ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಫ್ರೊ- ಏಷ್ಯಾ ಸಮಾವೇಶಕ್ಕೆ ಅಗಾಥಾ ಸಂಗ್ಮಾ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಕೈರೊ (ಪಿಟಿಐ): ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದಂತೆ ಈಜಿಪ್ಟ್‌ನಲ್ಲಿ ನಡೆಯುತ್ತಿರುವ ಆಫ್ರಿಕಾ-ಏಷ್ಯಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಗ್ರಾಮೀಣಾಭಿವೃದ್ಧಿ ಇಲಾಖೆ ರಾಜ್ಯ ಸಚಿವೆ ಅಗಾಥಾ ಸಂಗ್ಮಾ ಆಗಮಿಸಿದ್ದಾರೆ.

ಮೂರು ದಿನಗಳ ಈ ಸಮಾವೇಶ ಬುಧವಾರ ಆರಂಭಗೊಂಡಿದ್ದು, ಈವರೆಗೆ `ಆಫ್ರೊ- ಏಷ್ಯನ್ ರೂರಲ್ ಡೆವಲಪ್‌ಮೆಂಟ್ ಆಗರ್ನೈಸೇಷನ್~ (ಎಎಆರ್‌ಡಿಒ)ನ ಅಧ್ಯಕ್ಷ ಸ್ಥಾನದಲ್ಲಿದ್ದ ಅಗಾಥಾ ಈ ಸ್ಥಾನವನ್ನು ಈಜಿಪ್ಟ್ ಸಾಮಾಜಿಕ ವ್ಯವಹಾರಗಳ ಸಚಿವರಿಗೆ ಬಿಟ್ಟುಕೊಡಲಿದ್ದಾರೆ. ಭಾರತ ಮತ್ತು ಈಜಿಪ್ಟ್ `ಎಎಆರ್‌ಡಿಒ~ದ ಸಂಸ್ಥಾಪಕ ದೇಶಗಳಾಗಿದ್ದು, ಈ ವರ್ಷ ಸಂಸ್ಥೆಯ ಚಿನ್ನದ ಹಬ್ಬದ ಆಚರಣೆ ಭಾರತದಲ್ಲಿ ನಡೆಯಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT