ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದಾಯ ತೆರಿಗೆ ವಿನಾಯಿತಿ ಮಿತಿ ಏರಿಕೆ ಸಾಧ್ಯತೆ

Last Updated 1 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಣದುಬ್ಬರ ದರ ಏರಿಕೆ ಹಾದಿಯಲ್ಲಿರುವುದರಿಂದ 2011-12ನೇ ಸಾಲಿನ ಬಜೆಟ್‌ನಲ್ಲಿ ಈಗಿರುವ ವೈಯಕ್ತಿಕ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 1.6 ಲಕ್ಷದಿಂದ 2ಲಕ್ಷಕ್ಕೆ  ಹೆಚ್ಚಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ.

ಫೆಬ್ರುವರಿ 28ರಂದು ಪ್ರಸಕ್ತ ಸಾಲಿನ ಬಜೆಟ್ ಮಂಡನೆಯಾಗಲಿದೆ. ಆದಾಯ ತೆರಿಗೆ  ಬದಲಿಗೆ ಜಾರಿಗೆ ತರಲು ಉದ್ದೇಶಿಸಲಾಗಿರುವ 2012-13ರ ನೇರ ತೆರಿಗೆ ಕಾಯ್ದೆಯನ್ನು (ಡಿಟಿಸಿ) ಗಮನದಲ್ಲಿಟ್ಟುಕೊಂಡು, ಈಗಿರುವ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 1.6 ಲಕ್ಷದಿಂದ 2ಲಕ್ಷಕ್ಕೆ  ಹೆಚ್ಚಿಸುವ ಪ್ರಸ್ತಾವ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರ ಮುಂದಿದೆ.
ವೈಯಕ್ತಿಕ ತೆರಿಗೆ ಪಾವತಿದಾರರಿಗೆ ಸದ್ಯ 1.6 ಲಕ್ಷದ ವರೆಗೆ ವಿನಾಯಿತಿ ಇದೆ. ಮಹಿಳೆಯರಿಗೆ 1.9 ಲಕ್ಷ ಹಾಗೂ ಹಿರಿಯ ನಾಗರಿಕರಿಗೆ 2.4 ಲಕ್ಷದವರೆಗೆ ವಿನಾಯಿತಿ ಕಲ್ಪಿಸಲಾಗಿದೆ.

‘ಡಿಟಿಸಿ’ ಕಾಯ್ದೆ ಮುಂದಿನ ವರ್ಷ ಏಪ್ರಿಲ್‌ನಿಂದ ಜಾರಿಗೆ ಬರಲಿದ್ದು, ಇದರಲ್ಲಿ 2ರಿಂದ 5 ಲಕ್ಷದವರೆಗೆ ಶೇಕಡ 10ರಷ್ಟು,  5 ರಿಂದ 10 ಲಕ್ಷದವರೆಗೆ ಶೇ 20ರಷ್ಟು ಹಾಗೂ 10 ಲಕ್ಷದ ಮೇಲೆ ಶೇ 30ರಷ್ಟು ತೆರಿಗೆ ಶ್ರೇಣಿಯನ್ನು ವಿಂಗಡಿಸಲಾಗಿದೆ. 

ಹಣದುಬ್ಬರ ಏರಿಕೆಯಿಂದ ಬಜೆಟ್‌ನಲ್ಲಿ ತೆರಿಗೆ ವಿನಾಯಿತಿ ಮಿತಿಯನ್ನು ವಿಸ್ತರಿಸುವ ಸಾಧ್ಯತೆ ಹೆಚ್ಚು ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT