ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್ ಕುಮಾರ್‌ಗೆ ಬಂಗಾರದ ಪದಕ

ಟರ್ಕಿ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕನ್ನಡಿಗನ ಸಾಧನೆ
Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ಆನಂದ್ ಕುಮಾರ್ ಟರ್ಕಿಯ ಅಂತ್ಯಾಲದಲ್ಲಿ ನಡೆದ ಮೊದಲ ಟರ್ಕಿ ಪ್ಯಾರಾಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಚಿನ್ನ ಹಾಗೂ ಡಬಲ್ಸ್ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದಾರೆ.

ಭಾನುವಾರ ನಡೆದ ಎಸ್ ಎಸ್‌ಎಲ್-4 ವಿಭಾಗದ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ ಆನಂದ್ 21-9, 21-7ರಲ್ಲಿ ಸೆದತ್ ತುಮ್ಕಾಯಾ ಎದುರು ಗೆಲುವು ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. 24 ನಿಮಿಷ ಪೈಪೋಟಿ ನಡೆಸಿ ಆನಂದ್ ಈ ಗೆಲುವು ಪಡೆದರು.

ಡಬಲ್ಸ್‌ನಲ್ಲೂ ಮಿಂಚು: ರಷ್ಯಾದ ಪಾವೆಲ್ ಸಿಲಿಯೇಶಿಕಿನ್ ಜೊತೆಗೂಡಿ ಡಬಲ್ಸ್‌ನಲ್ಲಿ ಆಡಿದ ಕರ್ನಾಟಕದ ಆಟಗಾರ ಈ ವಿಭಾಗದಲ್ಲೂ `ಬೆಳ್ಳಿ' ಹೆಜ್ಜೆ ಮೂಡಿಸಿದರು.

ಫೈನಲ್ ಪಂದ್ಯದಲ್ಲಿ ಆನಂದ್-ಪಾವೆಲ್ ಜೋಡಿ 8-21, 9-21ರಲ್ಲಿ ಐಕರ್ ತಾಜುಕು-ಬಾರ್ತೊಮಿಯಿಜ್ ಮ್ರಿಜ್ ಎದುರು ನಿರಾಸೆ ಕಂಡಿತಾದರೂ, ಬೆಳ್ಳಿ ಪದಕ ಕೈ ತಪ್ಪಲಿಲ್ಲ.

ಸಂತಸ: ಈ ಬಗ್ಗೆ `ಪ್ರಜಾವಾಣಿ' ಜೊತೆ ಸಂತಸ ಹಂಚಿಕೊಂಡ ಆನಂದ್, `ಹಲವು ಸಮಸ್ಯೆಗಳ ನಡುವೆ ಈ ಸಾಧನೆ ಮಾಡಿದೆ. ಭಾರತ ಪ್ಯಾರಾಬ್ಯಾಡ್ಮಿಂಟನ್ ಫೆಡರೇಷನ್‌ನ ಅಸಹಕಾರದ ನಡುವೆಯೂ ಟೂರ್ನಿಗೆ ಬಂದಿದ್ದೇನೆ. ಆದ್ದರಿಂದ ಈ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲಲೇಬೇಕಾದ ಸವಾಲಿತ್ತು' ಎಂದು ನುಡಿದರು.

`ಪದಕ ಗೆಲ್ಲುವ ಭರವಸೆ ಇತ್ತು. ಅದರಲ್ಲೂ ಬಂಗಾರದ ಪದಕ ಬಂದಿದ್ದಕ್ಕೆ ಖುಷಿಯಾಗಿದೆ. ಇದಕ್ಕೆಲ್ಲಾ ಪಾಲಕರ ಹಾಗೂ ಗೆಳೆಯರ ಸ್ಫೂರ್ತಿಯ ಮಾತುಗಳೇ ಕಾರಣ' ಎಂದೂ ಅವರು ಸಂತಸ ಹಂಚಿಕೊಂಡಿದ್ದಾರೆ.

ಮಗನ ಸಾಧನೆ ಬಗ್ಗೆ ಆನಂದ್ ತಂದೆ ಬೋರೆಗೌಡ ಮಾತನಾಡಿ `ಮಗ ಟರ್ಕಿ ಟೂರ್ನಿಯಲ್ಲಿ ಪದಕ ಗೆಲ್ಲುತ್ತಾನೆ ಎನ್ನುವ ವಿಶ್ವಾಸವಿತ್ತು. ನನ್ನ ನಂಬಿಕೆಯನ್ನು ಆನಂದ್ ನಿಜ ಮಾಡಿದ್ದಾನೆ' ಎಂದು ಸಂತಸ ಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT