ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಹೊತ್ತಿಗೆ: ಮಾತ್ರೆಗಳಿಲ್ಲದೆ ಗುಣ ಹೊಂದಿ

Last Updated 17 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಹೀಲ್ ವಿತೌಟ್ ಪಿಲ್
ಲೇ: ಬಿಸ್ವರೂಪ್‌ರಾಯ್ ಚೌಧರಿ, ಪ್ರ: ಡೈಮಂಡ್ ಬುಕ್ಸ್ ಮತ್ತು ರಿಲಯನ್ಸ್ ಟೈಮ್‌ಔಟ್,  ಕನ್ನಿಂಗ್‌ಹ್ಯಾಮ್ ರಸ್ತೆ, ಬೆಂಗಳೂರು. ಮೊಬೈಲ್ 09312286540. ಪುಟಗಳು 256. ಬೆಲೆ: ರೂ 250.

ಇದೊಂದು ಆರೋಗ್ಯ ಮಾರ್ಗದರ್ಶಿಯಾಗಿದ್ದು, ಓದುಗರಿಗೆ ಸಾಮಾನ್ಯ ಶೀತದಿಂದ ಹಿಡಿದು ಗಂಭೀರ ಕಾಯಿಲೆಗಳವರೆಗೂ ಯಾವ ಸಮಸ್ಯೆಯನ್ನು ಹೇಗೆ ಎದುರಿಸಬೇಕು ಎಂಬ ಬಗ್ಗೆ ಮಾಹಿತಿ ಒದಗಿಸುತ್ತದೆ. ಆಹಾರ, ಪಥ್ಯ, ವ್ಯಾಯಾಮಗಳ ಸಹಾಯದಿಂದ ಮನೋಬಲವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಕಾಯಿಲೆಯನ್ನು ಗೆಲ್ಲಬಹುದು ಎಂಬುದನ್ನು ಪುಸ್ತಕದಲ್ಲಿ ತಿಳಿಸಲಾಗಿದೆ.

ಯಾವುದೇ ಕಾಯಿಲೆ ಗುಣವಾಗಲು ಮಾತ್ರೆ-ಔಷಧಿಗಳು ಶೇ 50ರಷ್ಟು ಸಹಾಯ ಮಾಡಿದರೆ, ಅದನ್ನು ಪೂರ್ತಿಯಾಗಿ ಗುಣ ಮಾಡಲು ಮನಸ್ಸಿನ ಪಾತ್ರ ಹೆಚ್ಚಿದೆ ಎನ್ನುತ್ತಾರೆ ಲೇಖಕ ಬಿಸ್ವರೂಪ್‌ರಾಯ್ ಚೌಧರಿ.

ಕಾಯಿಲೆ ಬಗ್ಗೆ ಸೂಕ್ತ ತಿಳಿವಳಿಕೆ ಇದ್ದಾಗ ಮಾತ್ರೆಗಳಿಲ್ಲದೆ ಮನೋಬಲದಿಂದ ಶೇ 50ರಷ್ಟು ಗುಣ ಹೊಂದಬಹುದು ಎನ್ನುವ ಅವರು, ಅದು ಹೇಗೆ ಎಂಬ ಬಗ್ಗೆ ಪುಸ್ತಕದಲ್ಲಿ ವಿವರಣೆಗಳನ್ನು ನೀಡಿದ್ದಾರೆ.
 
ಪುಸ್ತಕದಲ್ಲಿ ಪ್ರತಿಯೊಂದು ಕಾಯಿಲೆಯ ಮೂಲ, ಕಾರಣ, ಪರಿಹಾರ ಮತ್ತು ಮಾರ್ಗೋಪಾಯಗಳು ಇವೆ. ಮುಖ್ಯವಾಗಿ ಹಸಿರು ತರಕಾರಿ, ಧಾನ್ಯ, ಕಾಳುಗಳು ಮಾನವನಿಗೆ ಎಷ್ಟು ಉಪಯುಕ್ತ ಎಂಬ ಬಗ್ಗೆ ಮಾಹಿತಿ ಇದೆ. ಅನೇಕ ಕಾಯಲೆಗಳಿಗೆ ಇವುಗಳಿಂದಲೇ ಪರಿಹಾರ ಸೂಚಿಸುವ ಪ್ರಯತ್ನವನ್ನು ಲೇಖಕ ವೈದ್ಯ  ಬಿಸ್ವರೂಪ್‌ರಾಯ್ ಇಲ್ಲಿ ಮಾಡಿದ್ದಾರೆ.

ಅಲ್ಲದೇ, ಇವರು ಮನಸ್ಸು ಮತ್ತು ಸ್ಮರಣೆ ಬಗ್ಗೆ 25 ಪುಸ್ತಕಗಳನ್ನು ಬರೆದಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಕುರಿತು ಕಾರ್ಯಾಗಾರಗಳನ್ನೂ ನಡೆಸುತ್ತಾರೆ.
ಈ ಮೇಲ್- indiabookofrecords@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT