ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮದಿಂದ ಬದುಕಿಗೆ ನೆಮ್ಮದಿ: ಸಂಗನಬಸವ ಶ್ರೀ

Last Updated 15 ಫೆಬ್ರುವರಿ 2012, 8:15 IST
ಅಕ್ಷರ ಗಾತ್ರ

ಶಿವಯೋಗಮಂದಿರ (ಬಾದಾಮಿ): ಮಾನವ ಇಂದು ಕಲುಷಿತ ವಾತಾವರಣ ದಲ್ಲಿ ಬದುಕುತ್ತಿದ್ದಾನೆ. ಶಾಂತಿ, ನೆಮ್ಮದಿಯ ಜೀವನ ದೊರೆಯು ತ್ತಿಲ್ಲ. ಆಧ್ಯಾತ್ಮ ವಿಕಾಸದಿಂದ ಬದುಕಿಗೊಂದು ವಿಶೇಷ ಅರ್ಥ ಬರುತ್ತದೆ. ಆಧ್ಯಾತ್ಮ ದಿಂದ ನೆಮ್ಮದಿ ಜೀವನ ಮಾಡ ಬಹುದು ಎಂದು ಶಿವಯೋಗ ಮಂದಿರದ ಕಾರ್ಯಾಧ್ಯಕ್ಷ ಹಾಗೂ ಹೊಸಪೇಟೆ ಸಂಗನಬಸವ ಶ್ರಿಗಳು ನುಡಿದರು.

ಶಿವಯೋಗಮಂದಿರದ ವಿಜಯ ಮಹಾಂತ ಶಿವಯೋಗಿ ಸಭಾ ಮಂಟಪದ ಯಳಂದೂರ ಬಸವಲಿಂಗ ಶಿವಯೋಗಿಗಳ ವೇದಿಕೆಯಲ್ಲಿ ಮಂಗಳವಾರ ಲಿಂ.ಹಾನಗಲ್ ಗುರುಕುಮಾರೇಶ್ವರ 82ನೆಯ ಪುಣ್ಯ ಸ್ಮರಣೋತ್ಸವ ಮತ್ತು ಶಿವಯೋಗಮಂದಿರದ 102ನೆಯ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತ ನಾಡಿದರು.

ಪ್ರತಿಯೊಬ್ಬರು ಆಧ್ಯಾತ್ಮದಲ್ಲಿ ತೊಡ ಗಿಸಿಕೊಳ್ಳಬೇಕು ಎಂದು ಹೇಳಿದರು.ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಲಿಂ.ಕುಮಾರ ಶಿವಯೋಗಿಗಳು ಜಾತ್ಯತೀತ  ಭಾವದವ ರಾಗಿದ್ದರು. ಕಲೆ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರಗಳಿಗೆ ನೀಡಿದ ಕಾಣಿಕೆ ಅನನ್ಯವಾದುದು ಎಂದು ಶಿರಸಿಯ ಬಣ್ಣದ ಮಠದ ಶಿವಲಿಂಗ ಶ್ರಿಗಳು ನುಡಿದರು.

ಲಿಂ.ಕುಮಾರ ಶಿವಯೋಗಿಗಳು ವೀರಶೈವ ಧರ್ಮಕ್ಕೆ ಚೈತನ್ಯ ನೀಡಿದರು. ವೀರಶೈವ ಮಠಗಳು ನಾಡಿಗೆ ಶಿಕ್ಷಣ ಮತ್ತು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ ಎಂದು ಅಧ್ಯಕ್ಷತೆ ವಹಿಸಿದ್ದ ನಂದವಾಡಗಿಯ ಮಹಾಂತಲಿಂಗ ಶ್ರಿಗಳು ಮಾತನಾಡಿದರು.

ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ವೀರಪುಲಿಕೇಶಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ.ಸಿ. ಪಟ್ಟಣದ, ವಿಜಯ ಕುಮಾರ ಸ್ವಾಮೀಜಿ ಅತಿಥಿಗಳಾಗಿ ಆಗಮಿಸಿದ್ದರು.ಚೆನ್ನವೀರ ಸ್ವಾಮೀಜಿ, ಅನ್ನದಾನ ಶಾಸ್ತ್ರಿ, ಯೋಗಗುರು ನಾಗೇಂದ್ರ ಕುಮಾರ, ಪರಶುರಾಮ ಅಳಗವಾಡಿ,  ವಟು ಸಾಧಕರು ಮತ್ತಿತರ ಗಣ್ಯರು ಹಾಜರಿದ್ದರು.

ಲಿಂ.ಕುಮಾರ ಶಿವಯೋಗಿಗಳ ಪಲ್ಲಕ್ಕಿ ಉತ್ಸವವು ಭಜನೆಯ ವಾದ್ಯ ಮೇಳ ದೊಂದಿಗೆ ವೈಭವದಿಂದ ಜರುಗಿತು.
ನಂದಿಕೇಶ್ವರ, ಗೋನಾಳ, ಶಿರಬಡಗಿ, ಮಂಗಳೂರು, ಚಿಮ್ಮಲಗಿ, ನೆಲವಗಿ  ಗ್ರಾಮಗಳ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಸೋಮನಾಥ ಗವಾಯಿ, ಕೊಟ್ಟೂರ ದೇಶಿಕರು ಭಕ್ತಿಗೀತೆಗಳನ್ನು    ಹಾಡಿದರು.  ಎಂ.ಬಿ.ಹಂಗರಗಿ ಸ್ವಾಗತಿಸಿದರು. ಪ್ರಾಚಾರ್ಯ ಜಿ.ಬಿ.ಶೀಲವಂತರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT