ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರಾಧನಾ ಸಪ್ತಾಹ

Last Updated 21 ಜನವರಿ 2011, 19:40 IST
ಅಕ್ಷರ ಗಾತ್ರ

ಬಿಟಿಎಂ ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಸೋಮವಾರದಿಂದ ಒಂದು ವಾರ 19ನೇ ಆರಾಧನಾ ಮಹೋತ್ಸವ ಸಪ್ತಾಹ ಏರ್ಪಾಡಾಗಿದೆ.

ಪುರಂದರದಾಸರು, ಸ್ವಾತಿ ತಿರುನಾಳ್, ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಮೈಸೂರು ವೀಣೆ ಶೇಷಣ್ಣ, ಹಾಗೂ ಶ್ಯಾಮಾಶಾಸ್ತ್ರಿಯವರ ರಚನೆಗಳನ್ನು ಹೆಸರಾಂತ ಕಲಾವಿದರು ಪ್ರಸ್ತುತಪಡಿಸಲಿದ್ದಾರೆ.

ತ್ರಿಚೂರ್ ಸಹೋದರರಾದ ವಿದ್ವಾನ್ ಕೃಷ್ಣ ಮೋಹನ್ ಮತ್ತು ರಾಮಕುಮಾರ್ ಮೋಹನ್, ವಿದ್ವಾನ್ ಸರಸ್ವತಿ, ಕೃಷ್ಣವೇಣಿ, ಬೆಂಗಳೂರು ಸಹೋದರರಾದ ವಿದ್ವಾನ್ ಎಸ್.   

ಅಶೋಕ್ ಮತ್ತು ಎಂ.ಬಿ. ಹರಿಹರನ್, ಕಾಂಚನ ಸಹೋಹರಿಯರಾದ ಶ್ರೀರಂಜನಿ ಮತ್ತು ಶ್ರುತಿರಂಜನಿ ಮತ್ತು ಕರ್ನಾಟಿಕಾ ಸಹೋದರರಾದ ಕೆ. ಎನ್. ಶಶಿಕಿರಣ್ ಮತ್ತು ವಿದ್ವಾನ್ ಗಣೇಶ್ ಈ ಸಂಗೀತ ಸಪ್ತಾಹದಲ್ಲಿ ಕಾರ್ಯಕ್ರಮ ನೀಡುವರು.

ಸೋಮವಾರ ಇಸ್ಕಾನ್ ನಿರ್ದೇಶಕ ತಿರುಪ್ರಭು ಅವರಿಂದ ಉದ್ಘಾಟನೆ. ವಿದುಷಿ ಟಿ.ಎಸ್. ವಸಂತ ಮಾಧವಿ ಅವರ ಶಿಷ್ಯರಿಂದ ಗಣೇಶ ಸ್ತುತಿ. ಬೆಂಗಳೂರು ಸಹೋದರಿಯರಾದ ಎನ್.ಆರ್.ಹರಿಣಿ, ಎನ್.ಆರ್. ಶಾರದ ಅವರಿಂದ ಪುರಂದರ ದಾಸರ ಕೀರ್ತನೆ. ಪಕ್ಕವಾದ್ಯದಲ್ಲಿ ಚಾರುಲತಾ ರಾಮಾನುಜಂ, ಎಚ್.ಎಸ್. ಸುಧೀಂದ್ರ, ಎಂ.ಎ. ಕೃಷ್ಣಮೂರ್ತಿ ಹಾಗೂ ಪ್ರಮತ್ ಕಿರಣ್.

ಸ್ಥಳ: ಶ್ರೀ ರಮಣ ಮಹರ್ಷಿ ಅಕಾಡೆಮಿ,
3ನೇ ಅಡ್ಡರಸ್ತೆ, 3ನೇ ಹಂತ,
ಜೆ.ಪಿ.ನಗರ.

ಸಮಯ: ಸಂಜೆ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT