ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆ: ಸಾವಿರ ಖಾಲಿ ಹುದ್ದೆ

Last Updated 28 ಜನವರಿ 2012, 9:30 IST
ಅಕ್ಷರ ಗಾತ್ರ

ಹಾಸನ: `ವೈದ್ಯರು, ಸ್ಟಾಫ್ ನರ್ಸ್ ಸೇರಿದಂತೆ ಜಿಲ್ಲೆಯ ಆರೋಗ್ಯ ಇಲಾಖೆಯಲ್ಲಿ ಸುಮಾರು ಒಂದು ಸಾವಿರ ಹುದ್ದೆಗಳು ಖಾಲಿ ಇವೆ~ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ಯಾಮಲಾ ತಿಳಿಸಿದರು.

ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತ ಅವರು ಈ ಮಾಹಿತಿ ನೀಡಿದರು.

ಜಲ್ಲೆಯಲ್ಲಿ ಒಟ್ಟು 115 ವೈದ್ಯರ ಹುದ್ದೆಗಳು ಹಾಗೂ 73ಕ್ಕೂ ಹೆಚ್ಚು ಸ್ಟಾಫ್ ನರ್ಸ್ ಹುದ್ದೆ ಖಾಲಿ ಇವೆ. 32 ಎಂಬಿಬಿಎಸ್ ವೈದ್ಯರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾ ಗಿದ್ದು, ಅರ್ಜಿ ಸಲ್ಲಿಕೆಗೆ ಜ.31ಕೊನೆಯ ದಿನವಾಗಿರುತ್ತದೆ. ಈಗಾಗಲೇ 10 ಅರ್ಜಿ ಬಂದಿವೆ~ ಎಂಬ ಮಾಹಿತಿ ನೀಡಿದರು.

`ಅರ್ಜಿ ಸಲ್ಲಿಸಿದ ವೈದ್ಯರ ದಾಖಲೆಗಳೆಲ್ಲ ಸರಿ ಇದೆಯೇ ಎಂಬುದನ್ನು ಪರೀಕ್ಷಿಸಿ ಕೂಡಲೇ ಉದ್ಯೋಗಕ್ಕೆ ಹಾಜರಾಗಲು ಆದೇಶ ನೀಡಿ~ ಎಂದು ಅಧ್ಯಕ್ಷ ಸತ್ಯನಾರಾಯಣ ಸೂಚನೆ ನೀಡಿದರು. ಸಭೆಯಲ್ಲಿದ್ದ ಸದಸ್ಯರೆಲ್ಲರೂ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ವೈದ್ಯರಿಲ್ಲ, ಆಸ್ಪತ್ರೆಗಳಲ್ಲಿ ಸಿಬ್ಬಂದಿ ಇಲ್ಲ ಮುಂತಾದ ದೂರುಗಳನ್ನು ನೀಡುತ್ತಲೇ ಹೋದರು.

ದಿಡಗ ಆಸ್ಪತ್ರೆಯ ಕಟ್ಟಡ ಕಾಮಗಾರಿ ಆರಂಭವಾಗಿ ಎಂಟು ವರ್ಷಗಳಾಗಿವೆ ಲೋಕೋಪಯೋಗಿ ಇಲಾಖೆಯವರು ಇನ್ನೂ ಕಟ್ಟಡ ಹಸ್ತಾಂತರಿಸಿಲ್ಲ ಎಂದು ಡಾ. ಶ್ಯಾಮಲಾ ಸಭೆಗೆ ಮಾಹಿತಿ ನೀಡಿದರು. ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಿ ಹಸ್ತಾಂತರಿಸುವಂತೆ ಅಧಿಕಾರಿಗೆ ಸೂಚನೆ ನೀಡಲಾಯಿತು.

ಅರಕಲಗೂಡು ತಾಲ್ಲೂಕು ಬೆಳವಾಡಿ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಲೋಕೇಶ್ ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ. ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ಕೊನೆಗೆ ಒಂದೇ ದಿನ ಬಂದು ಎಲ್ಲ ದಿನಗಳ  ಹಾಜರಿ ಹಾಕುತ್ತಾರೆ ಎಂದು ಅರಕಲಗೂಡು ತಾ.ಪಂ. ಅಧ್ಯಕ್ಷ ಸಂತೋಷಗೌಡ ದೂರಿದರು. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT