ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್ ಕೇಂದ್ರ ಸ್ಥಗಿತ: ಗ್ರಾಮಸ್ಥರ ಪರದಾಟ

Last Updated 12 ಜನವರಿ 2012, 9:35 IST
ಅಕ್ಷರ ಗಾತ್ರ

ಯಾದಗಿರಿ: ಇಲ್ಲಿಯ ಗ್ರಾಮದ ಉರ್ದು ಶಾಲೆ ಪಕ್ಕದ ಕೋಣೆಯಲ್ಲಿ ಈಚೆಗೆ ಆಧಾರ್ ಕೇಂದ್ರಕ್ಕೆ ಚಾಲನೆ ದೊರೆಯಿತು. ಕಳೆದ ಎರಡು ದಿನಗಳಿಂದ ಆಧಾರ್ ಕೇಂದ್ರದ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬರದೆ ಇರುವುದರಿಂದ ಗ್ರಾಮಸ್ಥರು ಪರದಾಡುತ್ತಿದ್ದಾರೆ.

ಕೇಂದ್ರದ ಮುಂದೆ ಬೆಳಗ್ಗಿನಿಂದ ಸಾಯಂಕಾಲದವರೆಗೆ ಸಾಲು ನಿಂತರೂ, ಕೇಂದ್ರದ ಸಿಬ್ಬಂದಿ ಮನಬಂದಂತೆ ಬರುತ್ತಾರೆ ಎಂಬುದು ಜನರ ಆರೋಪ. ಮಂಗಳವಾರ ಆಧಾರ್ ಕೇಂದ್ರ ಸಂಪೂರ್ಣ ಬಾಗಿಲು ಮುಚ್ಚಿದ್ದರಿಂದ ಕೇಂದ್ರಕ್ಕೆ ಬೆಳಗಿನಿಂದ ಸಾಯಂಕಾಲದವರೆಗೆ ಜನರು ಬಂದು ವಾಪಾಸ್ಸಾಗುವ ದಶ್ಯ ಸಾಮಾನ್ಯ ವಾಗಿತ್ತು ಅಲ್ಲದೆ, ಸಿಬ್ಬಂದಿ ಮೇಲೆ ಹಿಡಿಶಾಪ ಹಾಕಿದರು.

ಜನರು ಆಧಾರ್ ಕೇಂದ್ರದಲ್ಲಿ ನೋಂದಾಯಿಸಲು ಕೃಷಿ ಕೂಲಿ ಕಾರ್ಮಿಕರು ದಿನದ ಕೆಲಸ ಕಾರ್ಯಗಳನ್ನು ಬಿಟ್ಟು, ಅತ್ತ ಕೂಲಿ ಹಣ ಹಾಳು, ಇತ್ತ ಕೇಂದ್ರದ ಮುಂದೆ ನಿಂತರೂ ಕೇಂದ್ರದ ಬಾಗಿಲು ತೆರೆದಿರುವುದಿಲ್ಲಾ ಎಂದು ಸಾರ್ವಜನಿಕರು ದೂರಿದ್ದಾರೆ. ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಸಂಬಂಧಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಉತ್ತರಿಸುವವರೇ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT