ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ಘನ್: ಬಾಂಬ್ ಸ್ಪೋಟ 9 ಸಾವು

Last Updated 26 ಫೆಬ್ರುವರಿ 2011, 11:20 IST
ಅಕ್ಷರ ಗಾತ್ರ

ಕಾಬೂಲ್ (ಡಿಪಿಎ): ರಸ್ತೆ ಬದಿ ಸಂಭವಿಸಿದ ಬಾಂಬ್ ಸ್ಫೋಟಕ್ಕೆ ಮಕ್ಕಳು ಮತ್ತು ಮಹಿಳೆಯರೂ ಸೇರಿದಂತೆ  ಒಟ್ಟು 9 ಮಂದಿ ನಾಗರೀಕರು ಬಲಿಯಾದ ಘಟನೆ ಪೂರ್ವ ಆಫ್ಘಾನಿಸ್ತಾನದಲ್ಲಿ ಶನಿವಾರ ನಡೆದಿದೆ.

ಖೊಸ್ಟ್ ಪ್ರಾಂತ್ಯದಲ್ಲಿರುವ ಕುಗ್ರಾಮ ಲಕಾನ್‌ನಲ್ಲಿ ಸಂಭವಿಸಿದ ಈ ಸ್ಫೋಟದಲ್ಲಿ ನಾಲ್ಕು ಮಕ್ಕಳು,ಮೂವರು ಪುರುಷರು ಮತ್ತು ಇಬ್ಬರೂ ಮಹಿಳೆಯರು  ಮೃತಪಟ್ಟಿದ್ದಾರೆ. ವಾರದ ಹಿಂದೆ ಇದೇ ಪ್ರಾಂತ್ಯದಲ್ಲಿ ನಡೆದ ಮಾನವ ಹತ್ಯಾ ಬಾಂಬ್ ಸ್ಫೋಟದಲ್ಲಿ ಒಬ್ಬ ಪೊಲೀಸ್ ಮತ್ತು 7 ಮಂದಿ ನಾಗರೀಕರು ಹತರಾಗಿದ್ದರು.

ದೇಶದಾದ್ಯಂತ ವಿದೇಶಿ ಸೈನಿಕರ ಮತ್ತು ತಾಲಿಬಾನ್ ಉಗ್ರರ ಚಟುವಟಿಕೆಗಳು  ಹೆಚ್ಚಿದ್ದರಿಂದ ಹಿಂಸಾಕೃತ್ಯಗಳು  ಪದೇಪದೇ ನಡೆಯತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT