ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಟ್ ಲ್ಯಾಬ್ಸ್ ಸಮಾವೇಶ

Last Updated 6 ಜನವರಿ 2012, 19:30 IST
ಅಕ್ಷರ ಗಾತ್ರ

ಸಮಕಾಲೀನ ಕಲೆ ಜನಪ್ರಿಯಗೊಳಿಸುವ ಮತ್ತು ಯುವ ಕಲಾವಿದರನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭವಾಗಿರುವ ಆರ್ಟ್ ಲ್ಯಾಬ್ಸ್ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನಾಲ್ಕು ದಿನಗಳ ಅವಧಿಯ ವರ್ಣಚಿತ್ರ, ಶಿಲ್ಪಕಲೆ ಮತ್ತು ಗ್ರಾಫಿಕ್ಸ್‌ಗಳ ಪ್ರದರ್ಶನ-ಕಲಾ ಸಮಾವೇಶ ಆಯೋಜಿಸುತ್ತಿದೆ.

ಭಾನುವಾರದಿಂದ ಬುಧವಾರದವರೆಗೆ ನಡೆಯಲಿರುವ ಈ ಕಲಾ ಪ್ರದರ್ಶನದಲ್ಲಿ ದೇಶದ ಪ್ರತಿಭಾವಂತ ಚಿತ್ರ ಕಲಾವಿದರು ಮತ್ತು ಶಿಲ್ಪ ಕಲಾವಿದರ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ.

ಅಲೋಕ್ ಶರ್ಮಾ ಅವರ `ಮೆಮೊರೀಸ್~, ಜಯಕುಮಾರ್ ಅವರ `ಹ್ಯಾಚ್ ಆನ್ ಎಗ್~ ಮತ್ತು `ಬರ್ಡ್‌ಮನ್ ಅಂಡ್ ಫ್ಯಾಮಿಲಿ~, ಜೆ.ಎಂ.ಎಸ್. ಮಣಿ ಅವರ ಜನಪ್ರಿಯ `ಬಾದಾಮಿ ಸರಣಿ~, ಸತ್ಯಾ ಪಾಲ್ ಅವರ `ಫ್ಲೋಟಿಂಗ್ ಮೆಮೊರೀಸ್~ ಸರಣಿ ಮುಂತಾದವು ಇಲ್ಲಿವೆ.

ಶಿಲ್ಪಕಲೆಗೆ ಹೆಸರಾಗಿರುವ ರಾಮಮೂರ್ತಿ ಅವರು `ಕಪಲ್ ಒನ್~, `ಕಪಲ್ ಟು~ ಶೀರ್ಷಿಕೆಯ ಶಿಲ್ಪ ಕಲಾಕೃತಿಗಳು, ಸುನಿತಾ ವರ್ಮಾ ಅವರ ವರ್ಣಚಿತ್ರಗಳಾದ `ಪೀಸ್‌ಫುಲಿ ಪ್ಯಾಷನೇಟ್~ ಮತ್ತು `ದಿ ಬ್ಲೂ ಸ್ಪೆಕ್ಟ್ರಮ್~, ಪುರುಷೋತ್ತಮ್ ಆಡ್ವೆ ಮತ್ತು ರವೀಂದ್ರ ಸಾಳ್ವೆ ಅವರಂತಹ ಪ್ರವರ್ಧಮಾನಕ್ಕೆ ಬರುತ್ತಿರುವ ಕಲಾವಿದರ ಸೃಷ್ಟಿಗಳು ಇಲ್ಲಿ ಪ್ರದರ್ಶಿತವಾಗಲಿವೆ. 

 ಹೆಜ್ಜೆ ಗುರುತು
ಮೇ 2010ರಲ್ಲಿ ಆರ್ಟ್ ಲ್ಯಾಬ್ಸ್ 24 ಕಲಾವಿದರನ್ನು ಒಳಗೊಂಡ ಬಹು ಕಲಾವಿದರ ವರ್ಣಚಿತ್ರ ಪ್ರದರ್ಶನ ಆಯೋಜಿಸಿತ್ತು. ಆನಂತರ ಕನ್ನಡ  ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಅಭಿವ್ಯಕ್ತಿಯ ಅನುಭವ ಮತ್ತು ಪ್ರಾಯೋಗಿಕತೆ ಬಗ್ಗೆ ನಾಟಕ ಪ್ರದರ್ಶನ ನಡೆಸಿತ್ತು.

ಉದಯ್ ಸೋಸಲೆ ಅವರ ನಿರ್ದೇಶನದಲ್ಲಿ ಇಂಗ್ಲಿಷ್ ನಾಟಕ `ಬರ್ಡ್ಸ್~ ಹಾಗೂ `ಗಣೇಶನ ಸ್ವಗತ~ ಎಂಬ ಕನ್ನಡ ನಾಟಕವನ್ನು ಈ ಸಂದರ್ಭದಲ್ಲಿ ಆಯೋಜಿಸಲಾಗಿತ್ತು. ಜೂನ್ 2010ರಲ್ಲಿ ಆರ್ಟ್ ಲ್ಯಾಬ್ಸ್ ಲಿಥೊಗ್ರಾಫ್, ರೇಖಾಚಿತ್ರಗಳು ಹಾಗೂ ಫ್ಯಾಷನ್ ಆಕ್ಸಸರೀಸ್ ವಿನ್ಯಾಸದ ಪ್ರದರ್ಶನ ಏರ್ಪಡಿಸಿತ್ತು. 

 ನವೆಂಬರ್ 2010ರಲ್ಲಿ ಜೆಎಂಎಸ್ ಮಣಿ  ಅವರೊಂದಿಗೆ ಆರ್ಟ್ ಲ್ಯಾಬ್ಸ್ ಪ್ರಿಂಟ್ ಮೇಕಿಂಗ್ ಕಾರ‌್ಯಾಗಾರ ಆಯೋಜಿಸಿತ್ತು. ಜೂನ್ 2011ರಲ್ಲಿ ರಾಷ್ಟ್ರೀಯ ವರ್ಣಚಿತ್ರ ಶಿಬಿರವನ್ನು ಜೆಎಂಎಸ್ ಮಣಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ದೇಶದ 16ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಆರ್ಟ್ಸ್ ಲ್ಯಾಬ್‌ನ ಈ ಮೊದಲಿನ ಕಾರ್ಯಕ್ರಮಗಳಿಗೆಲ್ಲ ಅದ್ಭುತ ಪ್ರತಿಕ್ರಿಯೆ ದಕ್ಕಿದೆ ಎಂಬುದು ವ್ಯವಸ್ಥಾಪಕ ಅಂಬೋಣ.

ಉದ್ಘಾಟನೆ
ಆರ್ಟ್ಸ್ ಲ್ಯಾಬ್‌ನ ಈ ಕಲಾ ಸಮಾವೇಶ ಶನಿವಾರ ಸಂಜೆ 5 ಗಂಟೆಗೆ ಉದ್ಘಾಟನೆ. ಭಾನುವಾರದಿಂದ ಬುಧವಾರದವರೆಗೆ ಬೆಳಿಗ್ಗೆ 11ರಿಂದ  ಸಂಜೆ 6 ಗಂಟೆಯವರೆಗೆ ಪ್ರದರ್ಶನ ತೆರೆದಿರುತ್ತದೆ.
ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರ ಬಾ ರಸ್ತೆ.

ವ್ಯಂಗ್ಯಚಿತ್ರ ಜಗತ್ತು
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ: ಶನಿವಾರ ಕಲಾವಿದ ಜಿ.ಕೆ. ಸತ್ಯ ಅವರಿಂದ `ಇಂಡಿಯಾ ಟುಡೆ~ ವ್ಯಂಗ್ಯಚಿತ್ರಕಾರ ನರಸಿಂಹ ರಚಿಸಿರುವ ವ್ಯಂಗ್ಯಚಿತ್ರ ಮತ್ತು ಕ್ಯಾರಿಕೇಚರ್‌ಗಳ ಪ್ರದರ್ಶನ `ಹಿಡನ್ ಲೈನ್ಸ್~ ಉದ್ಘಾಟನೆ.

ಪಿ. ನರಸಿಂಹ ಉಸ್ಮಾನಿಯಾ ವಿವಿಯ ಬಿ. ಎಸ್ಸಿ. ಪದವೀಧರರು. ವಾರಂ ವಾರಂ, ಉದಯಂ, ಆಂಧ್ರ ಪ್ರಭ, ಆಂಧ್ರ ಜ್ಯೋತಿ, ಸುಪ್ರಭಾತಂ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ 1992ರಿಂದ `ಇಂಡಿಯಾ ಟುಡೆ~ಯಲ್ಲಿ ಕೆಲಸ ಮಾಡುತ್ತಿದ್ದಾರೆ. 2005ರಲ್ಲಿ ಆಂಧ್ರ ಸರ್ಕಾರದಿಂದ ಅತ್ಯುತ್ತಮ ವ್ಯಂಗ್ಯಚಿತ್ರಕಾರ ಪ್ರಶಸ್ತಿ ಪಡೆದಿದ್ದಾರೆ.
ಈ ಪ್ರದರ್ಶನ ಜನವರಿ 21ರವರೆಗೆ ನಡೆಯಲಿದೆ.

ಸ್ಥಳ: ನಂ.1, ಮಿಡ್‌ಪೋರ್ಡ್ ಹೌಸ್, ಎಂ.ಜಿ. ರಸ್ತೆ, ಬಿಗ್ ಕಿಡ್ಸ್ ಕ್ಯಾಂಪ್  ಹತ್ತಿರ,  ಬೆಳಿಗ್ಗೆ 11.30.

ಸಮೂಹ ಪ್ರದರ್ಶನ
ಗ್ಯಾಲರಿ ಸುಮುಖ ಅಬೀದ್ ಶೇಕ್, ಅನುರೇಂದ್ರ ಜಗದೇವ, ಬೋಸ್ ಕೃಷ್ಣಮಾಚಾರಿ, ಮುಖೇಶ್ ಶರ್ಮಾ, ನಿತೀಶ್ ಭಟ್ಟಾಚಾರ್ಯ, ಪರೇಶ್ ಮೈತಿ, ಎನ್. ಪುಷ್ಪಮಾಲಾ, ರವಿಕುಮಾರ್ ಕಾಶಿ, ವೆಂಕಟ ಬೋತ್ಸಾ ಮತ್ತು ಲ್ಯುಗಿ ಅನಾಸ್ತಾಸಿಯೊ ಅವರ ಕಲಾಕೃತಿಗಳು, ಶಿಲ್ಪ ಮತ್ತು ಛಾಯಾಚಿತ್ರಗಳ ಸಮೂಹ ಪ್ರದರ್ಶನ ಏರ್ಪಡಿಸಿದೆ.
ಪ್ರದರ್ಶನ ಜನವರಿ 14ರವರೆಗೆ ನಡೆಯಲಿದೆ.
ಸಮಯ: ಬೆಳಿಗ್ಗೆ 10.30ರಿಂದ ಸಂಜೆ 6.
ಸ್ಥಳ: ಸುಮುಖ ಗ್ಯಾಲರಿ, 24/10, ಬಿಟಿಎಸ್ ಡಿಪೊ ರಸ್ತೆ, ವಿಲ್ಸನ್ ಗಾರ್ಡನ್.

ದಿ ಮ್ಯುಸ್
ಕ್ರಿಮ್ಸನ್ ಆರ್ಟ್ ಗ್ಯಾಲರಿ: ಆಕಾಶ್ ಗೋಯಲ್ ಅವರ ಕಲಾಕೃತಿಗಳ ಪ್ರದರ್ಶನ `ದಿ ಮ್ಯುಸ್~.
ಸಮಯ: ಬೆಳಿಗ್ಗೆ 11ರಿಂದ ಸಂಜೆ 7.
ಸ್ಥಳ: ದಿ ಹ್ಯಾಟ್‌ವರ್ಕ್ಸ್ ಬೊಲೆವಾರ್ಡ್, ನಂ 32, ಕನ್ನಿಂಗ್‌ಹ್ಯಾಮ್ ರಸ್ತೆ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT