ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಹಾವಳಿ ತಡೆಗೆ ಕಾರ್ಯಪಡೆ ರಚನೆೆಗೆ ಹೈಕೋರ್ಟ್ ಸೂಚನೆ

Last Updated 7 ಜನವರಿ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: ಆನೆ ಹಾಗೂ ಮನುಷ್ಯನ ನಡುವಿನ ಸಂಘರ್ಷ ತಡೆಗೆ ಕಾರ್ಯಪಡೆ ರಚಿಸುವುದು ಅಗತ್ಯ ಇದೆ ಎಂದು     ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

`ಈ ಸಂಘರ್ಷ ತಡೆಗೆ ಯಾವ ರೀತಿಯ ಕ್ರಮ ತೆಗೆದುಕೊಳ್ಳಬಹುದು. ಆನೆಗಳ ಹಾಗೂ ಇತರ ವನ್ಯಮೃಗಗಳ ಸಂರಕ್ಷಣೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ಹೇಗೆ ರೂಪಿಸಬೇಕು ಎಂಬಿತ್ಯಾದಿಯಾಗಿ ಮಾಹಿತಿ ನೀಡಲು ಕಾರ್ಯಪಡೆ ರಚನೆ ಅಗತ್ಯ ಇದೆ~ ಎಂದು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗ ರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ತಿಳಿಸಿದೆ.

 ಈ ಹಿನ್ನೆಲೆಯಲ್ಲಿ ಕಾರ್ಯಪಡೆಯಲ್ಲಿ ಇರಬಹುದಾದ ವ್ಯಕ್ತಿಗಳ ಹೆಸರು ಸೂಚಿಸಲು ಸಹಾಯಕ ಸಾಲಿಸಿಟರ್ ಜನರಲ್ ಅವರಿಗೆ ಆದೇಶಿಸಿದೆ. ಒಂದು ವಾರದಲ್ಲಿ ಈ ಆದೇಶ ಪಾಲನೆ ಮಾಡುವಂತೆ ಪೀಠ ಸೂಚಿಸಿದೆ.

2008ರಲ್ಲಿ ಮೈಸೂರು, ಹಾಸನ ಸೇರಿದಂತೆ ರಾಜ್ಯದ ವಿವಿಧೆಡೆ ಆನೆಗಳು ದಾಳಿ ನಡೆಸಿರುವ ಕುರಿತು ಪತ್ರಿಕೆಗಳಲ್ಲಿ ಬಂದಿರುವ ವರದಿಗಳ ಆಧಾರದ ಮೇಲೆ ಹೈಕೋರ್ಟ್ ಸ್ವಯಂಪ್ರೇರಿತವಾಗಿ ನಡೆಸುತ್ತಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇದಾಗಿದೆ.

ಕೋರ್ಟ್ ಅಸಮಾಧಾನ: ಆನೆಗಳನ್ನು ಸ್ಥಳಾಂತರಿಸುವುದು ಸೂಕ್ತ. ಈ ಕುರಿತು ಕಾರ್ಯಪಡೆಗೆ ಸೂಚಿಸುವ ಅಗತ್ಯ ಇದೆ ಎಂಬ ವಾದವನ್ನು ವಕೀಲರೊಬ್ಬರು ವಿಚಾರಣೆ ವೇಳೆ ಮುಂದಿಟ್ಟರು.  ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ಸೇನ್, `ಆನೆಗಳು ನಮಗೆ ಸಮಸ್ಯೆ ತಂದೊಡ್ಡುತ್ತಿವೆ ಎಂದು ಭಾವಿಸಬೇಡಿ. ನಾವೇ ಅವುಗಳಿಗೆ ತೊಂದರೆ ನೀಡುತ್ತಿದ್ದೇವೆ. ಒಂದು ವೇಳೆ ಕಾರ್ಯಪಡೆಯು ಆನೆಗಳ ಸ್ಥಳಾಂತರದ ಕುರಿತು ಯೋಚನೆ ಮಾಡಿದರೆ, ಅದರ ಕಾರ್ಯವನ್ನು ಸ್ಥಗಿತಗೊಳಿಸ ಬೇಕಾಗುತ್ತದೆ. ಇಂತಹ ಯೋಚನೆ ಮಾಡಬೇಡಿ~ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT