ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ಗಣತಿ: ಮಾರ್ಚ್‌ಗೆ ವರದಿ

ಯೋಜನಾ ಸಚಿವ ಎಸ್‌.ಆರ್.ಪಾಟೀಲ
Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಆರ್ಥಿಕ ಗಣತಿ ಕರಡನ್ನು ಮಾಸಾಂತ್ಯಕ್ಕೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಮಾರ್ಚ್‌ ವೇಳೆಗೆ ಅಂತಿಮ ವರದಿ ಲಭ್ಯವಾಗಲಿದೆ ಎಂದು ಯೋಜನಾ ಸಚಿವ ಎಸ್‌.ಆರ್.­ಪಾಟೀಲ ತಿಳಿಸಿದರು.

ಮುಖ್ಯ ಯೋಜನಾಧಿಕಾರಿ ಮತ್ತು ಜಿಲ್ಲಾ ಸಂಖ್ಯಾ ಸಂಗ್ರಹಣಾ­ಧಿಕಾರಿ­ಗಳಿಗೆ ಮಂಗಳವಾರ ಇಲ್ಲಿ ಏರ್ಪಡಿಸಿದ್ದ ಕಾರ್ಯಾಗಾರದ ನಂತರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು.

ಪ್ರಾದೇಶಿಕ ಅಸಮತೋಲನ, ಉದ್ಯೋಗ ಸೃಷ್ಟಿ, ಉತ್ಪಾದನೆ, ಸಂಘ ಟಿತ ಮತ್ತು ಅಸಂಘಟಿತ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸು ತ್ತಿರುವವರ ಮಾಹಿತಿ ಗಣತಿಯಿಂದ ಲಭ್ಯವಾಗಲಿದೆ. ಈಗಾಗಲೇ ಶೇ 70ರಷ್ಟು ಗಣತಿ ಕಾರ್ಯ ಪೂರ್ಣಗೊಂಡಿದೆ. ಜನ ಯಾವ ರೀತಿಯ ಆರ್ಥಿಕ ಚಟು ವಟಿಕೆಗಳಲ್ಲಿ ತೊಡಗಿದ್ದಾರೆ ಎಂಬುದು ಗಣತಿ ಮೂಲಕ ತಿಳಿಯಲಿದೆ. ಯಾವ ಕ್ಷೇತ್ರದಲ್ಲಿ ಹಿಂದೆ ಇದ್ದಾರೆ ಎಂಬುದನ್ನು ಆಧರಿಸಿ ಮುಂದಿನ ದಿನಗಳಲ್ಲಿ ಕೌಶಲ್ಯ ವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾ ಗುವುದು ಎಂದರು.

2005ರಲ್ಲಿ ಆರ್ಥಿಕ ಗಣತಿ ಕಾರ್ಯ ನಡೆದಿತ್ತು. ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ. ಕೇಂದ್ರದ ಸೂಚನೆ ಆಧರಿಸಿ ಗಣತಿ ಕಾರ್ಯ ಕೈಗೆತ್ತಿಕೊ ಳ್ಳಲಾಗಿದೆ ಎಂದು ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುಳಾ ತಿಳಿಸಿದರು.

ಗಣತಿ ನಂತರ ಮಾನವ ಅಭಿವೃದ್ಧಿ ವರದಿಯಲ್ಲಿ ಸಮಗ್ರವಾದ ವಿವರಗಳು ಲಭ್ಯವಾಗಲಿವೆ. ಅದನ್ನು ಆಧರಿಸಿ ತಾಲ್ಲೂಕುವಾರು ರ್‍ಯಾಂಕಿಂಗ್  ನೀಡಲಾಗುವುದು ಎಂದರು.

ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದಲ್ಲಿ (ಐಟಿಐಆರ್‌) ₨7 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗ ಲಿದೆ. ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಕಂಪೆನಿಗಳನ್ನು ಆರಂಭಿಸಲು ಹೆಚ್ಚಿನ ಉತ್ತೇಜನ ನೀಡಲಾಗುವುದು. ಆ ಮೂಲಕ ಬೆಂಗಳೂರು ಮೇಲೆ ಇರುವ ಒತ್ತಡವನ್ನು ಕಡಿಮೆ ಮಾಡಲಾಗು ವುದು ಎಂದು ಪಾಟೀಲ ಹೇಳಿದರು.

2020ರ ವೇಳೆಗೆ ಮಾಹಿತಿ ತಂತ್ರ ಜ್ಞಾನ ಕ್ಷೇತ್ರದಲ್ಲಿ ₨5 ಲಕ್ಷ ಕೋಟಿ ಬಂಡ ವಾಳ ಹೂಡಿಕೆಯಾಗಲಿದೆ. ಉದ್ಯೋಗಿ ಗಳ ಸಂಖ್ಯೆ 11 ಲಕ್ಷದಿಂದ 20 ಲಕ್ಷಕ್ಕೆ ಏರಲಿದೆ ಎಂಬ ಅವರು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT