ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೋದವರ ಔದಾರ್ಯ

Last Updated 17 ಜುಲೈ 2012, 19:30 IST
ಅಕ್ಷರ ಗಾತ್ರ

 ಅದೊಂದು ಜೋರು ಮಳೆಗಾಲದ ದಿನ. ಧೋ ಎಂದು ಸುರಿಯುತ್ತಿದ್ದ ಮಳೆಯಲ್ಲೇ ಮಕ್ಕಳು ಶಾಲೆಗೆ, ಯಜಮಾನರು ಕಚೇರಿಗೆ ತೆರಳಿಯಾಗಿತ್ತು. ಮಳೆಯಲ್ಲೇ ತರಕಾರಿಯವನ ಕೂಗು ಕೇಳಿತ್ತು. ಬ್ಯಾಗ್‌ನಿಂದ ಪುಟ್ಟ ಪರ್ಸ್ ಎತ್ತಿಕೊಂಡು ತರಕಾರಿ ತೆಗೆದುಕೊಂಡು ಬಾಗಿಲು ತೆರೆಯುವಾಗ, ಫೋನಿನ ಸದ್ದು.

ಕೈಯಲ್ಲಿದ್ದ ಪರ್ಸನ್ನು ಅಲ್ಲೇ ಬಿಟ್ಟು ಫೋನೆತ್ತಿಕೊಂಡೆ. ಆತ್ಮೀಯ ಗೆಳತಿ ಪದ್ಮಾಳ ಪತಿಯ ಆತಂಕದ ಧ್ವನಿ. ಪದ್ಮಾ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು, ನಿಮ್ಹೋನ್ಸ್ ಸೇರ್ದ್ದಿದಳು. ಕೂಡಲೇ ಬರುತ್ತೀರಾ ಎಂದು ಕೋರಿದರು. ಬಂಧು ಬಳಗಕ್ಕಿಂತ ಪ್ರಿಯಳಾದ ಗೆಳತಿಗಾದ ಅಪಘಾತದ ವಿಷಯ ಕೇಳಿ ಮನ ಕದಡಿತ್ತು.

ಇದ್ದುದನ್ನು ಇದ್ದಹಾಗೆ ಬಿಟ್ಟು, ಮನೆಗೆ ಬೀಗ ತಗುಲಿಸಿ, ಆಸ್ಪತ್ರೆಗೆ ಹೋಗಲೆಂದು ಕೆಳಗಿಳಿದು ಬಂದು, ಎದುರಿಗೆ ಸಿಕ್ಕ ಆಟೋ ಹತ್ತಿ `ನಿಮ್ಹೋನ್ಸ್~ ಎಂದೆ.

ಮರುಮಾತಿಲ್ಲದೆ ಹತ್ತಿಸಿಕೊಂಡ ಚಾಲಕ ನನ್ನ ಕಳವಳಗೊಂಡ ಮುಖ-ಕಣ್ಣಂಚಿನ ಕಂಬನಿ ಕಂಡು, ಸಾಂತ್ವನದ ಸ್ವರದಲ್ಲಿ, `ಎಲ್ಲಾ ಸರಿಹೋಗತ್ತೇ ತಾಯಿ, ಗಾಬರಿಯಾಗಬೇಡಿ~ ಎಂದ. ಮಾತನಾಡಲು ಮನಸ್ಸಿಲ್ಲದ್ದರಿಂದ ಮೌನವಹಿಸಿದೆ.

ಅರ್ಧ ಗಂಟೆಯಲ್ಲಿ ಆಟೊ ನಿಮ್ಹೋನ್ಸ್ ಆಸ್ಪತ್ರೆಯ ಮುಂದಿತ್ತು. ಆಟೋ ಮೀಟರ್ ಎಂಬತ್ತು ರೂಪಾಯಿ ತೋರಿಸುತ್ತಿತ್ತು. ಆಟೋ ಚಾರ್ಚ್ ಕೊಡಲೆಂದು ಬ್ಯಾಗ್‌ನಲ್ಲಿ ಚಿಕ್ಕ ಪರ್ಸ್‌ಗಾಗಿ ತಡಕಾಡುವಾಗ, ತರಕಾರಿ ತೆಗೆದುಕೊಂಡು ಪರ್ಸನ್ನು ಮನೆಯಲ್ಲೇ ಬಿಟ್ಟ ನೆನಪು. ಏನು ಮಾಡಲೂ ತೋಚದೆ ಪರದಾಡುತ್ತಿದ್ದ ನನಗೆ ಆಟೋ ಚಾಲಕ ಮತ್ತೆ ಹೇಳಿದ: `ಪರವಾಗಿಲ್ಲ ತಾಯಿ ಒಮ್ಮಮ್ಮೆ ಹೀಗಾಗುತ್ತೆ~!

ನನಗಂತೂ ಮಾತೇ ಹೊರಡದಾಯಿತು. `ದುಡ್ಡಿಲ್ಲದ ಮೇಲೆ ಯಾಕ್ರೀ ಬರ‌್ತೀರಿ~ ಎಂದು ದಬಾಯಿಸುತ್ತಾರೆ ಅಂದುಕೊಂಡಿದ್ದ ನನ್ನನ್ನು ಅವರ ಉದಾರತೆ, ಅಂತಃಕರಣ ದಂಗುಬಡಿಸಿತ್ತು.

.........
ಆಟೊ ಚಾಲಕರ ಕುರಿತು ದೂರುಗಳೇ ತುಂಬಿರುವ ನಗರವಿದು. ಅದಕ್ಕೆ ಅಪವಾದವೆಂಬಂತೆ ಬದುಕುವ ಅನೇಕ ಚಾಲಕರು ಇದ್ದಾರೆ. ಅಂಥವರು ನಿಮ್ಮ ಅನುಭವಕ್ಕೂ ಬಂದಿರಬಹುದು. ಆ ಕಥನವನ್ನು 350 ಪದಗಳ ಮಿತಿಯಲ್ಲಿ ಬರೆದು ಕಳುಹಿಸಿ.

ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಬರವಣಿಗೆ ಇರಲಿ. ಇ-ಮೇಲ್: metropv@prajavani.co.in. ವಿಳಾಸ: ಆಟೊ ಕತೆಗಳು, ಮೆಟ್ರೊ, ನಂ.75, ಎಂ.ಜಿ.ರಸ್ತೆ, ಬೆಂಗಳೂರು- 560 001


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT