ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆ: ಅವಲೋಕನವಾಗಲಿ

Last Updated 4 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಇತ್ತೀಚೆಗೆ ವಿಜಾಪುರದಲ್ಲೊಬ್ಬ ಬಾಲಕ ಬೆಂಕಿಗಾಹುತಿಯಾದ. ಬೆಂಗಳೂರಿನಲ್ಲೊಬ್ಬ ಬಾಲೆ ನೇಣು ಬಿಗಿದುಕೊಂಡು ಸಾವಿಗೆ ಬಲಿಯಾದಳು.  ಪತ್ರಿಕೆಗಳಲ್ಲಿ  ಭಯೋತ್ಪಾದಕರ ಕೃತ್ಯಗಳು, ದರೋಡೆ, ಬಲಾತ್ಕಾರ ಮೊದಲಾದ  ಸಾಮಾನ್ಯವೆಂಬಂತಾಗಿದ್ದ ಸುದ್ದಿಗಳ ಜೊತೆಗೆ ಈಗ ಆತ್ಮಹತ್ಯೆಯಂತಹ ಸುದ್ದಿಗಳೂ ಸಹಜವೆನಿಸುವಂತೆ ಮಾಧ್ಯಮಗಳಲ್ಲಿ  ವರದಿಯಾಗುತ್ತಿವೆ. 

ಪೋಷಕರ ಅತಿಯಾದ ಮಹತ್ವಾಕಾಂಕ್ಷೆಗಳ ಜೊತೆಗೆ ಮಕ್ಕಳ ಮಾನಸಿಕ, ಬೌದ್ಧಿಕ ಸಾಮರ್ಥ್ಯವನ್ನು ಪರಿಗಣಿಸದೇ ಅನಗತ್ಯವಾದ ಒತ್ತಡವನ್ನು ಹೇರುವುದರಿಂದಾಗಿ ಮಕ್ಕಳು ಸಹ ಆತ್ಮಹತ್ಯೆಯಂತಹ ಕಠೋರ ಕ್ರಮಕ್ಕೆ ಮುಂದಾಗುತ್ತಿವೆ. ಆತ್ಮಹತ್ಯೆ ಮುಂದಿನ ದಿನಗಳಲ್ಲಿ ಒಂದು ಪಿಡುಗಾಗಿ ಸಮಾಜವನ್ನು ಕಾಡುವ ಸನ್ನಿವೇಶ ಬರುವುದರಲ್ಲಿ ಅನುಮಾನವಿಲ್ಲ.  ಆದ್ದರಿಂದ ದಯಮಾಡಿ ಸರ್ಕಾರ - ಸಮಾಜದ ಚಿಂತಕರು ಮಕ್ಕಳ ಮನೋಸ್ಥೈರ್ಯವನ್ನು ಹೆಚ್ಚಿಸುವ ದಿಸೆಯಲ್ಲಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮನಸ್ಸು ಮಾಡಲಿ.  ಮಕ್ಕಳ ಬಾಲ್ಯವನ್ನು ಸಹಜವಾಗಿ ಅನುಭವಿಸಲು ಬಿಟ್ಟರೆ ಎಷ್ಟೋ ಸಮಸ್ಯೆಗಳು ಪರಿಹಾರವಾಗಬಹುದು. 
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT