ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಆರೋ'ದಿಂದ ಬೇಸಿಗೆ ಸಂಗ್ರಹ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಪುರುಷ ಮತ್ತು ಮಹಿಳೆಯರ ವಸ್ತ್ರಗಳ ಜನಪ್ರಿಯ ಬ್ರ್ಯಾಂಡ್ `ಆರೋ' ತನ್ನ ಬೇಸಿಗೆ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಬೇಸಿಗೆಯಲ್ಲಿ ಪುರುಷರಿಗಾಗಿ `ಆರೋ' ನೀಲಿ, ತಿಳಿ ಹಸಿರು ಮತ್ತು ಗುಲಾಬಿ ಬಣ್ಣದ ಅಂಗಿಗಳನ್ನು ಮಾರುಕಟ್ಟೆಗೆ ತಂದಿದೆ. ಈ ಅಂಗಿಗಳು ಬೆವರನ್ನು ಹೀರಿಕೊಂಡು ಬೇಸಿಗೆಯಲ್ಲಿಯೂ ಹಿತಾನುಭವ ನೀಡುತ್ತವೆಯಂತೆ. ಇವುಗಳ ಜತೆಗೆ  ಟೇಪರ್ಡ್‌ ಫಿಟ್‌ನ ಟ್ರೌಷರ್, ಲೈನೆನ್ ಜಾಕೆಟ್‌ಗಳ ದೊಡ್ಡ ಸಂಗ್ರಹವೂ ಇಲ್ಲಿದೆ.  

ನಾವಿಕರಿಂದ ಸ್ಫೂರ್ತಿ ಪಡೆದ ಪ್ರಿಂಟೆಡ್ ಶರ್ಟ್‌ಗಳು ಮತ್ತು ಫ್ಲಾಗ್ ಕಲರ್ ಟಿ-ಶರ್ಟ್ ಹಾಗೂ ಅಂಗಿಗಳೂ ಇಲ್ಲಿವೆ. ಇವುಗಳ ಜೊತೆಗೆ ಸ್ಮಾರ್ಟ್ ಕ್ಯಾಶುಯಲ್, ಹತ್ತಿಯ ಉಡುಪುಗಳು, ಟಾಪ್ಸ್, ಪ್ಯಾಂಟ್‌ಗಳು, ಲೈನೆನ್ ಜಾಕೆಟ್, ಜಂಪ್‌ಸೂಟ್‌ಗಳು ಲಭ್ಯ. ಆರೋ ಹೊರತಂದಿರುವ ಬೇಸಿಗೆ ಸಂಗ್ರಹ ಎಲ್ಲ ಆರೋ ಮಳಿಗೆಗಳಲ್ಲಿ ಸಿಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT