ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮ ಮತ್ತು ಹೃದಯ

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಕ್ಷತ್ರಗಳ ನಡುವೆ ಹರಡಿರುವ ದೂಳು ಮತ್ತು ಅನಿಲ ವೈವಿಧ್ಯಮಯ ಚಿತ್ತಾರಗಳನ್ನು ಮೂಡಿಸುತ್ತದೆ. ಈಚಿನ ದಿನಗಳಲ್ಲಿ ಹಬಲ್ ದೂರದರ್ಶಕ ನಮ್ಮ ಕಣ್ಣಿಗೆ ಕಾಣದ ವಿವರಗಳನ್ನು ಒದಗಿಸುತ್ತಿರುವ ಕಾರಣ ಹೊಸ ಹೊಸ ನೆಬ್ಯುಲಾಗಳು ಹೊಸ ಹೊಸ ಆಕಾರಗಳು ಕಾಣುತ್ತಿವೆ. ಕಾಸಿಯೋಪಿಯ (ಕುಂತಿ) ನಕ್ಷತ್ರ ಪುಂಜದಲ್ಲಿ ಹೀಗೆ ಪತ್ತೆಯಾದ ನೆಬ್ಯುಲಾ ‘ಐಸಿ 1805’ ಎಂಬ ಸಂಖ್ಯೆಯ ನಮೂದು ಪಡೆದಿದೆ.

ಇದರ ಅಂತರಾಳದಲಿ ್ಲಹೊಸದಾಗಿ ಜನ್ಮ ತಾಳಿದ ನಕ್ಷತ್ರಗುಚ್ಛವೊಂದಿದೆ. ಕೇವಲ ಒಂದೂವರೆ ಮಿಲಿಯನ್ ವರ್ಷಗಳ ಹಿಂದೆ ಈ ನಕ್ಷತ್ರಗಳು ಸೃಷ್ಟಿಯಾದವು. ಇವುಗಳಿಂದ ಹೊರ ಬೀಳುತ್ತಿರುವ ಶಕ್ತಿಯುತ ಕಣ ಪ್ರವಾಹ ಸುತ್ತಲಿನ ಅನಿಲವನ್ನು ತಳ್ಳಿ ಈ ಬಗೆಯ ಚಿತ್ತಾರಗಳನ್ನು ಮೂಡಿಸುತ್ತಿದೆ. ಹೈಡ್ರೋಜನ್ ಮತ್ತು ಎಲೆಕ್ಟ್ರಾನ್‌ಗಳ ಪ್ರವಾಹ ಇದು. ಈ ನಕ್ಷತ್ರಗುಚ್ಛಕ್ಕೆ ‘ಮೆಲೊಟ್ 15’ ಎಂಬ ಗುರುತಿನ ಸಂಖ್ಯೆ ಇದೆ. ಇದರಲ್ಲಿ ಸೌರರಾಶಿಯ ಸುಮಾರು 50 ಪಟ್ಟು ಹೆಚ್ಚು ದ್ರವ್ಯರಾಶಿಯ ನಕ್ಷತ್ರಗಳು ಕನಿಷ್ಠ ಐವತ್ತಾದರೂ ಇವೆ ಎಂಬು ಒಂದು ಅಂದಾಜು.

ನಮ್ಮ ಆಕಾಶಗಂಗೆಯ ಸುರುಳಿಗಳು ಬೇರೆ ಬೇರೆ ದಿಕ್ಕುಗಳಲ್ಲಿ ಹರಡಿರುವಂತೆ ಕಾಣುತ್ತದೆ. ನಾವು ಅದರೊಳಗೇ ಕುಳಿತಿರುವುದರಿಂದ ಈ ಕಲ್ಪನೆ ಬರುತ್ತದೆ. ಗುರುತಿಸಲು ಸಹಾಯವಾಗುವಂತೆ ಈ  ಸುರುಳಿಗಳಿಗೆ ಆಯಾ ನಕ್ಷತ್ರ ಪುಂಜಗಳ ಹೆಸರೇ ಇದೆ. ‘ಐಸಿ 1805’ ನಕ್ಷತ್ರ ಗುಚ್ಛ ಮತ್ತು ಅದನ್ನು ಆವರಿಸಿದ ನೆಬ್ಯುಲಾ ಇವೆರಡೂ ಪರ್ಸಿಯುಸ್ (ಪಾರ್ಥ) ಎಂಬ ಹೆಸರು ಪಡೆದ ಸುರುಳಿಯಲ್ಲಿದೆ. ಸುರುಳಿಯೇನೋ ನಮ್ಮಿಂದ ಸುಮಾರು 6000-6500 ಜ್ಯೋತಿರ್ವರ್ಷ ದೂರದಲ್ಲಿದೆ. ಆದರೆ ನೆಬ್ಯುಲಾ ಇನ್ನೂ ದೂರದಲ್ಲಿದೆ. ಸುಮಾರು 7500 ಜ್ಯೋತಿರ್ವರ್ಷ ಎಂಬುದು ಅಂದಾಜು.

ನೆಬ್ಯುಲಾದಲ್ಲಿ ಎರಡು ಭಾಗಗಳನ್ನು ಗುರುತಿಸಬಹುದು.  ಒಂದು ಹೃದಯದ ಆಕಾರವನ್ನು ಹೋಲುತ್ತದೆ. ಆದ್ದರಿಂದ ಇವುಗಳಿಗೆ ಜೊತೆಯಾಗಿ ಹೃದಯ ಮತ್ತು ಆತ್ಮ (ಹಾರ್ಟ್ ಮತ್ತು ಸೋಲ್) ಎಂದು ಹೆಸರಿಟ್ಟಿದ್ದಾರೆ. ವಾಸ್ತವದಲ್ಲಿ ಈ ಎರಡೂ ನೆಬ್ಯುಲಾಗಳು ಒಂದೇ - ಇವುಗಳ ಮಧ್ಯದಲ್ಲಿ ಬೆಳಕನ್ನು ಪೂರ್ಣವಾಗಿ ತಡೆಹಿಡಿಯಬಲ್ಲ ದಟ್ಟ ಅನಿಲ ರಾಶಿ ಇದೆ ಎಂಬುದು ಅಧ್ಯಯನದಿಂದ ತಿಳಿದು ಬರುತ್ತದೆ. ಇಲ್ಲಿ ಮುಂದೆ ನಕ್ಷತ್ರ ರಚನೆಯಾಗುವ ಸಾಧ್ಯತೆ ಇದೆ. ಇವುಗಳಿಗೆ ಬಾಕ್ ಗಾಬ್ಲ್ಯೂಲ್ ಎಂದು ಹೆಸರಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಲ್ಲಿ  ್ಲಹೊಸ ನಕ್ಷತ್ರಗಳು ಕಾಣಿಸಿಕೊಳ್ಳಬಹುದು. ಹೃದಯದ ಆಕಾರದ ನೆಬ್ಯುಲಾದಲ್ಲಿ ಮಧ್ಯೆ ಇರುವ ಗಂಟಿನಂತಹ ರಚನೆ ಅನೇಕ ಬಗೆಯ ಅಧ್ಯಯನಕ್ಕೆ ಒಳಪಟ್ಟಿದೆ. ಇದು ನೆಬ್ಯುಲಾದ ಉಳಿದ ಭಾಗಕ್ಕಿಂತ ಪ್ರಕಾಶಮಾನವಾಗಿರುವುದೇ ಕುತೂಹಲಕ್ಕೆ ಕಾರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT