ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆತ್ಮಹತ್ಯೆಗಳ ಸಂಖ್ಯೆಯಲ್ಲಿ ಹೆಚ್ಚಳ

Last Updated 2 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ ವರ್ಷ ದೇಶದಲ್ಲಿ ಒಟ್ಟು 1.35 ಲಕ್ಷ ಜನರು ಆತ್ಮಹತ್ಯೆ ಮಾಡಿಕೊಂಡ್ದ್ದಿದಾರೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ.

ಇದರಲ್ಲಿ ಪಶ್ಚಿಮ ಬಂಗಾಳ (16,492) ಮೊದಲ ಸ್ಥಾನದಲ್ಲಿದ್ದು, ತಮಿಳುನಾಡು (15,963) ಮಹಾರಾಷ್ಟ್ರ (15,947), ಆಂಧ್ರಪ್ರದೇಶ (15,077) ಹಾಗೂ ಕರ್ನಾಟಕ (12,622) ನಂತರದ ಸ್ಥಾನಗಳಲ್ಲಿವೆ.

ಆತ್ಮಹತ್ಯೆಗೆ ಬಡತನ ಪ್ರಮುಖ ಕಾರಣವಾಗ್ದ್ದಿದರೆ, ಕೌಟುಂಬಿಕ ಸಮಸ್ಯೆಗಳು ಮತ್ತು ಕಾಯಿಲೆಗಳಿಂದ ಕ್ರಮವಾಗಿ ಶೇ 24.3ರಷ್ಟು ಹಾಗೂ ಶೇ 19.6ರಷ್ಟು ಮಂದಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಅಂಕಿ-ಅಂಶಗಳು ಹೇಳಿವೆ.

ಪ್ರೇಮ ಪ್ರಕರಣಗಳು (ಶೇ 3.4), ಮಾದಕ ವಸ್ತು ಸೇವನೆ (ಶೇ 2.7), ವರದಕ್ಷಿಣೆ ಕಿರುಕುಳ (ಶೇ 2.4) ಮತ್ತು ಸಾಲಬಾಧೆ (ಶೇ 2.2)ಆತ್ಮಹತ್ಯೆಗೆ ಇನ್ನಿತರ ಕಾರಣಗಳಾಗಿವೆ. ಆಶ್ಚರ್ಯದ ಸಂಗತಿ ಎಂದರೆ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆಯ ಪ್ರಮಾಣ ಭಾರಿ ಕಡಿಮೆಯಾಗಿದ್ದು ಕೇವಲ ಶೇ 3.6ರಷ್ಟು ಮಾತ್ರ ದಾಖಲಾಗಿದೆ.

2001ಕ್ಕೆ ಹೋಲಿಸಿದಲ್ಲಿ ಈ ಸಂಖ್ಯೆಯಲ್ಲಿ ಶೇ 25ರಷ್ಟು ಹೆಚ್ಚಳ ಕಂಡುಬಂದಿದೆ. 2001ರಲ್ಲಿ ಈ ಸಂಖ್ಯೆ 1.08.506 ರಷ್ಟಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT