ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡೋಣ, ಆಟ ಆಡೋಣ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಜಿಲಿನ ಧರಣಿಮಂಡಲ ಮಧ್ಯದೊಳಗೆ, ಅಮೆಜಾನ್ ಮಹಾನದಿಯು ಪೊರೆಯುತಿರುವ ಹಸಿರುತಾಣಗಳಲ್ಲಿ `ಜಿಂಗು ರಾಷ್ಟ್ರೀಯ ಉದ್ಯಾನವನ~ವೂ ಒಂದು. ಆ ಕಾನನವನ್ನೇ ಊರಾಗಿಸಿಕೊಂಡು ಬಾಳುತಿರುವ ಹದಿನಾಲ್ಕು ಗುಡ್ಡಗಾಡು ಸಮುದಾಯಗಳೊಲು `ಯವಲಪಿಟಿ~ಯೂ ಒಂದು.

ಅಬಾಲ ವೃದ್ಧರಾದಿಯಾಗಿ ಯವಲಪಿಟಿಗಳಿಗೆಲ್ಲ ಪಾಲುಗೊಳುವ `ಕ್ವರುಪ್~ ಒಂದು ತ್ರಿವೇಣಿ ಸಂಭ್ರಮ. ಹುಟ್ಟಿನ ಸಂಭ್ರಮದ, ಸಾವಿನ ಸೂತಕದ ಹಾಗೂ ಪುನರ್ಜನ್ಮದ ಪ್ರಾರ್ಥನೆಯ ಸಂಭ್ರಮ. ಈಚೆಗೆ ನಡೆದ ಇಂಥ ಸಂಗಮ ಸಂಭ್ರಮದಲ್ಲಿ  ಯವಲಪಿಟಿಗಳು ಸ್ಮರಿಸಿದ್ದು ಇಬ್ಬರನ್ನು- ಅವರಲ್ಲೊಬ್ಬರು ಯವಲಪಿಟಿಯ ಇಂಡಿಯನ್. ಮತ್ತೊಬ್ಬರು ಆದಿವಾಸಿಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಲೇಖಕ-ರಾಜಕಾರಣಿ ಡರ್ಸಿ ರಿಬಿರೊ.
 
ಈ ಇಬ್ಬರನ್ನು ಯವಲಪಿಟಿ ಸಮುದಾಯ ಸ್ಮರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ, ಛಾಯಾಗ್ರಾಹಕ ಊಸ್ಲಿ ಮಾರ್ಸೆಲಿನೊ `ಜಿಂಗು~ವಿಗೆ ಬಂದು, ಆದಿವಾಸಿಗಳ ಜೊತೆ ಒಂದಿಷ್ಟು ದಿನ ಕಳೆದರು. ಅಲ್ಲಿದ್ದ ಅಷ್ಟೂ ದಿನ, ಅವರ ಕ್ಯಾಮೆರಾಕ್ಕೆ ಭರ್ಜರಿ ಹಬ್ಬ. ಕಟೆದ ಶಿಲೆಯಂಥ ಯವಲಪಾಟಿ ತುಂಟರ ಆಟ - ವಿನೋದಗಳನ್ನು ಮಾರ್ಸೆಲಿನೊ ಸೆರೆಹಿಡಿದರು. ಅವುಗಳಲ್ಲಿ ಕೆಲವು `ಮಾತನಾಡುವ ಚಿತ್ರಗಳು~ ಇಲ್ಲಿವೆ.
ಚಿತ್ರಗಳು : ರಾಯಿಟರ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT