ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಮಾಹಿತಿ ಜಾಲತಾಣ

Last Updated 2 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಸರ್ಕಾರದ ಧನ ಸಹಾಯದಿಂದ ಕಾರ್ಯನಿರ್ವಹಿಸುವ ಮೊಬೈಲ್ ಸ್ನೇಹಿ ಆರೋಗ್ಯ ಜಾಲತಾಣವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಜಾಲತಾಣವನ್ನು ಮೊಬೈಲ್ ಮೂಲಕ  ವೀಕ್ಷಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದ್ದು.
 
ವಿವಿಧ ಬ್ರಾಂಡ್‌ಗಳ ಔಷಧಿಗಳು, ತಯಾರಿಕೆ ಕಂಪೆನಿಗಳು, ಔಷಧಿಯಲ್ಲಿ ಬಳಸಿರುವ ಸಾಮಿಗ್ರಿಗಳ ವಿವರ, ಮಾರುಕಟ್ಟೆ ದರ ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ತಾಣ ಒಳಗೊಂಡಿದೆ.  

ಈ ತಾಣವನ್ನು ದೆಹಲಿ ಮೂಲದ ವಿನೋದ್ ಕುಮಾರ್ ಮೆಮೊರಿಯಲ್ ಟ್ರಸ್ಟ್ ಅಭಿವೃದ್ಧಿ ಪಡಿಸಿದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ 20 ಲಕ್ಷ ಧನ ಸಹಾಯ ನೀಡಿದೆ. ಗ್ರಾಹಕರು ತಮ್ಮ ಮೊಬೈಲ್ ಮೂಲಕ www.­medguideindia.com  ಗೆ ಲಾಗಿನ್ ಆಗುವ ಮೂಲಕ ಮಾಹಿತಿ ಪಡೆಯಬಹುದು.

ಈ ತಾಣದಲ್ಲಿ ಆಯ್ದ ಔಷಧಿಗಳ  ಮಾರುಕಟ್ಟೆ ದರ ಮತ್ತು ಮಾಹಿತಿಗಳನ್ನು ಮಾತ್ರ ಆರಂಭದಲ್ಲಿ ಸೇರಿಸಲಾಗಿದೆ. ಗ್ರಾಹಕರ ಸಲಹೆ ಮತ್ತು ಬೇಡಿಕೆ ಆಧರಿಸಿ ಮಾಹಿತಿ ಹೆಚ್ಚಿಸಲಾಗುವುದು ಎಂದು ಗ್ರಾಹಕ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಅಗರ್‌ವಾಲ್ ತಿಳಿಸಿದ್ದಾರೆ.

ಸಾಮಾನ್ಯವಾಗಿ ವೈದ್ಯರು ಅಗ್ಗದ ದರ ಉತ್ತಮ ಗುಣಮಟ್ಟದ ಔಷಧಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ, ದುಬಾರಿ ಬ್ರಾಂಡ್‌ಗಳನ್ನೇ ಸೂಚಿಸುತ್ತಾರೆ. ಇದನ್ನು ತಪ್ಪಿಸಲು ಮತ್ತು ರೋಗಿಗಳಿಗೆ ಸರಿಯಾದ ಮಾಹಿತಿ ನೀಡಲು ಜಾಲ ತಾಣ ಪ್ರಾರಂಭಿಸಿರುವುದಾಗಿ ಹೇಳಿದ್ದಾರೆ.

ಮೊಬೈಲ್ ಇಂಟರ್‌ನೆಟ್ ಸೌಲಭ್ಯ ಇಲ್ಲದ ಸ್ಥಳಗಳಲ್ಲಿ ಬಳಕೆದಾರರಿಗೆ `ಎಸ್‌ಎಂಎಸ್~ ಮೂಲಕ ಜೌಷಧಿ ಮಾಹಿತಿ ನೀಡಲಾಗುವುದು. ಅಷ್ಟೇ ಅಲ್ಲ ಈ ತಾಣದಲ್ಲಿ ಹೊಸ ಔಷಧಿಗಳ ವಿವರ ಮತ್ತು ಆರೋಗ್ಯ ವಿಮೆಗಳ ಮಾಹಿತಿಯೂ ಇರಲಿದೆ  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT