ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಕಾಳಜಿಗೆ ಸಲಹೆ

Last Updated 7 ಫೆಬ್ರುವರಿ 2012, 4:30 IST
ಅಕ್ಷರ ಗಾತ್ರ

ಕುಶಾಲನಗರ: ಪ್ರತಿಯೊಬ್ಬರು ತಮ್ಮ ವಸಡಿನ ಆರೋಗ್ಯದ ಕಾಳಜಿ ವಹಿಸುವ ಮೂಲಕ ವಸಡಿನ ಊತ, ರಕ್ತಸ್ರಾವ ತಡೆಯಬಹುದು ಎಂದು ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಹೇಳಿದರು.

ತೊರೆನೂರು ಸೂರ್ಯೋದಯ ಪುರುಷರ ಸ್ವ-ಸಹಾಯ ಸಂಘ ಮತ್ತು ಗ್ರಾಮ ಪಂಚಾಯಿತಿ ಹಾಗೂ ಸುಳ್ಯದ ಕೆವಿಜಿ ದಂತ ಕಾಲೇಜು ಮತ್ತು ಆಸ್ಪತ್ರೆಯ ಆಶ್ರಯದಲ್ಲಿ ಈಚೆಗೆ ತೊರೆನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿಏರ್ಪಡಿಸಿದ್ದ ದಂತ ತಪಸಣಾ ಉಚಿತ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಜನರಲ್ಲಿ ಹಲ್ಲುಗಳ ರಕ್ಷಣೆ ಮತ್ತು ಅವುಗಳ ಪ್ರಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಇದಕ್ಕಾಗಿ ಹಲವು ಕಾರ್ಯಕ್ರಮ ಹಮ್ಮಿಕೊಂಡು ತಿಳಿವಳಿಕೆ ನೀಡಬೇಕು ಎಂದರು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕಾಂತಿ ಬೆಳ್ಳಿಯಪ್ಪ ಮಾತನಾಡಿ, ಹೆಚ್ಚು ಜನರಿಗೆ ವಸಡಿನ ಊತ ಮತ್ತು ದುರ್ವಾಸನೆ ಸಮಸ್ಯೆ ಕಾಡುತ್ತದೆ. ಇದಕ್ಕೆ ಬಾಯಿಯ ಸ್ವಚ್ಛತೆ ಇಲ್ಲದಿರುವುದೇ ಮೂಲ ಕಾರಣ ಎಂದರು.

ಸುಳ್ಯದ ಕೆವಿಜಿ ದಂತ ಕಾಲೇಜಿನ ಡಾ. ದರ್ಶನ್ ಮಾತನಾಡಿ, ಸ್ವಚ್ಛತೆ ಕೊರತೆಯಿಂದ ಹಲ್ಲುಗಳ ನಡುವೆ ಸೇರಿಕೊಂಡ ಆಹಾರ ಪದಾರ್ಥ ಮತ್ತು ಸೂಕ್ಷ್ಮಾಣುಗಳು ರೋಗ ಹರಡಲು ಕಾರಣವಾಗುತ್ತವೆ. ಪ್ರತಿಯೊಬ್ಬರೂ ಪ್ರತಿಕ್ಕೊಮ್ಮೆ ದಂತ ಪರೀಕ್ಷೆ ಹಾಗೂ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದರು.

ತೊರೆನೂರು ವಿರಕ್ತ ಮಠದ ಮಲ್ಲೇಶ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸೂರ್ಯೋದಯ ಸ್ವ ಸಹಾಯ ಸಂಘದ ಅಧ್ಯಕ್ಷ ಎಚ್.ಬಿ. ಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಸಿ.ಕೆ. ಇಂದಿರಮ್ಮ, ತಾ.ಪಂ. ಸದಸ್ಯೆ ಜ್ಯೋತಿ ಶಿವಣ್ಣ, ಗ್ರಾ.ಪಂ. ಅಧ್ಯಕ್ಷ ಟಿ.ಕೆ. ವಸಂತ್, ಉಪಾಧ್ಯಕ್ಷ ಪಿ.ಡಿ. ರವಿಕುಮಾರ್, ವಿಎಸ್‌ಎಸ್‌ಎನ್ ಬ್ಯಾಂಕ್ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್ ಇತರರು ಇದ್ದರು. ಟಿ.ಕೆ. ಪಾಂಡುರಂಗ ಸ್ವಾಗತಿಸಿದರು. ಕೃಷ್ಣೇಗೌಡ ನಿರೂಪಿಸಿದರು. ಕೆವಿಜಿ ಕಾಲೇಜಿನ ವೈದ್ಯಾಧಿಕಾರಿ ಡಾ.ದರ್ಶನ್ ನೇತೃತ್ವದ ತಂಡ ಸಾವಿರಕ್ಕೂ ಅಧಿಕ ಜನರ ದಂತ ತಪಾಸಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT