ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧುನಿಕ ತಂತ್ರಜ್ಞಾನ: ಪರಿಸರಸ್ನೇಹಿ ರಸಾಯನಿಕ ಉತ್ಪಾದನೆ ಸಾಧ್ಯ

Last Updated 9 ಸೆಪ್ಟೆಂಬರ್ 2011, 10:15 IST
ಅಕ್ಷರ ಗಾತ್ರ

ಬೆಳಗಾವಿ: ರಸಾಯನಶಾಸ್ತ್ರವು ಜೀವ ನದ ಹುಟ್ಟಿನಿಂದ ಸಾವಿನವರೆಗೆ ವ್ಯಾಪಿಸಿ ಕೊಂಡಿದೆ. ಅದು ಜೀವನದ ಪ್ರತಿ ಹಂತ ದಲ್ಲಿಯೂ ಒಂದಲ್ಲ, ಒಂದು ವಸ್ತುವಿನ ರೂಪದಲ್ಲಿ ಬರುತ್ತದೆ ಎಂದು ಪೂರ್ಣ ಪ್ರಜ್ಞಾ ವಿಜ್ಞಾನ ಸಂಶೋಧನೆ ಕೇಂದ್ರದ ನಿರ್ದೇಶಕ ಡಾ. ಆನಂದ ಹಲಗೇರಿ ಹೇಳಿದರು.

ನಗರದ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ ಮತ್ತು ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಆಶ್ರಯದಲ್ಲಿ ಗುರುವಾರ ಹಮ್ಮಿ ಕೊಂಡಿದ್ದ `ಪರಿಸರ ಸ್ನೇಹಿ ರಸಾಯನಿಕ ಗಳು~ ಎಂಬ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತ ನಾಡಿದರು.

`ರಸಾಯನಿಕ ವಸ್ತುಗಳು ಜನರ ಏಳ್ಗೆಗಾಗಿಯೇ ಇವೆ. ಆದರೆ ಅವುಗಳ ಉತ್ಪಾದನೆ ಪರಿಸರ ಸ್ನೇಹಿಯಾಗ ಬೇಕಿದೆ. ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಪರಿಸರ ಸ್ನೇಹಿಯಾಗಬಹುದಾಗಿದೆ~ ಎಂದು ಅವರು ಹೇಳಿದರು.

`ಉತ್ತಮ ಆರ್ಥಿಕ ಬೆಳವಣಿಗೆಯ ದರ ಹಾಗೂ ಗುಣಮಟ್ಟದ ಉತ್ಪಾದನೆ ಯಿಂದಾಗಿ ಭಾರತ ವಿಶ್ವದ ಗಮನ ವನ್ನು ಸೆಳೆದಿದೆ. 2050ರ ವೇಳೆಗೆ ಪೆಟ್ರೋಲ್ ಹಾಗೂ ಡೀಸೆಲ್ ಖಾಲಿ ಯಾಗಲಿದೆ. ಅದಕ್ಕೆ ಪರ್ಯಾಯವಾಗಿ ಗ್ಯಾಸ್ ಹಾಗೂ ಇಥೆನಾಲ್ ಕಂಡುಕೊ ಳ್ಳಲಾಗಿದೆ~ ಎಂದು ಅವರು ತಿಳಿಸಿದರು.

`ಕೆಲವು ರಸಾಯನಿಕಗಳನ್ನು ಬಳಸಿ ಕೊಂಡು ಪರಿಸರ ಸ್ನೇಹಿ ವಸ್ತುಗಳ ಉತ್ಪಾದನೆ ಸಾಧ್ಯವಿದೆ. ಆ ನಿಟ್ಟಿನಲ್ಲಿ ದೃಢವಾದ ಹೆಜ್ಜೆಯಿಡಬೇಕಾಗಿದೆ. ಸಂಶೋಧನೆಗೆ ಹೆಚ್ಚಿನ ಒತ್ತು ನೀಡ ಬೇಕು~ ಎಂದು ಅವರು ಸಲಹೆ ಮಾಡಿ ದರು.

`ಕೃಷಿ ಕ್ಷೇತ್ರಕ್ಕೆ ಬೇಕಾಗಿರುವ ಯೂರಿ ಯಾವನ್ನು ಕಡಿಮೆ ಬೆಲೆಯಲ್ಲಿ ಉತ್ಪಾ ದಿಸಬಹುದಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಗಮನ ಹರಿಸಬೇಕಾದ ಅವಶ್ಯಕತೆ ಇದೆ~ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ವಿ.ಜಿ. ಅಷ್ಟಗಿ ಮಾತನಾಡಿ, ಪ್ರತಿ ದಿನ ಬಳಸುವ ವಸ್ತುಗಳಲ್ಲಿರುವ ರಸಾಯನಿಕ ಅಂಶ ದಿಂದಾಗಿ ರೋಗಗಳಿಗೆ ತುತ್ತಾಗುತ್ತಿ ದ್ದೇವೆ. ರಸಾಯನಿಕ ವಸ್ತುಗಳನ್ನು ಪರಿ ಸರ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ವಿಚಾರ ಸಂಕಿರಣದಲ್ಲಿ ತೆಗೆದುಕೊಳ್ಳುವ ನಿರ್ಣ ಯಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಕಳುಹಿಸಿಕೊಡಲಾಗುವುದು ಎಂದರು.

ಪ್ರೊ.ಎ.ಆರ್. ಪಾಟೀಲ, ಪ್ರೊ.ಎಂ.ಪಿ. ಪಾಟೀಲ, ಪ್ರೊ.ಎ.ಆರ್. ತಾರದಾಳೆ ಹಾಜರಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಸಿ.ಎನ್. ನಾಯ್ಕರ್ ಸ್ವಾಗತಿಸಿದರು. ಅಶ್ವಿನಿ ಹಾಗೂ ಸಂಗಡಿ ಗರು ಪ್ರಾರ್ಥಿಸಿದರು. ಪ್ರೊ.(ಮಿಸ್) ಎಂ.ಎಸ್. ಬಾಗಿ ಮತ್ತು ಪ್ರೊ.ಎಸ್.ಬಿ. ಬನ್ನಿಮಟ್ಟಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT