ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೆಸ್ಸೆಸ್ ಯಾವುದಕ್ಕೆ ಹೊಣೆ?

Last Updated 26 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನಾನೊಬ್ಬ ಹಿರಿಯ, ಅನೇಕ ವರ್ಷಗಳಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಪರ್ಕವಿಲ್ಲದಿದ್ದರೂ ಸಂಘ ಮತ್ತು ಅದರ ಬೆಳವಣಿಗೆಯನ್ನು ಗಮನಿಸುತ್ತಿದ್ದೇನೆ. ಭಾರತೀಯ ಜನತಾ ಪಕ್ಷದ ಪ್ರಗತಿ ಮತ್ತು ಬೆಳವಣಿಗೆ ಹೆಮ್ಮೆ ಪಡುವಂಥದ್ದು.

ಆದರೆ ನಿಸ್ವಾರ್ಥ, ಭ್ರಷ್ಟಾಚಾರ ರಹಿತ ಸಂಘದ ಸ್ವಯಂಸೇವಕರ ನಡವಳಿಕೆಗಳಿಗೆ ಹೋಲಿಸಿದರೆ ಬಿ.ಜೆ.ಪಿಯಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನನ್ನಂತಹ ಹಳೆ ಸಂಘ ಪ್ರೇಮಿಗಳ ಮನ ನೋಯುತ್ತದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು `ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಂಧನದಿಂದ ಸಂಘಕ್ಕೂ ಮುಜುಗರವಾಗಿದೆ. ಭ್ರಷ್ಟಾಚಾರವನ್ನು ಸಮರ್ಥಿಸುವುದು ನಮ್ಮಿಂದ ಸಾಧ್ಯವಿಲ್ಲ. ಸರ್ಕಾರದ ಶುದ್ಧೀಕರಣವನ್ನು ರಾಜ್ಯದ ಜನತೆಯೇ ಮಾಡುತ್ತಾರೆ~ ಎಂದಿದ್ದಾರೆ.

`ಸ್ವಯಂ ಸೇವಕರೂ ಆದ ಯಡಿಯೂರಪ್ಪನವರು ಸಂಘದ ಕಚೇರಿಗೆ ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಹಲವು ಬಾರಿ ಅವರಿಗೆ ಸಲಹೆ ನೀಡಲಾಗುತ್ತಿತ್ತು. ಆದರೆ ಅವರು ಆ ಸಲಹೆಯನ್ನು ಪಾಲಿಸದಿರುವುದಕ್ಕೆ ಸಂಘ ಹೊಣೆಯಲ್ಲ~ ಎಂದಿದ್ದಾರೆ.

ಹಾಗಾದರೆ ಸಂಘ ಯಾವುದಕ್ಕೆ ಹೊಣೆ? ಸಂಘದ ಆಗುಹೋಗುಗಳನ್ನು ಗಮನಿಸುತ್ತಿರುವ ಸಾರ್ವಜನಿಕರ ಮತ್ತು ಸಂಘದ ಹಿತಚಿಂತಕರ ವ್ಯಾಪ್ತಿಗೆ ಸೇರಿದ್ದು. ಸಾಮಾನ್ಯ ಗ್ರಾಮಾಂತರ ಪ್ರಜೆಯಾಗಿ ಸಂಘದ ಅತಿ ಹೆಚ್ಚು ಎತ್ತರಕ್ಕೆ ಬೆಳೆದಿರುವ ದತ್ತಾತ್ರೇಯ ಅವರು, ಸಂಘದ ಹೊಣೆಯ ಬಗ್ಗೆ ನುಣುಚಿಕೊಳ್ಳುವುದು ಅಸಂಗತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT