ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆಗಳ ಅಡ್ಡಾದಿಡ್ಡಿ ಓಡಾಟ: ಭತ್ತದ ಗದ್ದೆ ನಾಶ

Last Updated 20 ಸೆಪ್ಟೆಂಬರ್ 2013, 8:22 IST
ಅಕ್ಷರ ಗಾತ್ರ

ಮುಂಡಗೋಡ: ಕಾಡಾನೆಗಳ ಹಿಂಡು ಭತ್ತದ ಗದ್ದೆಗೆ ನುಗ್ಗಿ ಭತ್ತದ ಸಸಿಯನ್ನು ತುಳಿದು ಹಾನಿ ಮಾಡಿದ ಘಟನೆ ತಾಲ್ಲೂಕಿನ ಗುಂಜಾವತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬುಧವಾರ ಜರುಗಿದೆ.

ಗುಂಜಾವತಿ ಭಾಗದ ಕಳಕಿಕೇರಾ ಹಾಗೂ ಗೋದನಾಳ ಗ್ರಾಮದ ಹೊಲಗದ್ದೆಗಳಿಗೆ ಆರು ಕಾಡಾನೆಗಳ ಹಿಂಡು ಬೆಳಗಿನ ಜಾವ ನುಗ್ಗಿ ಭತ್ತವನ್ನು ತಿಂದು ಅಡ್ಡಾದಿಡ್ಡಿ ನಡೆದು ಹಾನಿ ಮಾಡಿವೆ. ಕಾಡಾನೆಗಳ ಹಿಂಡಿನಲ್ಲಿ ಒಂದು ಮರಿ ಆನೆ ಇದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕಳೆದ 2–3 ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿರುವ ರೈತರಿಗೆ ಈ ವರ್ಷವಾದರೂ ಉತ್ತಮ ಮಳೆಯಿಂದ ಬೆಳೆದ ಬೆಳೆ ಕೈಗೆ ಸಿಗಲಿ ಎಂದು  ಬಯಸುತ್ತಿರುವಾಗಲೇ ಕಾಡಾನೆಗಳು ಭತ್ತದ ಗದ್ದೆಗಳತ್ತ ನುಗ್ಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

ಅರಣ್ಯ ಸನಿಹದ ಹೊಲಗದ್ದೆಗಳಿಗೆ ಕಾಡಾನೆಗಳು ಬಂದು ಬೆಳೆಯನ್ನು ಹಾಳು ಮಾಡುವುದರಿಂದ ಅತಿಕ್ರಮಣ ರೈತರಿಗೆ ಬೆಳೆಹಾನಿಯಾದ ಬಗ್ಗೆ ಪರಿಹಾರವೂ ದೊರಕುವುದಿಲ್ಲ ಎಂದು ಅತಿಕ್ರಮಣದಾರ ರೈತರು ಅಸಹಾಯಕತೆಯಿಂದ ಹೇಳುತ್ತಾರೆ.

ಪ್ರತಿವರ್ಷ ಕಾಡಾನೆಗಳು ಕೊಯ್ಲಿಗೆ ಬರುವ ಸಂದರ್ಭದಲ್ಲಿ ದಾಳಿ ಮಾಡುತ್ತಿದ್ದವು. ಈ ವರ್ಷ ಭತ್ತ ತೆನೆ ಬಿಡುವ ಸಂದರ್ಭದಲ್ಲಿಯೇ ಕಾಡಾನೆ ಗಳು ದಾಳಿ ಮಾಡಿರುವುದು ರೈತರನ್ನು ಮತ್ತಷ್ಟು ಚಿಂತೆಗೀಡುಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT