ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಪಿ ಪರ ವಕಾಲತ್ತು ವಹಿಸಬೇಡಿ

Last Updated 15 ಅಕ್ಟೋಬರ್ 2012, 5:50 IST
ಅಕ್ಷರ ಗಾತ್ರ

ಅರಸೀಕೆರೆ: `ಜನಪ್ರತಿನಿಧಿಗಳು ಸ್ವಜಾತಿ, ಪಕ್ಷ ಪ್ರೇಮದಿಂದ ಆರೋಪಿಗಳ ಪರ ವಕಾಲತು ವಹಿಸುವುದನ್ನು ಬಿಟ್ಟರೆ ಸಮಾಜದಲ್ಲಿ ಸಂಘರ್ಷ ಮರೆಯಾಗಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ಡಿವೈಎಸ್‌ಪಿ ಐ.ಜಿ. ಮಂಜುನಾಥ್ ತಿಳಿಸಿದರು.

ಪಟ್ಟಣದ ಡಿವೈಎಸ್‌ಪಿ ಕಚೇರಿ ಆವರಣದಲ್ಲಿ ಶನಿವಾರ ಸಂಜೆ ಪೊಲೀಸ್ ಇಲಾಖೆ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಆರೋಪಿ ಪರವಾಗಿ ಜನಪ್ರತಿನಿಧಿ ಗಳು ಇಲಾಖೆ ಅಧಿಕಾರಿಗಳಿಗೆ, ಸಿಬ್ಬಂದಿಗೆ ದೂರವಾಣಿ ಕರೆ ಮಾಡಿ ದೂರು ದಾಖಲಿಸಬೇಡಿ. ಅವರು ನಮ್ಮ ಪಕ್ಷದ ಕಾರ್ಯಕರ್ತ ಎಂದು ಹೇಳು ತ್ತಾರೆ. ಇದರಿಂದ ಜನರಿಗೆ ಪೊಲೀಸ್ ಇಲಾಖೆ ಮೇಲಿನ ಭಯ ಕಡಿಮೆ ಯಾಗುತ್ತದೆ. ಇದಕ್ಕೆ ಭಾರಿ ಬೆಲೆ ತೆರ ಬೇಕಾಗುತ್ತದೆ ಎಂದು ವಿಷಾದಿಸಿದರು.

ಪಟ್ಟಣದ ಜನಸಂಖ್ಯೆ ಹಾಗೂ ವಾಹನಗಳ ಸಂಖ್ಯೆ ಹೆಚ್ಚಿ ಸಂಚಾರ ಸಮಸ್ಯೆ ಬಿಗಡಾಯಿಸುತ್ತಿದೆ. ಖಾಸಗಿ ವಾಹನಗಳನ್ನು ಸವಾರರು ರಸ್ತೆಯ ಎರಡು ಬದಿಯಲ್ಲಿ ನಿಲ್ಲಿಸುವುದರಿಂದ ಪಾದಚಾರಿಗಳು ತೊಂದರೆಯಾ ಗುತ್ತಿದೆ. ಸಂಚಾರ ವ್ಯವಸ್ಥೆ ನಿರ್ವಹಣೆಗೆ ಗಮನಹರಿಸ ಲಾಗಿದೆ ಎಂದರು.

ಪುರಸಭಾ ಮಾಜಿ ಅಧ್ಯಕ್ಷೆ ಕೆ.ಎಸ್. ಸಿದ್ದಮ್ಮ, ತಾಲ್ಲೂಕು ಬಿಜೆಪಿ ಅಧ್ಯಕ್ಷ ಕಾಟೀಕೆರೆ ಪ್ರಸನ್ನಕುಮಾರ್, ಪ್ರಧಾನ ಕಾರ್ಯದರ್ಶಿ ಮನೋಜ್‌ಕುಮಾರ್, ನಗರ ಬಿಜೆಪಿ ಅಧ್ಯಕ್ಷ ವೈ.ಕೆ. ದೇವರಾಜ್, ಪುರಸಭಾ ಸದಸ್ಯರಾದ ಟಿ.ವಿ. ಅರುಣ್‌ಕುಮಾರ್, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಕಟ್ಟೆಹಳ್ಳಿ ನವೀನ್‌ಕುಮಾರ್, ಖ್ವಾಜಾ ಮೊಹೀದ್ದೀನ್, ಹಫೀಜುಲ್ಲಾ ಖಾನ್ ಮಾತನಾಡಿದರು.

ರಾಷ್ಟ್ರಮಟ್ಟಕ್ಕೆ ಆಯ್ಕೆ
ತುಮಕೂರಿನಲ್ಲಿ ಈಚೆಗೆ ನಡೆದ ಇನ್‌ಸ್ಪೈರ್ ಅವಾರ್ಡ್ ರಾಜ್ಯಮಟ್ಟದ ವಸ್ತುಪ್ರದರ್ಶನದಲ್ಲಿ ಹಾಸನ ಜ್ಲ್ಲಿಲೆ ಯಿಂದ ಭಾಗವಹಿಸಿದ್ದ 32 ವಿದ್ಯಾರ್ಥಿ ಗಳಲ್ಲಿ ಮೂವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಆಲೂರು ತಾಲ್ಲೂಕು ಎಸ್‌ಕೆಎನ್‌ಆರ್. ಪ್ರೌಢ ಶಾಲೆ, ಕೆ.ಹೊಸಕೋಟೆಯ ಹೇಮಲತಾ  ಕೆ.ಜಿ.,  ಅರಕಲಗೂಡಿನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಕಾವ್ಯ ಹಾಗೂ ಹಾಸನದ ಆದಿಚುಂಚನಗಿರಿ ಶಾಲೆಯ ಅಂಕಿತಾ ಆಯ್ಕೆಯಾದವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT