ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ತರಬೇತಿ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಯುಜಿಸಿ ವತಿಯಿಂದ ಪ್ರತಿ ವರ್ಷ ನಡೆಸುವ ನ್ಯಾಷನಲ್ ಎಲಿಜೆಬಲಿಟಿ ಟೆಸ್ಟ್ (ಎನ್‌ಇಟಿ) ಹಾಗೂ ಜ್ಯೂನಿಯರ್ ರಿಸರ್ಚ್ ಫೆಲೋಷಿಪ್ (ಜೆಆರ್‌ಎಫ್) ಪರೀಕ್ಷೆಗಳಿಗಾಗಿ ಆನ್‌ಲೈನ್ ತರಬೇತಿ ಕಾರ್ಯಕ್ರಮ `ಎನ್‌ಇಟಿ-ಜೆಆರ್‌ಎಫ್ ಅಛೀವರ್~ಗೆ ಬೇಸ್ ಸಂಸ್ಥೆಯು ಪ್ರವೇಶಗಳನ್ನು ಆಹ್ವಾನಿಸಿದೆ.

ಈ ಕಾರ್ಯಕ್ರಮವು ಫೆಬ್ರುವರಿ 15ರಿಂದ ಆರಂಭಗೊಂಡು ಜೂನ್ ವರೆಗೆ ನಡೆಯಲಿದೆ.
ಗಣಿತ ಹಾಗೂ ಭೌತ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ, ವಿಶ್ವ ವಿದ್ಯಾಲಯ/ಕಾಲೇಜುಗಳಲ್ಲಿ ಪ್ರಾಧ್ಯಾಪಕ ಅಥವಾ ಸಂಶೋಧನಾ ತಜ್ಞರಾಗಲಿಚ್ಛಿಸುವ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಬಹುದು. ಮೂರು ತಿಂಗಳು ಅವಧಿಯ ಈ ತರಬೇತಿ ಕಾರ್ಯಕ್ರಮವು 100 ಸಮಾವೇಶಗಳನ್ನು ಒಳಗೊಂಡಿದ್ದು, ಪ್ರತಿ ಸಮಾವೇಶವೂ 2 ಗಂಟೆಗಳದ್ದಾಗಿರುತ್ತದೆ.

ಇಡೀ ಕಾರ್ಯಕ್ರಮವನ್ನು ಅಂತರ್ಜಾಲದಲ್ಲಿ ನೀಡಲಾಗುವುದು. ಅಭ್ಯರ್ಥಿಗಳು ತಮಗೆ ಅನುಕೂಲಕರವಾದ ವೇಳೆಯಲ್ಲಿ ದೇಶದ ಯಾವುದೇ ಸ್ಥಳದಿಂದ ತರಬೇತಿಯನ್ನು ಪಡೆಯುವಂತೆ ರೂಪಿಸಲಾಗಿದೆ. ತರಗತಿಗಳ ಪಠ್ಯ ಪ್ರವಚನವನ್ನು ಮೊದಲೇ ಮುದ್ರಿಸಿ ಬಳಿಕೆ ವೇಳಾಪಟ್ಟಿಗೆ ಅನುಸಾರವಾಗಿ ನೀಡಲಾಗುವುದು.

ಪ್ರತಿ ಹದಿನೈದು ದಿನಗಳಿಗೊಮ್ಮೆ ಆನ್‌ಲೈನ್ ಪರೀಕ್ಷೆಗಳನ್ನೂ ನಡೆಸಲಾಗುವುದು. ಬೋಧಕರೊಂದಿಗೆ ಸಂಪರ್ಕಿಸುವ ಸಲುವಾಗಿ 4ರಿಂದ5 ಆನ್‌ಲೈನ್ ತರಗತಿಗಳನ್ನೂ ಆಯೋಜಿಸಲಾಗಿದೆ.

ಹೆಚ್ಚಿನ ಮಾಹಿತಿಗಳಿಗಾಗಿ ಇ-ಮೇಲ್ info@base-edu.in ವಿಳಾಸಕ್ಕೆ ಬರೆಯಿರಿ ಅಥವಾ 080 - 4260 4600 ದೂರವಾಣಿ ಸಂಖ್ಯೆಗೆ ಕರೆ ಮಾಡಿ..
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT