ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್‌ನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ

Last Updated 2 ಜನವರಿ 2014, 19:50 IST
ಅಕ್ಷರ ಗಾತ್ರ

ಬೆಂಗಳೂರು: ಪಿಇಎಸ್‌ ವಿಶ್ವವಿದ್ಯಾ­ಲಯದಲ್ಲಿ  ಪದವಿ ಹಾಗೂ ಸ್ನಾತ­ಕೋ­ತ್ತರ ಪದವಿ ಸೇರಿದಂತೆ ಲಭ್ಯವಿರುವ ಎಲ್ಲ ಕೋರ್ಸ್‌ಗಳಿಗೂ  ಪ್ರವೇಶ ಪಡೆ­ಯಲು ಇದೇ ಮೊದಲ ಬಾರಿಗೆ ಆನ್‌­ಲೈನ್‌ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯಲಿದೆ.

ಈ ಬಗ್ಗೆ ಗುರುವಾರ ನಡೆದ ಪತ್ರಿಕಾ­ಗೋಷ್ಠಿಯಲ್ಲಿ ಮಾಹಿತಿ ನೀಡಿದ ಪಿಇಎಸ್ ವಿಶ್ವವಿದ್ಯಾಲಯದ ಮುಖ್ಯ  ಕಾರ್ಯನಿರ್ವಹಣಾಧಿಕಾರಿ ಪ್ರೊ.ಡಿ. ಜವಾಹರ್, ‘ಪಿಇಎಸ್ ಖಾಸಗಿ ವಿಶ್ವ­ವಿದ್ಯಾಲಯವಾಗಿ ರೂಪುಗೊಂಡಿದೆ. ಹಾಗಾಗಿ ಲಭ್ಯವಿರುವ ಬಿ.ಇ. ಬಿ.ಟೆಕ್, ಬಿಬಿಎಂ, ಬಿಸಿಎ, ಬಿಎಚ್ಇಎಂ, ಎಂ.ಎಸ್, ಎಂ.ಟೆಕ್, ಎಂಬಿಎ,  ಎಂಸಿಎ ಸೇರಿದಂತೆ ಎಲ್ಲ ಕೋರ್ಸ್‌ಗಳಿಗೂ ಪ್ರವೇಶ ಪರೀಕ್ಷೆ ಕಡ್ಡಾಯವಾಗಿದೆ’ ಎಂದು ತಿಳಿಸಿದರು.

‘ಜ.6ರಿಂದ ನೋಂದಾವಣಿ ಕಾರ್ಯ­­ಕ್ರಮ ನಡೆಯಲಿದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಅರಿಯಲು ಈ ಪರೀಕ್ಷೆ ಅತ್ಯಂತ ಸೂಕ್ತವಾಗಿದ್ದು, ಏಪ್ರಿಲ್‌ 5 ನೋಂದಾವಣಿ ಮಾಡಿ­ಕೊಳ್ಳಲು ಕಡೆಯ ದಿನ’ ಎಂದರು.

ಮೇನಲ್ಲಿ ಪರೀಕ್ಷೆ ಸಾಧ್ಯತೆ: ‘ಮೇ 3 ರಿಂದ 18ರ ಒಳಗೆ ಪರೀಕ್ಷೆ ನಡೆಯುವ ಸಾಧ್ಯತೆಯಿದೆ. ಪರೀಕ್ಷೆಗಳ ಫಲಿತಾಂಶ ಹಾಗೂ ಜೂನ್‌ ತಿಂಗಳಲ್ಲಿ ನಡೆಯುವ ಸಂದರ್ಶನ ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ’ ಎಂದು ಹೇಳಿದರು.

‘ಬೆಂಗಳೂರು ಸೇರಿದಂತೆ ಹೊರ­ರಾಜ್ಯ­­ಗಳಲ್ಲಿ ಒಟ್ಟು 46 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.  ಪಿಯುಸಿಯಲ್ಲಿ ಶೇ 60 (ಸಾಮಾನ್ಯ ವರ್ಗ), ಇತರೆ ( ಶೇ 50) ಅಂಕ ಗಳಿಸಿರುವ ವಿದ್ಯಾರ್ಥಿ­ಗಳು ಮಾತ್ರ ಪರೀಕ್ಷೆಗೆ ಹಾಜರಾಗಲು ಶಕ್ತರಾಗಿರುತ್ತಾರೆ‘ ಎಂದರು.

ಕಾಲೇಜಿನಲ್ಲಿ ಒಟ್ಟು 1080 ಸೀಟು­ಗಳು ಲಭ್ಯವಿದೆ. ಇದರಲ್ಲಿ ಶೇ 40ರಷ್ಟು ಸರ್ಕಾರಿ ಕೋಟಾದಡಿ ಬರುವ ಸೀಟು­ಗಳಿದ್ದು, ಇವುಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆ­ಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಿಯಮ ಅನ್ವಯವಾಗಲಿದೆ’ ಎಂದರು.

‘ವಿದ್ಯಾರ್ಥಿಗಳು ಸ್ಮಾರ್ಟ್‌ ಪೋನ್‌ ಮೂಲಕ ಕಲಿಕಾ ಸಾಮರ್ಥ್ಯವನ್ನು  ಪರೀ­ಕ್ಷಿಸಿಕೊಳ್ಳಲು ವಿದ್ಯಾರ್ಥಿಗಳಿಗಾಗಿ  ‘ಪೆಪ್‌ ಮೀಟರ್’ ತಂತ್ರಜ್ಞಾನದ ವ್ಯವಸ್ಥೆ­ ಮಾಡಲಾಗಿದ್ದು, ಆ ಮೂಲಕ ಮಾದರಿ ಪರೀಕ್ಷೆ ತೆಗೆದುಕೊಂಡು, ಫಲಿತಾಂಶ ಪಡೆಯಬಹುದು. ಪರೀಕ್ಷಾ ದಿನಾಂಕ, ಕೇಂದ್ರಗಳ ಬಗ್ಗೆ ಮಾಹಿತಿಗೆ: 7259002341 ಎಸ್‌ಎಂಎಸ್ ಮಾಡಬಹುದು’ ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗೆ: ವೆಬ್‌ಸೈಟ್‌­www.pes.edu ಸಂಪರ್ಕಿಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT