ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತಂಕದಲ್ಲಿ ವೆಸ್ಟ್‌ಇಂಡೀಸ್‌

ಕ್ರಿಕೆಟ್‌: ನ್ಯೂಜಿಲೆಂಡ್‌ ತಂಡದ ಬೃಹತ್‌ ಮೊತ್ತ
Last Updated 12 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವೆಲಿಂಗ್ಟನ್‌ (ಎಎಫ್‌ಪಿ):  ವೆಸ್ಟ್‌ ಇಂಡೀಸ್‌ ತಂಡದವರು ಇಲ್ಲಿ ನಡೆ ಯುತ್ತಿರುವ ನ್ಯೂಜಿಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಆತಂಕಕ್ಕೆ ಸಿಲುಕಿದ್ದಾರೆ.

ಬೇಸಿನ್‌ ರಿಸರ್ವ್‌ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್‌ನ ಮೊದಲ ಇನಿಂಗ್ಸ್‌ನ 441 ರನ್‌ಗಳಿಗೆ ಉತ್ತರವಾಗಿ ಪ್ರವಾಸಿ ವಿಂಡೀಸ್‌ ಎರಡನೇ ದಿನದಾಟದ ಅಂತ್ಯಕ್ಕೆ ತಮ್ಮ ಪ್ರಥಮ ಇನಿಂಗ್ಸ್‌ನಲ್ಲಿ 37 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 158 ರನ್‌ ಗಳಿಸಿದ್ದಾರೆ. ಫಾಲೋಆನ್‌ನಿಂದ ಪಾರಾಗಲು ಇನ್ನೂ 83 ರನ್‌ಗಳು ಅಗತ್ಯವಿದೆ.

ವಿಂಡೀಸ್‌ಗೆ ಉತ್ತಮ ಆರಂಭವೇ ಲಭಿಸಿತ್ತು. ಕರ್ಕ್‌ ಎಡ್ವರ್ಡ್ಸ್‌ ಹಾಗೂ ಕೀರನ್‌ ಪೊವೆಲ್‌ ಮೊದಲ ವಿಕೆಟ್‌ಗೆ 46 ರನ್‌ ಸೇರಿಸಿದ್ದರು. ಆಗ ಟಿಮ್‌ ಸೌಥಿ ಬೌಲಿಂಗ್‌ನಲ್ಲಿ ಪೊವೆಲ್‌ ವಿಕೆಟ್‌ ಒಪ್ಪಿಸಿದರು. ನಂತರ ಬಂದ ಡರೆನ್‌ ಬ್ರಾವೊ ಕೂಡ ವಿಫಲರಾದರು. ಆಗ ಎಡ್ವರ್ಡ್ಸ್‌ (55; 74 ಎ., 6 ಬೌಂ.) ಜೊತೆಗೂಡಿದ  ಸ್ಯಾಮುಯೆಲ್ಸ್‌ ತಂಡಕ್ಕೆ ಆಸರೆಯಾದರು.

ಎಡ್ವರ್ಡ್ಸ್‌ ಹಾಗೂ ಪೊವೆಲ್‌ ಮೂರನೇ ವಿಕೆಟ್‌ಗೆ 36 ರನ್‌ ಸೇರಿಸಿದರು. ಆದರೆ 16 ರನ್‌ಗಳ ಅಂತರದಲ್ಲಿ ಬಿದ್ದ ಎರಡು ವಿಕೆಟ್‌ಗಳು ವಿಂಡೀಸ್‌ ತಂಡದ ಹಿನ್ನಡೆಗೆ ಕಾರಣವಾದವು. ಶಿವನಾರಾಯಣ ಚಂದ್ರಪಾಲ್‌ ಕೂಡ ವಿಫಲರಾದರು. ಸ್ಯಾಮುಯೆಲ್ಸ್‌ (ಬ್ಯಾಟಿಂಗ್‌ 50; 57 ಎ., 9 ಬೌಂ.) ಮೂರನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದಿರಿಸಿದ್ದಾರೆ. ಕೋರಿ ಜೆ.ಆ್ಯಂಡರ್ಸನ್‌ (20ಕ್ಕೆ2) ಪ್ರಭಾವಿಯಾಗಿದ್ದರು. ದಿನದಾಟದ ವೇಳೆ ಮಳೆ ಅಡ್ಡಿಪಡಿಸಿತು. ಹಾಗಾಗಿ 63.1 ಓವರ್‌ಗಳ ಆಟ ಮಾತ್ರ ನಡೆಯಿತು.

ಇದಕ್ಕೂ ಮೊದಲು ನ್ಯೂಜಿಲೆಂಡ್‌ ತಮ್ಮ ಮೊದಲ ಇನಿಂಗ್ಸ್‌ನಲ್ಲಿ 115.1 ಓವರ್‌ಗಳಲ್ಲಿ 441 ರನ್‌ಗಳಿಗೆ ಎಲ್ಲಾ ವಿಕೆಟ್‌ ಕಳೆದುಕೊಂಡಿತು. ರಾಸ್‌ ಟೇಲರ್‌ ಅವರ ಶತಕದ ಬಳಿಕ ಉಳಿದ ಆಟಗಾರರು ತಂಡದ ಮೊತ್ತ ಹೆಚ್ಚಿಸುವಲ್ಲಿ ನೆರವಾದರು. ಬಿಜೆ ವಾಟ್ಲಿಂಗ್‌ (65; 125 ಎ, 5 ಬೌಂಡರಿ) ಅರ್ಧ ಶತಕ ಗಳಿಸಿದರು. ಕೆರಿಬಿಯನ್‌ ಬಳಗದ ಟಿನೊ ಬೆಸ್ಟ್‌ ನಾಲ್ಕು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌: ಮೊದಲ ಇನಿಂಗ್ಸ್‌: 115.1 ಓವರ್‌ಗಳಲ್ಲಿ 441 (ಬಿಜೆ ವಾಟ್ಲಿಂಗ್‌ 65, ಇಶ್‌ ಸೋಧಿ 27; ಟಿನೊ ಬೆಸ್ಟ್‌ 110ಕ್ಕೆ4, ಶಾನೋನ್‌ ಗ್ಯಾಬ್ರಿಯಲ್‌ 86ಕ್ಕೆ2, ಡರೆನ್‌ ಸಮಿ 92ಕ್ಕೆ1);

ವೆಸ್ಟ್‌ಇಂಡೀಸ್‌: ಮೊದಲ ಇನಿಂಗ್ಸ್‌: 37 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 158 (ಕರ್ಕ್ ಎಡ್ವರ್ಡ್ಸ್‌ 55, ಮಾರ್ಲೊನ್‌ ಸ್ಯಾಮುಯೆಲ್ಸ್‌ ಬ್ಯಾಟಿಂಗ್‌ 50; ಕೋರಿ ಜೆ. ಆ್ಯಂಡರ್ಸನ್‌ 20ಕ್ಕೆ2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT