ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶ ಹಗರಣದಲ್ಲಿ ಶಿಂಧೆ ಪಾತ್ರ ಇಲ್ಲ

ಬಾಂಬೆ ಹೈಕೋರ್ಟ್‌ಗೆ ಸಿಬಿಐ ಪ್ರಮಾಣಪತ್ರ
Last Updated 19 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಇಲ್ಲಿನ ಆದರ್ಶ ವಸತಿ ಸಹಕಾರ ಸಂಘದ ಹಗರಣದಲ್ಲಿ ಕೇಂದ್ರ ಗೃಹ ಸಚಿವ ಸುಶೀಲ್‌­ಕುಮಾರ್‌ ಶಿಂಧೆ ಅವರ ಪಾತ್ರ ಇಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ.

ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾಗ ಈ ಹಗರ­ಣದ ಸಂಬಂಧ ಅಧಿಕಾರ ದುರ್ಬ­ಳಕೆ ಮಾಡಿಕೊಂಡಿದ್ದಾರೆ ಎಂಬ ಆರೋ­ಪಕ್ಕೆ ಯಾವ ಸಾಕ್ಷಿ– ಆಧಾರಗಳೂ ಇಲ್ಲ ಎಂದು ತನಿಖಾ ಸಂಸ್ಥೆಯು ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ದಕ್ಷಿಣ ಮುಂಬೈನಲ್ಲಿರುವ 31 ಅಂತಸ್ತುಗಳ ವಿಲಾಸಿ ‘ಆದರ್ಶ ವಸತಿ ಸಂಕೀರ್ಣ’ದಲ್ಲಿ ಶಿಂಧೆ ಬೇನಾಮಿ ಫ್ಲ್ಯಾಟ್‌ಗಳನ್ನು ಹೊಂದಿ­ರುವು­ದರಿಂದ ಅವರನ್ನೂ ಹಗರಣದಲ್ಲಿ ಆರೋಪಿಯೆಂದು ಪರಿಗಣಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯ­ಕರ್ತ ಪ್ರವೀಣ್‌ ವಾಟೆ­ಗಾಂವ್ಕರ್‌ ಕೋರ್ಟ್‌ಗೆ ಅರ್ಜಿ ಸಲ್ಲಿಸಿ­ದ್ದರು.

ಇದಕ್ಕೆ ಪ್ರತಿಕ್ರಿಯೆ­ಯಾಗಿ ಸಿಬಿಐ ನ್ಯಾಯಾಲ­ಯಕ್ಕೆ ಸಲ್ಲಿಸಿದ ಪ್ರಮಾಣ­ಪತ್ರದಲ್ಲಿ ಹೀಗೆ ಹೇಳಿದೆ.

ಹಗರಣಕ್ಕೆ ಸಂಬಂಧಿಸಿದಂತೆ ತಾನು ನಡೆಸುತ್ತಿರುವ ತನಿಖೆಯಲ್ಲಿ ಶಿಂಧೆ ಅವರನ್ನು ಆರೋಪಿಯಾಗಿ ಪರಿಗ­ಣಿಸು­ವ ಅಗತ್ಯವಿದೆ ಎಂದು ತೋರು­ತ್ತಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT