. ಹಾಗಿದ್ದೂ ಕೇವಲ ನೈಪುಣ್ಯತೆಯಿಂದ ಬುಲೆಟ್ ಸವಾರಿ ಮಾಡುವುದು ಸಾಧ್ಯವಿತ್ತು. ಅದನ್ನು ಸ್ಟಾರ್ಟ್ ಮಾಡಲು ಕಲಿತರೆ ಸಾಕು, ಬುಲೆಟ್ ಬೈಕನ್ನು ಅರ್ಧ ಪಳಗಿಸಿದಂತೆ ಎನ್ನುವ ಮಾತು ರಾಯಲ್ ಎನ್‌ಫೀಲ್ಡ್ ಬೈಕ್ ಲೋಕದಲ್ಲಿ ಪ್ರಚಲಿತ.

ನ್ಯೂಟ್ರಲ್ ಗಿಯರ್
ಬುಲೆಟ್‌ನ ಗಿಯರ್ ಸಿಸ್ಟಂ ಅಂತಹ ಕಷ್ಟದ್ದೇನೂ ಅಲ್ಲ. ಹಳೆಯ ಕಾಲದ ಬುಲೆಟ್‌ಗಳಿಗೆ ಕೇವಲ ನಾಲ್ಕು ಗಿಯರ್‌ಗಳು ಇರುತ್ತಿದ್ದವು. ಈಗಿನವಕ್ಕೆ ಐದು ಗಿಯರ್‌ಗಳು ಇವೆ. ಈ ಬುಲೆಟ್‌ನ ವಿಶೇಷವೆಂದರೆ ಇತರ ಬೈಕ್‌ಗಳಿಗೆ ಹೊರತಾಗಿ ಇದಕ್ಕೊಂದು ನ್ಯೂಟ್ರಲ್ ಗಿಯರ್ ವ್ಯವಸ್ಥೆ ಇರುತ್ತದೆ.

ಅಂದರೆ ಒಂದರಿಂದ ನಾಲ್ಕರವರೆಗೆ ಯಾವುದೇ ಗಿಯರ್‌ನಲ್ಲಿ ಹೋಗುತ್ತಿದ್ದರೂ, ಗಿಯರ್ ಬಾಕ್ಸ್‌ನ ಬಳಿ ಇರುವ ಒಂದು ಪುಟ್ಟ ಲಿವರ್ ಅನ್ನು ಅದುಮಿದರೆ ಸಾಕು, ಗಿಯರ್ ನ್ಯೂಟ್ರಲ್‌ಗೆ ಬೀಳುತ್ತದೆ. ಕೊನೆಯ ಗಿಯರ್‌ನಲ್ಲಿದ್ದರೆ, ಮತ್ತೆ ಒಂದರ ನಂತರ ಮತ್ತೊಂದರಂತೆ ಗಿಯರ್ ಬದಲಿಸಬೇಕಾಗಿಲ್ಲ. ಜಾವಾ ಹಾಗೂ ಯಜ್ಡಿ ಬೈಕ್‌ಗಳಲ್ಲಿ ಪ್ರತಿ ಗಿಯರ್‌ನ ಮಧ್ಯದಲ್ಲೂ ಒಂದು ನ್ಯೂಟ್ರಲ್ ಗಿಯರ್ ನೀಡುವ ಮೂಲಕವೂ ಗಮನ ಸೆಳೆಯಲಾಗಿತ್ತು.

ಟ್ವಿನ್ ಎಕ್ಸಾಸ್ಟ್ ಚೇಂಬರ್
ಇದೊಂದು ವಿಶಿಷ್ಟ ತಂತ್ರಜ್ಞಾನ. ಸಾಮಾನ್ಯವಾಗಿ ಯಾವುದೇ ದ್ವಿಚಕ್ರ ವಾಹನದಲ್ಲಿ ಒಂದು ಸೈಲೆನ್ಸರ್ ಮಾತ್ರ ಇರುತ್ತದೆ. ಎಂಜಿನ್‌ನಲ್ಲಿ ತ್ಯಾಜ್ಯವಾದ ಹೊಗೆಯನ್ನು ಉಗುಳಲಿಕ್ಕೆ ಒಂದು ಸೈಲೆನ್ಸರ್ ಎಂಬ ಹೊಗೆ ಕೊಳವೆ ಇರುತ್ತದೆ. ಸಾಮಾನ್ಯವಾಗಿ ಒಂದೇ ಸಾಕು. ಆದರೆ ಎರಡು ಸೈಲೆನ್ಸರ್ ಇರುವ ಬೈಕ್‌ಗಳನ್ನೂ ನೀವು ನೋಡಿರುತ್ತೀರ ಅಲ್ಲವೆ. ಈ ರೀತಿಯ ಬೈಕ್‌ಗಳಲ್ಲಿ ಎರಡು ಎಂಜಿನ್ ಇರುತ್ತದೆ.

ಎರಡು ಬೈಕ್‌ಗಳಿಗೆ ಸಮ ಈ ಬೈಕ್‌ಗಳು. ಆದರೆ ಭಾರತದಲ್ಲೇ ತಯಾರಾಗುತ್ತಿದ್ದ ಜಾವಾ ಹಾಗೂ ಯಜ್ಡಿ ಬೈಕ್‌ಗಳಿಗೆ ಒಂದೇ ಎಂಜಿನ್‌ಗೆ ಎರಡು ಎಕ್ಸಾಸ್ಟ್‌ಗಳಿದ್ದವು. ಹಾಗಾಗಿ ಎರಡು ಹೊಗೆ ಕೊಳವೆ ಇದ್ದದ್ದನ್ನು ನೋಡಬಹುದಿತ್ತು. ಈ ರೀತಿ ಇದ್ದ ಕಾರಣ ಈ ಬೈಕ್‌ಗೆ ಹೆಚ್ಚುವರಿ ಶಕ್ತಿಯೂ ಇತ್ತು. ಈ ಬೈಕ್‌ಗಳ ಹೆಡ್‌ನಲ್ಲಿ ಎರಡು ಹೊಗೆ ಚೇಂಬರ್‌ಗಳಿದ್ದು, ಅದರಿಂದ ಕೊಳವೆಗಳು ಆಚೆ ಬರುವಂತಹ ವಿನೂತನ ವಿನ್ಯಾಸ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT