ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟ್ಯಾಪಾಟ್ಯಾ: ಧಾರವಾಡ, ಚಂದರಗಿ ತಂಡಗಳಿಗೆ ಗೆಲುವು

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಧಾರವಾಡದ ಯುನಿವರ್ಸಿಟಿ ಪಬ್ಲಿಕ್ ಶಾಲೆ ಹಾಗೂ ಬೆಳಗಾವಿ ಜಿಲ್ಲೆಯ ಚಂದರಗಿ ಕ್ರೀಡಾ ಶಾಲೆ ತಂಡಗಳು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಯಾವಗಲ್ ಗ್ರಾಮದಲ್ಲಿ ಶನಿವಾರ ಆರಂಭವಾದ ರಾಜ್ಯ ಮಟ್ಟದ ಆಟ್ಯಾಪಾಟ್ಯಾ ಚಾಂಪಿಯನ್‌ಷಿಪ್‌ನ ಸಬ್ ಜೂನಿಯರ್ ಬಾಲಕರ ವಿಭಾಗದಲ್ಲಿ ಮುನ್ನಡೆದಿವೆ.

ರಾಜ್ಯ ಆಟ್ಯಾಪಾಟ್ಯಾ ಸಂಸ್ಥೆ ಹಾಗೂ ಯಾವಗಲ್ ಯುವಕರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಪಂದ್ಯದಲ್ಲಿ ಯೂನಿವರ್ಸಿಟಿ ಪಬ್ಲಿಕ್ ಶಾಲೆ 2-0 ಸೆಟ್ ಅಂತರದಿಂದ ಬೆಳಗಾವಿ ಜಿಲ್ಲಾ ತಂಡವನ್ನು ಮಣಿಸಿತು.

ಮತ್ತೊಂದು ಪಂದ್ಯದಲ್ಲಿ ಚಂದರಗಿ ಕ್ರೀಡಾಶಾಲೆಯು 2-0 ಸೆಟ್ ಅಂತರದಿಂದ ಹಾವೇರಿ ತಂಡ­ವನ್ನು ಪರಾಭವಗೊಳಿಸಿತು.

ಬಾಲಕಿಯರ ಜೂನಿಯರ್ ವಿಭಾಗದ ಪಂದ್ಯದಲ್ಲಿ ಗದಗ ಜಿಲ್ಲೆಯ ನರೇಗಲ್‌ನ ಶ್ರೀ ಅನ್ನದಾನೇಶ್ವರ ವಿದ್ಯಾವರ್ಧಕ ಶಾಲೆ ತಂಡವು 2-0 ರಲ್ಲಿ ಹುಬ್ಬಳ್ಳಿಯ ಚಾಲುಕ್ಯ ಕ್ಲಬ್ ವಿರುದ್ಧ ಗೆಲುವು ದಾಖಲಿಸಿತು.

ಹೊನಲು-ಬೆಳಕಿನಲ್ಲಿ ಪಂದ್ಯಗಳನ್ನು ಆಯೋಜಿಸಲಾಗಿದ್ದು, ನೂರಾರು ಪ್ರೇಕ್ಷಕರು ಶನಿವಾರ ಪಂದ್ಯ  ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT