ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ಒಲಿಂಪಿಕ್ಸ್! ನೆನಪುಗಳು ಓಯಸಿಸ್!

Last Updated 21 ಜುಲೈ 2012, 19:30 IST
ಅಕ್ಷರ ಗಾತ್ರ

ಕ್ರೀಡಾ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ `ಪ್ರಜಾವಾಣಿ~ಯದು ಯಾವಾಗಲೂ ಮೇಲ್ಪಂಕ್ತಿ. ಆಧುನಿಕ ಕರ್ನಾಟಕದ ಕ್ರೀಡಾ ಚರಿತ್ರೆಯ ಸಾಕ್ಷಿಪ್ರಜ್ಞೆಯಂತೆ ಗುರುತಿಸಿಕೊಂಡಿರುವ ಪತ್ರಿಕೆ, ರಾಷ್ಟ್ರೀಯ- ಅಂತರರಾಷ್ಟ್ರೀಯ ಕ್ರೀಡಾಕೂಟಗಳ ವರದಿಯಲ್ಲೂ ಅನನ್ಯತೆಯನ್ನು ಮೆರೆದಿದೆ. ಇದಕ್ಕೆ ಅತ್ಯುತ್ತಮ ಉದಾಹರಣೆ ಒಲಿಂಪಿಕ್ ಪಂದ್ಯಾವಳಿಗಳು.
 
`ಪ್ರಜಾವಾಣಿ~ಯ ಸಂಪಾದಕರೂ ಕ್ರೀಡೆಯ ಬಗ್ಗೆ ಅಪರಿಮಿತ ಪ್ರೀತಿಯುಳ್ಳವರೂ ಆದ ಕೆ.ಎನ್. ಶಾಂತಕುಮಾರ್ ಸ್ವತಃ ಕ್ಯಾಮೆರಾ ಹಿಡಿದು ಜಗತ್ತಿನ ಬಹುದೊಡ್ಡ ಕ್ರೀಡಾಕೂಟವನ್ನು ವರದಿ ಮಾಡಿದ್ದಾರೆ. 1988ರಿಂದ ಇಲ್ಲಿಯವರೆಗೆ ಸತತವಾಗಿ ಆರು ಒಲಿಂಪಿಕ್ಸ್ ಪಂದ್ಯಾವಳಿಗಳಿಗೆ - ಸೋಲ್ (1988), ಬಾರ್ಸಿಲೋನಾ (1992), ಅಟ್ಲಾಂಟಾ (1996), ಸಿಡ್ನಿ (2000), ಅಥೆನ್ಸ್ (2004) ಹಾಗೂ ಬೀಜಿಂಗ್ (2008) - ಸಾಕ್ಷಿಯಾದ ಅಗ್ಗಳಿಕೆ ಅವರದು.
 
ಕನ್ನಡದ ಮಟ್ಟಿಗೆ ಹೀಗೆ ಆರು ಒಲಿಂಪಿಕ್ಸ್ ಕ್ರೀಡಾಕೂಟಗಳನ್ನು ಒಬ್ಬರೇ ವರದಿ ಮಾಡಿರುವುದು ಒಂದು ವಿಶೇಷ ದಾಖಲೆ. ಇದು ದಾಖಲೆಯ ಮಾತಷ್ಟೇ ಅಲ್ಲ, ಈ ಒಡನಾಟದಿಂದಾಗಿ ಕನ್ನಡದ ಓದುಗರಿಗೆ ಮನುಕುಲದ ಮಹಾನ್ ಕ್ರೀಡಾಕೂಟದ ಸವಿರುಚಿಯನ್ನು `ಪ್ರಜಾವಾಣಿ~ ವಿಶಿಷ್ಟವಾಗಿ ಉಣಬಡಿಸಿದೆ. ಇಲ್ಲಿನ ಎರಡು ಪುಟಗಳ ತುಂಬ ಹರಡಿಕೊಂಡಿರುವ ಛಾಯಾಚಿತ್ರಗಳು ಕಳೆದ ಆರು ಒಲಿಂಪಿಕ್ಸ್ ಕ್ರೀಡಾಕೂಟಗಳ ಅಳಿಯದ ಕ್ಷಣಗಳ ಕೆಲವು ತುಣುಕುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT