ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯಾಸವನ್ನೇ ಕಾಣದ ಅಧ್ಯಕ್ಷರು

Last Updated 4 ಫೆಬ್ರುವರಿ 2011, 17:50 IST
ಅಕ್ಷರ ಗಾತ್ರ

ಬೆಂಗಳೂರು: ಇನ್ನೆರಡು ವರ್ಷಗಳಲ್ಲಿ ಶತಾಯುಷಿಯಾಗಲಿರುವ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ‘ಜೈವಿಕ ನಿಘಂಟು’ವಿನಲ್ಲಿ ದಣಿವು, ಆಯಾಸ ಎಂಬ ಪದಗಳೇ ಇಲ್ಲವೇನೋ?

ಬೆ.9ಕ್ಕೆ ಆರಂಭವಾದ ಮೆರವಣಿಗೆಯಲ್ಲಿ ಪಾಲ್ಗೊಂಡಾಗ ಜಿ.ವಿ. ಅವರಲ್ಲಿ ಕಂಡು ಬಂದ ಉತ್ಸಾಹ ಸಂಜೆ ಉದ್ಘಾಟನಾ ಸಮಾರಂಭ ಮುಕ್ತಾಯಗೊಂಡಾಗಲೂ ಚಿಮ್ಮುತ್ತಿತ್ತು. ಮಂದಹಾಸ, ಮೆಲುನಗೆಯೊಂದಿಗೇ ಅವರು ಸಾರೋಟಿನ ಮೇಲೆ ಸಾಗಿದ ಅವರು ಅಭಿಮಾನಿಗಳು ಕೈ ಕುಲುಕಿದಾಗ ಬಾಗಿ ಅವರ ಬಳಿ ಕೆಲಹೊತ್ತು ಮಾತನಾಡಿದರು. ದೂರದಿಂದಲೇ ಅಭಿನಂದಿಸಿದವರಿಗೆ ಕೈ ಬೀಸಿ ಪ್ರತಿ ನಮಸ್ಕರಿಸಿದರು. ದಾರಿಯುದ್ದಕ್ಕೂ ಹರ್ಷಚಿತ್ತರಾಗಿ ಕಂಡು ಬಂದರು.

ಅಭಿಮಾನಿಗಳು ನೀಡುತ್ತಿದ್ದ ಹಾರ ತುರಾಯಿಗಳು ಹಾಗೂ ಕನ್ನಡ ಸಂಘಟನೆಗಳು ಪ್ರೀತಿ ಪೂರ್ವಕವಾಗಿ ನೀಡಿದ ಕೆಂಪು ಅರಿಶಿನ ಬಣ್ಣದ ಕೊರಳ ವಸ್ತ್ರವನ್ನು ಸ್ವೀಕರಿಸಿದರು. ಮಧ್ಯಾಹ್ನ 3.30ರ ಹೊತ್ತಿಗೆ ಭಾಷಣ ಮಾಡಲು ನಿಂತ ಜಿ.ವಿ ಅವರು ಮುದ್ರಿತ ಭಾಷಣದ 28 ಪುಟಗಳನ್ನು ನಿರಾಯಸವಾಗಿ ಓದಿ ಮುಗಿಸಿದರು. ಅಷ್ಟೆಲ್ಲಾ ಓದುವಾಗ ಅವರ ಮುಖದಲ್ಲಿ ಕನ್ನಡಕ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT