ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್: ಜಿಲ್ಲೆಯಲ್ಲಿ 5.4 ಲಕ್ಷ ನೋಂದಣಿ

Last Updated 19 ಜನವರಿ 2011, 9:10 IST
ಅಕ್ಷರ ಗಾತ್ರ

ಮೈಸೂರು: ನಾಗರಿಕರಿಗೆ ವಿಶಿಷ್ಟ ಗುರುತಿನ ಸಂಖ್ಯೆ ನೀಡುವ ಆಧಾರ್ ಯೋಜನೆಯಲ್ಲಿ ಜ. 17ರವರೆಗೆ ಜಿಲ್ಲೆಯಲ್ಲಿ 5.4 ಲಕ್ಷ ಮಂದಿಯನ್ನು ನೋಂದಣಿ ಮಾಡಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಿ.ಜಿ.ಬೆಟಸೂರ್ ಮಠ್ ತಿಳಿಸಿದರು.

ನಗರದಲ್ಲಿ 35 ಸೇರಿ ಜಿಲ್ಲೆಯಲ್ಲಿ 76 ಕೇಂದ್ರಗಳ 289 ಘಟಕಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಪ್ರತಿದಿನ 10,500ಕ್ಕೂ ಹೆಚ್ಚು ನೋಂದಣಿಯಾಗುತ್ತಿದೆ. ತಿಂಗಳ ಅಂತ್ಯಕ್ಕೆ ಹೆಚ್ಚುವರಿಯಾಗಿ 61 ಘಟಕಗಳನ್ನು ಪ್ರಾಂಭಿಸಲಾಗುವುದು. ಪುರಭವನದಲ್ಲಿ 18ರಿಂದ 20 ಘಟಕಗಳನ್ನು ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಅವರು  ತಿಳಿಸಿದರು.

ನಕಲಿ ಅಫಿಡವಿಟ್ ಹಾಗೂ ಜನರಿಂದ ಹಣ ಪಡೆದು ಮೋಸ ಮಾಡುತ್ತಿದ್ದ ಸಿದ್ದರಾಜು, ಮಧುಸೂದನ್, ಖಲೀಲ್, ಮಹದೇವ, ಪುಟ್ಟಸ್ವಾಮಿ, ವೆಂಕಟಮ್ಮ, ಮಹದೇವಮ್ಮ, ಮಹೇಶ್ ಅಲಿ ಹಾಗೂ ಎಸ್‌ಆರ್‌ವಿ ಸುಬ್ರಹ್ಮಣ್ಯ ಎಂಬುವರ  ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಕಲಿ ಅಫಿಡವಿಟ್ ನೀಡುತ್ತಿದ್ದ ಆಟೋ ಚಾಲಕ ಸಿದ್ದರಾಜು ಎಂಬಾತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ  ಹಾಜರು ಪಡಿಸಿದ್ದಾರೆ. ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಸಾರ್ವಜನಿಕರು, ಮಧ್ಯವರ್ತಿಗಳು ಅಥವಾ ಅನಧಿಕೃತ ವ್ಯಕ್ತಿಗಳನ್ನು ಸಂಪರ್ಕಿಸದೆ ನೇರವಾಗಿ  ಆಧಾರ್ ಕೇಂದ್ರದಲ್ಲಿರುವ ಸರ್ಕಾರದಿಂದ ನೇಮಕವಾಗಿರುವ ಪರಿಶೀಲಕರ ಸಹಾಯ ಪಡೆದು ಆಧಾರ್‌ಗಾಗಿ ನೋಂದಣಿ ಮಾಡಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT